ಚಳ್ಳಕೆರೆ ನ್ಯೂಸ್ :
ಹುಬ್ಬಳ್ಳಿಯ
ನೇಹಾ ಹತ್ಯೆ ಪ್ರಕರಣ ಖಂಡಿಸಿ ಚಳ್ಳಕೆರೆ ನಗರದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ ನೇಹಾ ಆತ್ಮಕ್ಕೆ ಶಾಂತಿ ಸಿಗಲೆಂದು ಕ್ಯಾಂಡಲ್ ಬೆಳಗಿಸಿದರು.
ಇನ್ನೂ ಚಳ್ಳಕೆರೆ ನಗರದ ವಾಲ್ಮೀಕಿ ವೃತ್ತದಲ್ಲಿ ಬೃಹತ್ ಸಂಖ್ಯೆಯಲ್ಲಿ ಸೆರಿದ ಮಹಿಳೆಯರು
ಹುಬ್ಬಳ್ಳಿಯ ನೇಹಾ ಹಿರೇಮಠ ಅವರ ಹತ್ಯೆ ಈಡೀ ರಾಜ್ಯವೇ ತಲೆ ತಗ್ಗಿಸುವಂತಾಗಿದೆ
ಇದರಿಂದ ನಮ್ಮ ಹೆಣ್ಣು ಮಕ್ಕಳಿಗೆ ರಾಜ್ಯದಲ್ಲಿ ಭದ್ರತೆ ಇಲ್ಲವಾಗಿದೆ, ಇದರಿಂದ ಮಹಿಳೆಯರಿಗೆ ತುಂಬಾ ನೋವುಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಾತಾಡಿದ, ನಗರಸಭೆ ಮಾಜಿ ನಾಮನಿರ್ದೇಶನ ಸದಸ್ಯೆ ಜಗದಾಂಭ, ಕಳೆದ 10
ವರ್ಷಗಳ ಹಿಂದೆ ಬಿಹಾರದಲ್ಲಿ ನಡೆಯುತ್ತಿದ್ದ ದೌರ್ಜನ್ಯ ಹಾಗೂ
ಅತ್ಯಾಚರಗಳು ರಾಜ್ಯದಲ್ಲಿ ನಡೆಯುತ್ತಿವೆ.
ಕಾಂಗ್ರೇಸ್ ಸರ್ಕಾರ ಬಂದ ಮೇಲೆ,
ಎಂಟು ಯುವಕ ಯುವತಿಯರ ಹತ್ಯೆಯಾಗಿದೆ. ಕಾಂಗ್ರೆಸ್ ಸರ್ಕಾರ
ಹಿಂದೂ ಮಹಿಳೆಯರ ರಕ್ಷಣೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕಿಡಿಕಾರಿದರು.
ಇದೇ ಸಂಧರ್ಭದಲ್ಲಿ ನೂರಾರು ಮಹಿಳೆಯರು, ಕ್ಯಾಡಂಲ್ ಹಿಡಿದು ನೇಹಾ ಆತ್ಮಕ್ಕೆ ಶಾಂತಿಕೋರಿದರು.