ಚಳ್ಳಕೆರೆ ನ್ಯೂಸ್ :
ಬಿಸಿಲ ನಾಡು ಮಧ್ಯಕರ್ನಾಟಕದ ಚಳ್ಳಕೆರೆ ತಾಲೂಕಿನಲ್ಲಿ ಬೀಸಿಲಿನ ತಾಪಮಾನ ಹೆಚ್ಚಾಗಿ ಜನ ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೆ ಪರಿತಪ್ಪಿಸುವಂತಹ ಸಂದ್ಘಿದ ಪರಿಸ್ಥಿತಿ ನಿರ್ಮಾಣವಾಗಿದೆ
ಆದರೆ ಜನರಿಗೆ ಅವಶ್ಯಕವಾಗಿ ಕುಡಿಯುವ ನೀರು ಕೊಡುವ ಗ್ರಾಮ ಪಂಚಾಯತಿ ಮಾತ್ರ ಮೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕುಡಿಯನೀರಿಗೆ ಖಾಲಿಕೊಡ ಹಿಡಿದು ಗ್ರಾಪಂಗೆ ಮುತ್ತಿಗೆ
ಹಾಕಿದ ಮಹಿಳೆಯರು
ತಾಲೂಕಿನ ಹುಳ್ಳಿಕಟ್ಟೆ ಭೋವಿಕಾಲೊನಿಯಲ್ಲಿ ನಡೆದಿದೆ.
ಮಹಿಳೆಯರು
ಕುಡಿಯುವ ನೀರಿನ ಸಮಸ್ಯೆ ತಾಳಲಾರದ ರೋಸಿಹೋಗಿ
ದಿಢೀರನೆ ಗ್ರಾ. ಪಂಚಾಯಿತಿಗೆ ಖಾಲಿ ಕೊಡಗಳನ್ನು ಹಿಡಿದು
ಮುತ್ತಿಗೆ ಹಾಕಿ ಇಲ್ಲಿನ ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿದರು.
ಈ ವೇಳೆ ಪ್ರತಿಭಟನಾಕಾರು ಮಾತನಾಡಿ, ಭೋವಿಕಾಲೊನಿಯಲ್ಲಿ
ಸುಮಾರು ಐದಾರು ತಿಂಗಳಿನಿಂದ ಕೆಲ ಬೀದಿಗಳಿಗೆ ಕುಡಿಯುವ ನೀರಿನ
ಸಮಸ್ಯೆ ಎದುರಾಗಿದೆ.
ನೀರಿನ ಸಮಸ್ಯೆ ಸರಿಪಡಿಸುವಂತೆ ಇಲ್ಲಿನ ಪಿಡಿಓ ಅವರಿಗೆ ಹಲವಾರು ಸಲ ಗೋಗರೆದರೂ ಯಾವುದೇ
ಪ್ರಯೋಜನ ಆಗಿಲ್ಲ ಎಂದು ಮಹಿಳೆಯರು ದೂರಿದ್ದಾರೆ