ಸಿಡಿಲಿನ ಸೆಳೆತಕ್ಕೆ ಸಿಲುಕಿ ಇಬ್ಬರು ಯುವಕರು ಪ್ರಾಣಪಾಯದಿಂದ ಪಾರು
ನಾಯಕನಹಟ್ಟಿ:: ಸಿಡಿಲಿನ ಸೆಳೆತಕ್ಕೆ ಸಿಲುಕಿ ಇಬ್ಬರು ಯುವಕರು ಪ್ರಾಣಪಾಯದಿಂದ ಪಾರಾಗಿರುವ ಘಟನೆ ಹೋಬಳಿಯ ನೆಲೆಗೀತನಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಮದುರ್ಗ ಗ್ರಾಮದ ಹೊರ ಭಾಗದಲ್ಲಿ ಸೋಮವಾರ ಸಂಜೆ 4:00 ಸಮಯದಲ್ಲಿ ಜರಗಿದ ಘಟನೆಯಿಂದ ಪಾರಾಗಿದ್ದಾರೆ.
ಸಿಡಿಲಿನ ಸ್ವರ್ಶಕ್ಕೆ ಸಿಲುಕಿದ ಹಿನ್ನೆಲೆಯಿಂದ ಇಬ್ಬರು ಯುವಕರಿಗೆ ಗಾಯಗಳು ಆಗಿದ್ದು ಗಾಯಾಳು ಯುವಕರನ್ನು ನಾಯಕನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.
ರಾಮದುರ್ಗ ಗ್ರಾಮದ ಸುಮಾರು 25 ವರ್ಷದ ರಾಮ ಹಾಗೂ 30 ವರ್ಷದ ಮಂಜುನಾಥ್ ರವರು ಸಿಡಿಲಿನ ಚಳಿತಕ್ಕೆ ಸಿಲುಕಿದ ಹಿನ್ನೆಲೆಯಿಂದ ಇಬ್ಬರಿಗೂ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನೂ ಕುದಾಪುರ ಕೆ ಜಿ ಪ್ರಕಾಶ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ಪ್ರಭಾಕರ್ ಚನ್ನಬಸಯ್ಯನಹಟ್ಟಿ ಬಿ ಬಿ ಬೋಸಯ್ಯ, ಹಟ್ಟಿಪಾಲಯ್ಯ, ಬೋರಯ್ಯ, ಭೀಮನಕೆರೆ ಗಿಡ್ಡಯ್ಯ, ಚಿದಾನಂದ, ಇದ್ದರು