ಚಳ್ಳಕೆರೆ ನ್ಯೂಸ್ :
ಮೇ 7- ರಂದು ವಿಶ್ವ ಅಥ್ಲೆಟಿಕ್ ದಿನ ಹಾಗೂ ಕಿಡ್ಸ್ ದಿನಾಚರಣೆ ಅಂಗವಾಗಿ ಮೊಟ್ಟಮೊದಲ ಬಾರಿಗೆ ಚಿತ್ರದುರ್ಗ ಜಿಲ್ಲಾ ಕ್ರೀಡಾಂಗಣದಲ್ಲಿ ಮೇ 5-2024 ರಂದು ದುರ್ಗನ್ಸ್ ಅಥ್ಲೆಟಿಕ್ಸ್ ಅಕಾಡೆಮಿ ಹಾಗೂ ಚಿತ್ರದುರ್ಗ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಇವರ ಆಶ್ರಯದಲ್ಲಿ ಕಿಡ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ನಡೆಯಲಾಯಿತು
ಈ ಒಂದು ಕ್ರೀಡಾಕೂಟಕ್ಕೆ ಮುಖ್ಯ ಅತಿಥಿಯಾಗಿ *IAAF WORLD ATHLETICS COACHES LEVEL -1 lecture. ಸುಮಾ, NS NIS ಪಟಿಯಾಲ ಸ್ಪೋರ್ಟ್ಸ್ ಅಥಾರಿಟಿ ಹಾಗೂ ಬೆಂಗಳೂರು ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಸೆಂಟ್ರಲ್,
ಇನ್ನೂ ಬೀದರ್ ಜಿಲ್ಲೆಯಿಂದ DYES ತರಬೇತಿದಾರರಾದಂತ ನೂರ್ ಅಲಿಂ, ಚಿತ್ರದುರ್ಗ ನಗರದ ಅಂತರಾಷ್ಟ್ರೀಯ ಕ್ರೀಡಾಪಟು ಸಾಧಿಕ್ ಉಲ್ಲಾ, ಜಯಣ್ಣ, ಪಾಲ್ಗೊಂಡಿದ್ದರು
ಈ ಒಂದು ಕ್ರೀಡಾಕೂಟದಲ್ಲಿ ವಿಶೇಷವಾಗಿ ಐದು ಜನ ಕ್ರೀಡಾಪಟುಗಳಿಗೆ ರಾಜ್ಯ ರಾಷ್ಟ್ರಮಟ್ಟಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ನಡೆಸಲಾಯಿತು
ಆಲೇಶ್.ಕೆ, ಪೂರ್ಣಿಮಾ.ವಿ, ಹೊಯ್ಸಳ ಬಿ, ಸಂಜಯ್ ಎಂ. ಸಿ, ಯಶವಂತ್. ಎಂ ಈ ಐದು ಜನ ಕ್ರೀಡಾಪಟುಗಳಿಗೆ ಸನ್ಮಾನ ಮಾಡಲಾಯಿತು
ಈ ಒಂದು ಕ್ರೀಡಾಕೂಟಕ್ಕೆ ಮುಖ್ಯ ಸಹಾಯಕರಾಗಿ ನವೀನ್ ಜಿ.ಪಿ ದುರ್ಗನ್ ಅಥ್ಲೆಟಿಕ್ಸ್ ಅಕಾಡೆಮಿ ಅಧ್ಯಕ್ಷರು ಹಾಗೂ ಅಪ್ಪು ಸಿಮೆಂಟ್ಸ್ ಪೇಂಟ್ಸ್ ಆಂಡ್ ಹಾರ್ಡ್ವೇರ್ಸ್ ಚಳ್ಳಕೆರೆ ಇವರ ಶಾಪ್ ವತಿಯಿಂದ ಸಹಾಯಧನ ನೀಡಲಾಯಿತು,
ಈ ಕ್ರೀಡಾ ಕೂಟವನ್ನು
ದುರ್ಗನ್ ಅಥ್ಲೆಟಿಕ್ಸ್ ಅಕಾಡೆಮಿಯ ತರಬೇತಿದಾರರು ಹಾಗೂ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ತರಬೇತಿದಾರರಾದಂತ ನಾಗರಾಜ್, NS, NIS ಪಂಜಾಬಿನ ಪಟಿಯಾಲದಲ್ಲಿ
ಪಡೆದುಕೊಂಡು ಈ ಕ್ರೀಡಾಕೂಟಕ್ಕೆ ಭಾರತ ಸರ್ಕಾರದ ಅಡಿಯಲ್ಲಿರುವ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ, ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಮಾನ್ಯತೆ ಪಡೆದು ಈ ಕ್ರೀಡಾಕೂಟವನ್ನು ನಡೆಸಿದ್ದಾರೆ,
ಈ ಕ್ರೀಡೆಯಲ್ಲಿ ಸರಿಸುಮಾರು 70 ಕ್ರೀಡಾಕೂಟಗಳು ಭಾಗವಿಸಿದ್ದಾರೆ,
ವಿಶ್ವ ಅಥ್ಲೆಟಿಕ್ಸ್, ಒಲಂಪಿಕ್ಸ್ ಕ್ರೀಡಾಕೂಟ ಆದ
ರೋಜರ್ ಬ್ಯಾನಿಸ್ಟರ್ ನೆನಪಿಗೋಸ್ಕರ ವರ್ಲ್ಡ್ ಮೈಲ್ ಚಾಲೆಂಜ್ ರನ್
ವಿಶ್ವದಲ್ಲಿ ಎಲ್ಲಾ ಕಡೆ ಮಾಡಬೇಕೆಂದು ವಿಶ್ವ ಅಥ್ಲೆಟಿಕ್ಸ್ ಫೆಡರೇಶನ್ ಮೆಂಬರ್ಸ್ ಗೆ ತಿಳಿಸಿದೆ,
ಬೆಳಗಿನ ಜಾವ 5 ಗಂಟೆಗೆ ಸರಿಯಾಗಿ ಅನ್ನಪೂರ್ಣೇಶ್ವರಿ ಟೆಂಪಲ್ ಆಶ್ರಮದಿಂದ ಅಮೃತ ಕಾಲೇಜ್ ಆಯುರ್ವೇದಿಕ್, ಜಿಪಂ. ಆಫೀಸ್ ಮುಂಬಾಗ ಬಂದು ಸ್ಟೇಡಿಯಂ ಮುಂಬಾಗ ಬುದ್ಧ ಸ್ಟಾಚು ಮುಂದೆ ಕೊನೆ ಮಾಡಲಾಯಿತು.
ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಫಾತಿರಾಜನ್ ಕಲ್ಲೇಶ್ ನಿರಂಜನ್ ಮೂರ್ತಿ ಸಹ ಪಾಲ್ಗೊಂಡಿದ್ದರು,
ಕ್ರೀಡೆಗೆ ಮುಖ್ಯವಾಗಿ ಬ್ಯಾಂಕ್ ಆಫ್ ಬರೋಡ ಮ್ಯಾನೇಜರ್ ವೆಂಕಟೇಶ್ ಬಿ ಎಸ್ , ಬ್ಯಾಂಕ್ ಕಡೆಯಿಂದ ಸಹಾಯ ಮಾಡಿದ್ದಾರೆ, ಹಾಗೆಯೇ ಎಸ್ ಬಿ ಐ ಬ್ಯಾಂಕ್ ಚಿತ್ರದುರ್ಗ ಬ್ರಾಂಚ್ ಮ್ಯಾನೇಜರ್
ತನ್ವೀರ್ ಅಹಮದ್ ಅವರ ವೈಯಕ್ತಿಕವಾಗಿ ಸಹಾಯ ಮಾಡಿದ್ದಾರೆ.