ಚಳ್ಳಕೆರೆ ನ್ಯೂಸ್ :
ಪಿಡಿಒ ಅಮಾನತ್ತಿಗೆ ಒತ್ತಾಯಿಸಿ ಪ್ರತಿಭಟನೆ
ಹೊಳಲ್ಕೆರೆ ತಾಲೂಕಿನ ತೇಕಲವಟ್ಟಿ ಗ್ರಾ.ಪಂ ನಲ್ಲಿ , ಡಾ. ಬಿ. ಆರ್.
ಅಂಬೇಡ್ಕರ್ ಜಯಂತಿ ಆಚರಿಸದೆ, ಅವಮಾನ ಮಾಡಿರುವ
ಪಿಡಿಒ ಮಂಜನಾಯ್ಕನ ಮೇಲೆ ಕಾನೂನು, ಕ್ರಮ ಕೈಗೊಳ್ಳುವಂತೆ
ತೇಕಲವಟ್ಟಿ ಗ್ರಾಮಸ್ಥರು ಹಾಗೂ ಕರುನಾಡ ವಿಜಯಸೇನೆ ಡಿಸಿ
ಕಚೇರಿ ಎದುರು ಪ್ರತಿಭಟನೆ ನಡೆಸಿ, ಡಿಸಿಗೆ ಮನವಿ ಸಲ್ಲಿಸಿದರು.
ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ಮೆರವಣಿಗೆ
ಮೂಲಕ ಡಿಸಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು,
ಪಿಡಿಓ ಮಂಜನಾಯ್ಕನ ವಿರುದ್ಧ ಧಿಕ್ಕಾರ ಕೂಗಿ ಸೇವೆಯಿಂದ
ಅಮಾನತ್ತುಗೊಳಿಸಲು ಒತ್ತಾಯಿಸಿದರು.