ಚಳ್ಳಕೆರೆ ನ್ಯೂಸ್ :

ವಯಸ್ಸಾದವರಿಗೆ, ವಿಕಲ ಚೇತನರಿಗೆ ಸಾರಿಗೆ ಬಸ್ ನಲ್ಲಿ ಸೀಟ್ ಗಳು‌‌ ನಿಗಧಿಯಾಗಿರುವುದು ಕಾಣುತ್ತೆವೆ ಆದರೆ ಅಂತಹ ವಯೋ ವೃದ್ದರಿಗೆ
ನೀರು ನೆರಳು ಇಲ್ಲದ ಜಾಗಕ್ಕೆ ನಿಮ್ಮನ್ನು ಇಳಿಸಬೇಕು ಎಂದು ಕೆಎಸ್ ಆರ್ ಟಿಸಿ ಕಂಡಕ್ಟರ್ ಮಾತಿಗೆ ನೆಟ್ಟಿಗರು ‌ಸೋಶಿಯಲ್‌ಮೀಡಿಯಾದಲ್ಲಿ ತರಾಟೆ ಗೆ ತೆಗೆದುಕೊಂಡಿದ್ದಾರೆ.

ಹೌದು ಚಳ್ಳಕೆರೆಯಿಂದ ಸಾಣಿಕೆರೆ ಕಡೆ ಹೊರಟಿದ್ದ
ಕೆ ಎಸ್ ಆರ್ ಟಿ ಬಸ್ಸಿಗೆ ಪ್ರಯಾಣಿಕರೊಬ್ಬರು ಒಂದು ಕೆಜಿ
ಮೆಣಸಿನಕಾಯಿಯನ್ನು ತನ್ನ ಟವಲ್ ನಲ್ಲಿ ಕಟ್ಟಿಕೊಂಡು ಬಸ್ ನಲ್ಲಿ ಪ್ರಯಾಣ ಬೆಳೆಸಿದಿದ್ದಾನೆ

ಆದರೆ ಒಂದು ಕೆಜಿ ಮೆಣಸಿನಕಾಯಿ ಗೂ ಲಗೇಜ್ ಟಿಕೆಟ್ ಮಾಡಿಸು ಎಂದು ವಯೋ ವೃದ್ದನನ್ನು ನಿಂಧಿಸಿ
ಆ ಪ್ರಯಾಣಿಕನನ್ನು ಗಲಾಟೆ ಮಾಡಿ ದಾರಿ ಮಧ್ಯೆ
ಇಳಿಸಿ ಹೋಗಿರುವ ಘಟನೆ ವರದಿಯಾಗಿದೆ.

ಪ್ರಾಯಣಿಕೊಟ್ಟಿಗೆ ಪ್ರೀತಿ ಸಂತೋಷದಿಂದ ನಯವಾಗಿ ವರ್ತಿಸಬೇಕಾದ ಕಂಡಕ್ಟರ್ ವರ್ತನೆಗೆ ಪ್ರಾಯಣಿಕರು‌ ಖಂಡಿಸಿದ್ದಾರೆ.

ನಿಮ್ಮನ್ನ ನೀರು ನೆರಳು ಇಲ್ಲದ ಜಾಗಕ್ಕೆ ಬಿಡಬೇಕು ಎಂದು ಕೆ
ಎಸ್ ಆರ್ ಟಿ ಸಿ ಬಸ್ ನಿರ್ವಾಹಕ ಪ್ರಯಾಣಿಕರೊಬ್ಬರಿಗೆ ಈ
ರೀತಿ ಹೇಳುವ ದೃಶ್ಯವಳಿಗಳು ಸಹ ಪ್ರಯಾಣಿಕರು ತಮ್ಮ‌ಮೊಬೈಲ್ ನಲ್ಲಿ ಸೆರಿ ಹಿಡಿದಿದ್ದು ಸೋಶಿಯಲ್ ಮೀಡಿಯಾದಲ್ಲಿ‌ ಸಖತ್ ವೈರಲ್ ಹಾಗುತ್ತಿದೆ.

ಇನ್ನೂ‌ ಈ ಕಂಡಕ್ಟರ್ ದುರ್ವತನೆಗೆ ಮೇಲಾಧಿಕಾರಿಗಳು ಯಾವ ಕ್ರಮ ಕೈಗೊಳ್ಳುವರೋ‌ ಕಾದು ನೋಡಬೇಕಿದೆ.

About The Author

Namma Challakere Local News
error: Content is protected !!