ಚಳ್ಳಕೆರೆ ನ್ಯೂಸ್ :
ಹುಬ್ಬಳ್ಳಿ ನಗರದ ವಿದ್ಯಾರ್ಥಿನಿ ನೇಹಾ ಹಿರೇಮಠ ಇವರ
ಹತ್ಯೆಯನ್ನು ಖಂಡಿಸಿ ಇಂದು ಚಳ್ಳಕೆರೆ ನಗರದ ವಿರಶೈವ ಲಿಂಗಾಯತ ಒಕ್ಕೂಟಗಳಿಂದ ಪ್ರತಿಭಟನೆ ನಡೆಸಿ ತಹಶಿಲ್ದಾರ್ ಗೆ ಮನವಿ ಸಲ್ಲಿಸಿದರು.
ನಗರದ ಬೆಂಗಳೂರು ರಸ್ತೆಯ ಶ್ರೀ ಬಸವೇಶ್ವರ ವೃತ್ತದಿಂದ ಸಾಗಿದ ಪ್ರತಿಭಟನೆ ಮೆರವಣಿಗೆ ನಗರದ ನೆಹರು ವೃತ್ತ ಹಾಗೂ ಅಂಬೇಡ್ಕರ್ ವೃತ್ತದ ಮೂಲಕ ನೂರಾರು ಸಮುದಾಯದ ಮುಖಂಡರು, ಹಾಗೂ ಮಹಿಳೆಯರು ತಾಲೂಕು ಕಛೇರಿಗೆ ದಾವಿಸಿ ರಾಜ್ಯಪಾಲರಿಗೆ ಮನವಿಯನ್ನು ರವಾನಿಸುವಂತೆ ತಹಶಿಲ್ದಾರ್ ಗೆ
ಮನವಿ ಸಲ್ಲಿಸಿದರು.
ಇನ್ನೂ ಹತ್ಯೆ ಪ್ರಕರಣದ ಈ ತನಿಖೆಯನ್ನು
ಸಿ.ಬಿ.ಐ.ತನಿಖೆಗೆ
ಆಗ್ರಹಿಸಿ
ಆರೋಪಿಗೆ ಮರಣದಂಡನೆಯನ್ನು ವಿಧಿಸುವಂತೆ ಕೋರಿ ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಘಟಕನೆ ಸಂಬಂಧಿಸಿದಂತೆ ವಕೀಲರಾದ ಮಧುಮತಿ ಮಾತನಾಡಿ,
ಹುಬ್ಬಳ್ಳಿ ನಗರ ಬಿವಿಬಿ ಕಾಲೇಜ್‌ನ ಪ್ರಥಮ ವರ್ಷದ ಎಂ.ಸಿ.ಎ.ವಿದ್ಯಾರ್ಥಿನಿ ನೇಹಾ
ಹಿರೇಮಠ ಇವರ ಅಮಾನುಷ ಹತ್ಯೆಯನ್ನು ಚಳ್ಳಕೆರೆ ತಾಲ್ಲೂಕು ವೀರಶೈವ-
ಲಿಂಗಾಯಿತ ಸಂಘಟನೆಗಳ ಓಕ್ಕೂಟ ಈ ಮೂಲಕ ಉಗ್ರವಾಗಿ ಖಂಡಿಸುತ್ತದೆ.
ಇದಲ್ಲದೆ ಸರ್ಕಾರದ ಪ್ರತಿನಿಧಿಗಳು ಇದನ್ನು ಖಂಡಿಸದೆ ತನಿಖೆಗೆ ಮೂದಲೇ ನೇಹಾ
ಹಿರೇಮಠ ಇವರ ಜೋತೆ ಆರೋಪಿ ಸಂಬಂದ ಕಟ್ಟಿ ಹೇಳಿಕೆಗಳನ್ನ ನೀಡುವುದನ್ನು
ನಮ್ಮ ಸಮಾಜದ ಹೆಣ್ಣು ಮಕ್ಕಳ ಮೇಲಾದ ದೌರ್ಜನ್ಯವೆಂದು ಓಕ್ಕೂಟ ಬಾವಿಸುತ್ತದೆ
ಹಾಗೂ ಉಗ್ರವಾಗಿ ಖಂಡಿಸುತ್ತದೆ.
ಇಂತಹ ಹೇಳಿಕೆಗಳನ್ನು ಸಮಾಜ ಸಹಿಸುವುದಿಲ್ಲ
ಎಂದು ಈ ಮೂಲಕ ಎಚ್ಚರಿಕೆಯನ್ನು ನೀಡಲು ಬಯಸುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನೂ ಪ್ರತಿಭಟನೆ ನಿರತ ಮುಖಂಡ ಕಿಡಿಕಾರುತ್ತಾ, ನೇಹಾ ಹಿರೇಮಠ ಇವರ ತಂದೆಯ ಹೇಳಿಕೆಯಂತೆ ಸದರಿ
ತಕ್ಷಣ ಸಿ.ಬಿ.ಐ.ತನಿಖೆಗೆ ಒಳಪಡಿಸಿ ಅಮಾನುಷ ಹತ್ಯೆಯ ಹಿಂದೆ
ಇರುವ ಆರೋಪಿಗಳನ್ನು ಪತ್ತೆ ಹಚ್ಚಿ ಮರಣದಂಡನೆಯನ್ನು ವಿಧಿಸುವಂತೆ
ಅಗ್ರಹಿಸುತ್ತದೆ ಹಾಗೂ ನಮ್ಮ ಸಮಾಜದ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುವಂತೆ ಈ
ಮೂಲಕ ವಿನಂತಿಸುತ್ತದೆ. ಹಾಗೂ ತಕ್ಷಣ ಕ್ರಮಕೈಗೊಳ್ಳುವಂತೆ ಈ ಮನವಿ ಮೂಲಕ
ಒತ್ತಾಯಿಸುತ್ತೇವೆ ಎಂದರು.