ಮೀಸಲಾತಿ ವಿರೋಧಿ ಬಿಜೆಪಿ ಪಕ್ಷಕ್ಕೆ ದಿಕ್ಕಾರ ಹೇಳಿದ ಕಾಡುಗೊಲ್ಲ ಸಮುದಾಯದ ಅಧ್ಯಕ್ಷ ಶಿವು ಯಾದವ್
ಚಳ್ಳಕೆರೆ
ಬಿಜೆಪಿ ಆಡಳಿತದಲ್ಲಿ ಶೋಷಿತರು ಅಲೆಮಾರಿ ಜನಾಂಗ ಹಾಗೂ ಹಿಂದುಳಿದ ವರ್ಗದ ಕಾಡುಗೊಲ್ಲರ ಸಮುದಾಯಕ್ಕೆ ಎಸ್ ಟಿ ಮೀಸಲಾತಿ ಕೊಡುತ್ತೇವೆ ಎಂದು ಬಿಜೆಪಿಯ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸುಗ್ರೀವಾಜ್ಞೆ ಹೊರಡಿಸಿ ಮೀಸಲಾತಿ ರದ್ದುಗೊಳಿಸಿದ್ದಾರೆ,
ಎಂದು ರಾಜ್ಯ ಕಾಡುಗೊಲ್ಲ ಸಮುದಾಯದ ರಾಜ್ಯಾಧ್ಯಕ್ಷ ಶಿವು ಯಾದವ್ ಹೇಳಿದರು,
ಇವರು ನಗರದ ಕಾಂಗ್ರೆಸ್ ಶಾಸಕ ಟಿ ರಘುಮೂರ್ತಿ ರವರ ಮನೆಯಲ್ಲಿ ಪತ್ರಕರ್ತರೊಂದಿಗೆ ಸಂವಾದ ನಡೆಸಿ ಮಾತನಾಡಿದ ಇವರು,
ನಮ್ಮ ಕಾಡುಗೊಲ್ಲ ಸಮುದಾಯವೂ ನಮ್ಮ ನೆಲಗಟ್ಟಿನ ಸಂಸ್ಕೃತಿಯಲ್ಲಿ ಅಲೆಮಾರಿಗಳಾಗಿ ಜೀವನ ನಡೆಸಿ ಸ್ವಾಭಿಮಾನಿಯಾಗಿ ಬದುಕುತ್ತಿದ್ದೇವೆ ,
ಈ ಹಿನ್ನಲೆಯಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕಾಡುಗೊಲ್ಲರ ಬುಡಕಟ್ಟು ಸಂಸ್ಕೃತಿಯನ್ನು ಅರೆತು 2014ರಿಂದ 2024ರವರೆಗೂ ನಮ್ಮ ಸಮುದಾಯವು ಸತತ ಹೋರಾಟ ಮಾಡಿಕೊಂಡು ಬಂದಿದೆ ,
ನಮ್ಮ ಕಾಡುಗೊಲ್ಲ ಬುಡಕಟ್ಟು ಸಮುದಾಯಕ್ಕೆ ಎ,ಸ್ಟಿ, ಮೀಸಲಾತಿ ಕೊಡಿಸಲು ಅಂದಿನ ಬಿಜೆಪಿ ಸರ್ಕಾರ ಮೀನಮೇಶ ಮಾಡಿ ನಮ್ಮನ್ನು ದೂರ ತಳ್ಳಿದೆ ,
ಈ ಒಂದು ನಿಟ್ಟಿನಲ್ಲಿ ನಮ್ಮ ಸಮುದಾಯಕ್ಕೆ ಬಿಜೆಪಿ ಪಕ್ಷ ವಚನ ಭ್ರಷ್ಟತೆಯನ್ನು ಮಾಡಿದೆ,
ಈ ಹಿನ್ನಲೆಯಲ್ಲಿ ಬರುವ ಲೋಕಸಭಾ ಚುನಾವಣೆಯಲ್ಲಿ ಹಿಂದುಳಿದ ವರ್ಗ ಕಾಡುಗೊಲ್ಲ ಸಮುದಾಯಕ್ಕೆ ಆಶ್ರಯ ನೀಡಿದ ಸಿದ್ದರಾಮಯ್ಯ ನವರ ಸರ್ಕಾರಕ್ಕೆ ವೋಟು ನೀಡುವುದಾಗಿ ತಿಳಿಸಿದರು,
ಇನ್ನು ಈ ವೇಳೆ ಡಾಕ್ಟರ್ ದೊಡ್ಡಮಲ್ಲಯ್ಯ ಮಾತನಾಡಿ ಬಿಜೆಪಿ ಸರ್ಕಾರ ಭ್ರಷ್ಟ ಸರ್ಕಾರವಾಗಿದ್ದು, ಹಿಂದುಳಿದ ಅಲೆಮಾರಿ ಸಮುದಾಯಗಳಿಗೆ ಮೀಸಲಾತಿ ಕೊಡದೆ ಕೇಂದ್ರ ಸರ್ಕಾರದ ಮೋದಿ ಒಬ್ಬ ದೇಶದ ಸರ್ವಾಧಿಕಾರಿಯಾಗಿದ್ದಾರೆ,
ಮೋದಿಜಿ ಅವರಿಗೆ ದೊಡ್ಡ ಸಮುದಾಯಗಳು ಮಾತ್ರ ಕಣ್ಣಿ ಕಾಣುತ್ತವೆ ಹಿಂದುಳಿದ ಅಲೆಮಾರಿ ಬುಡಕಟ್ಟು ಸಮುದಾಯಗಳನ್ನು ಮೀಸಲಾತಿ ಕೊಡದೆ ಬುಡಕಟ್ಟು ಸಮುದಾಯಗಳಿಗೆ ಮಾರಕವಾಗಿದ್ದಾರೆ,
ಇಂತಹ ಬಿಜೆಪಿ ಪಕ್ಷವನ್ನು ಬರುವ ಚುನಾವಣೆಯಲ್ಲಿ ನಮ್ಮ ಕಾಡುಗೊಲ್ಲ ಸಮುದಾಯವು ದೂರ ಇಡಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು,
ಈ ಸಂದರ್ಭದಲ್ಲಿ ಕಾಡುಗೊಲ್ಲ ಸಮುದಾಯದ ರಾಮಣ್ಣ, ಬಸವರಾಜ್, YPR ಪ್ರಸನ್ನ ಕುಮಾರ್, ಚೇತನ್ ಕುಮಾರ್ ಸೇರಿದಂತೆ ಅನೇಕ ಮುಖಂಡರು ಭಾಗಿಯಾಗಿದ್ದರು