ಚಳ್ಳಕೆರೆ ನ್ಯೂಸ್ : ರಾಜ್ಯದಲ್ಲಿ ಹಿಂದೂ ಮಕ್ಕಳನ್ನು ಕೊಲೆಗೈಯುವುದು ಹೇರಳವಾಗಿದೆ.
ಇದರಿಂದ ರಾಜ್ಯದಲ್ಲಿ ಅಭದ್ರತೆ ಕಾಡುತ್ತಿದೆ, ಎಂದು ತಾಲೂಕು ಬಿಜೆಪಿ ಮಂಡಲದ ಸೂರನಹಳ್ಳಿ ಶ್ರೀನಿವಾಸ್ ರಾಜ್ಯಸರಕಾರದ ವಿರುದ್ಧ ಕಿಡಿಕಾರಿದ್ದಾರೆ.
ರಾಯಚೂರು ಜಿಲ್ಲೆಯ ಯಾದಗಿರಿಯ ಹಿರೇಅಗಸಿಯಲ್ಲಿ ಹಿಂದೂ ಯುವಕ ರಾಕೇಶ್ ಮಾದಿಗ ಯುವಕನನ್ನು ಮುಸ್ಲಿಂ ಗುಂಪೊಂದು ಕೊಲೆಮಾಡಿರುವುದು ಅಕ್ಷಮ್ಯ ಅಪರಾದ, ಆದ್ದರಿಂದ ತಪ್ಪಿಸ್ಥರಿಗೆ ಉಗ್ರವಾದ ಶಿಕ್ಷೆ ಹಾಗೂ ರಾಕೇಶ್ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು,
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್, ಬ್ರದರ್ಸ್ ಸರಕಾರ ಎಂದು ಹೇಳುತ್ತಿದೆ, ಆದರೆ ರಾಜ್ಯದಲ್ಲಿ ಭದ್ರತೆ ಇಲ್ಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಳ್ಳಕೆರೆ ನಗರದಲ್ಲಿ ತಹಶಿಲ್ದಾರ್ ರೇಹಾನ್ ಪಾಷಗೆ ಮನವಿ ಸಲ್ಲಿಸಿ ಮಾತನಾಡಿದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಈ ಕೂಡಲೇ ಕೊಲೆಯಾದ ರಾಕೇಶ್ ಮಾದಿಗ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಿ ಹಾಗೂ ಕುಟುಂಬಕ್ಕೆ ಪರಿಹಾರ ಕೊಡಿಸಬೇಕೆಂದು, ಚಳ್ಳಕೆರೆ ತಾಲೂಕು ಮಾದಿಗ ದಂಡೋರ ಹಾಗೂ ಹೋರಾಟ ಸಮಿತಿ ಎಲ್ಲಾ ಪದಾಧಿಕಾರಿಗಳು ಒತ್ತಾಯ ಮಾಡಿದ್ದಾರೆ.
ಇದೆ ಸಂದರ್ಭದಲ್ಲಿ ಮಾದಿಗ ದಂಡೋರ ತಾಲೂಕು ಅಧ್ಯಕ್ಷ ಆರ್ ಕಾಂತರಾಜ್, ಆರ್.ಡಿ.ಮಂಜಣ್ಣ, ದ್ಯಾವರನಹಳ್ಳಿ ಸುರೇಶ್, ರಾಮಾಂಜನೇಯ, ಶ್ರೀನಿವಾಸ್, ಗುರುಮೂರ್ತಿ, ಹನುಮಂತಪ್ಪ, ತಿಪ್ಪೇಸ್ವಾಮಿ, ರಮೇಶ್, ರುದ್ರಮುನಿ, ಭೂತೇಶ್, ದ್ಯಾಮರಾಜ್, ತಿಪ್ಪೇಸ್ವಾಮಿ, ಇತರರು ಪಾಲ್ಗೊಂಡಿದ್ದರು