ಚಳ್ಳಕೆರೆ ನ್ಯೂಸ್ : ಕಾಂಗ್ರೆಸ್ ಪಕ್ಷದ ಬಗ್ಗೆ ಜನರಲ್ಲಿ ವಿಶ್ವಾಸ ಹೆಚ್ಚಾಗುತ್ತಿದ್ದು,
ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ
ಗೆಲುವು ಸಾಧಿಸಲಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು, ಮಂಗಳವಾರ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ
ಚಳ್ಳಕೆರೆ ನಗರದ 8,9,10,11,17,18, ಮತ್ತು 30,29 ನೇ ವಾರ್ಡ್
ವ್ಯಾಪ್ತಿಯಲ್ಲಿ ಪಕ್ಷದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಪರ ಮತಯಾಚನೆ
ಮಾಡಿದರು.
ರಹೀಂನಗರದ ಮುಸ್ಲಿಂ ಸಮಾಜದ ಬಂಧುಗಳು ಸಮಾಜದ
ಪರವಾಗಿ ಶಾಸಕರಿಗೆ ಪ್ರಚಾರದ ಸಂದರ್ಭದಲ್ಲೇ ಗೌರವ
ಸಮರ್ಪಿಸಿದರು.
ಕ್ಷೇತ್ರದಲ್ಲಿ ಮೂರು ದಿನ ಪ್ರಚಾರ ಮುಕ್ತಾಯ
ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ ಮೂರು
ಸುತ್ತಿನ ಪ್ರಚಾರ ಕೈಗೊಂಡಿದ್ದು, ಈ ಬಾರಿ ಪ್ರತಿಯೊಬ್ಬ ಮತದಾರನ
ಮನೆ, ಮನೆಗೂ ಭೇಟಿ ನೀಡಿ ಪಕ್ಷದ ಭರವಸೆಗಳ ಬಗ್ಗೆ ಕರಪತ್ರ
ನೀಡಲಾಗಿದೆ.
ಕಾಂಗ್ರೆಸ್ ಪಕ್ಷದ ಬಗ್ಗೆ ಜನರಲ್ಲಿ ವಿಶ್ವಾಸ ಹೆಚ್ಚಾಗುತ್ತಿದ್ದು,
ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ
ಗೆಲುವು ಸಾಧಿಸಲಿದೆ ಎಂದರು.
ಈದೇ ಪ್ರಚಾರ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಕೆ.ವೀರಭದ್ರಪ್ಪ, ಜಿ.ಟಿ.ಶಶಿಧರ, ಕೆಎಂಎಫ್ ನಿರ್ದೇಶಕ ಸಿ.ವೀರಭದ್ರಬಾಬು, ಗ್ಯಾರಂಟಿ ಸಮಿತಿ ತಾಲ್ಲೂಕು ಅಧ್ಯಕ್ಷ
ಗದ್ದಿಗೆ ತಿಪ್ಪೇಸ್ವಾಮಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ
ಬಿ.ಪಿ.ಪ್ರಕಾಶ್‌ಮೂರ್ತಿ, ಟಿ.ರವಿಕುಮಾರ್, ಅನ್ವರ್ ಮಾಸ್ಟರ್,
ಮುಜೀಬುಲ್ಲಾ, ನಗರಸಭಾ ಸದಸ್ಯರಾದ ಎಂ.ಜೆ.ರಾಘವೇಂದ್ರ,
ಬಿ.ಟಿ.ರಮೇಶ್‌ಗೌಡ, ಸುಜಾತಪಾಲಯ್ಯ ಎಚ್.ಎಸ್.ಸೈಯದ್, ಮೂಡಲಗಿರಿಯಪ್ಪ
ಬಿ.ಪಿ.ಪ್ರಕಾಶ್‌ಮೂರ್ತಿ ಮನು, ಬಿ.ಎಂ.ಭಾಗ್ಯಮ್ಮ , ಲಕ್ಷ್ಮಿದೇವಿ,
ಗೀತಾಬಾಯಿ, ಭಾಗ್ಯಲಕ್ಷ್ಮಿ ಮಂಜಮ್ಮ, ಸೌಭಾಗ್ಯಮ್ಮತಿಪ್ಪೇಸ್ವಾಮಿ,
ಮುಂತಾದವರು ಉಪಸ್ಥಿತರಿದ್ದರು.