ಚಳ್ಳಕೆರೆ : ಅಕ್ರಮ ಮಧ್ಯೆ ಮಾರಾಟಕ್ಕೆ ಕಡಿವಾಣ ಹಾಕುವ ಅಬಕಾರಿ ಇಲಾಖೆ ಕಣ್ಣು ಮುಚ್ಚಿ ಕೂತಿದೆ ಇದರಿಂದ ನಮ್ಮ ಕುಟುಂಬ ಬೀದಿಗೆ ಬಂದಿದೆ ನೀವಾದರೂ ಕಡಿವಾಣ ಹಾಕಿ ನಮ್ಮ ಸಂಸಾರದ ತಾಳಿ ಭಾಗ್ಯ ಉಳಿಸಿ ಎಂದು ಪರಿಪರಿಯಾಗಿ ಬೇಡಿಕೊಂಡ ಪ್ರಸಂಗ ಚಳ್ಳಕೆರೆ ತಾಲೂಕು ಕಚೇರಿಯಲ್ಲಿ ನಡೆದಿದೆ.
ಹೌದು ತಾಲೂಕು ಕಚೇರಿಗೆ ದೌಡಾಯಿಸಿದ ತಾಲೂಕಿನ ತಿಮ್ಮಪ್ಪನಹಳ್ಳಿ ಗ್ರಾಮದ ಸಾರ್ವಜನಿಕರು ಹಾಗೂ ಮಹಿಳೆಯರು ತಹಶೀಲ್ದಾರ್ ಗೆ ಮನವಿ ಸಲ್ಲಿಸಿ ಆಕ್ರೊಶ ವ್ಯಕ್ತಪಡಿಸಿದ್ದಾರೆ.
ನಿತ್ಯವೂ ನಮ್ಮ ಗಂಡಂದಿರು ಕುಡಿದು ಮನೆಗೆ ಬರುತ್ತಾರೆ ಇದರಿಂದ ನಮ್ಮ ಸಂಸಾರ ನೆಮ್ಮದಿ ಇಲ್ಲದೆ ದುಸ್ಥಿತಿಯಾಗಿದೆ.
ಇನ್ನೂ ಮನೆಯಲ್ಲಿ ಮಕ್ಕಳು ವ್ಯಾಸಂಗದಲ್ಲಿ ಗಮನ ಹರಿಸಿದೆ ಜಗಳದಲ್ಲಿ ಕಾಲ ಹರಣ ಮಾಡುತ್ತಿದ್ದಾರೆ. ತಾಲೂಕಿನಲ್ಲಿ ಅಬಕಾರಿ ಇಲಾಕೆ ಇದ್ದರೂ ಕೂಡ ಮೌನ ವಹಿಸಿರುವುದು ಸಾರ್ವಜನಿಕರ ಆಕ್ರೊಶಕ್ಕೆ ಕಾರಣವಾಗಿದೆ.
ಸರಕಾರ ಸಂಬಳ ಕೊಟ್ಟು ಅಕ್ರಮ ಮಧ್ಯ ಮಾರಾಟಕ್ಕೆ ಕಡಿವಾಣ ಹಾಕಿ ಸೂಕ್ತ ನಿದೇಶನದ ಮೂಲಕ ಮಧ್ಯದ ಅಂಗಡಿ ತೆರೆಯಲು ಅನುಮತಿ ನೀಡಿದೆ, ಆದರೆ ಇವರ ಕಾರ್ಯ ವೈಪಲ್ಯದಿಂದ ಗ್ರಾಮದ *ಪ್ರತಿ ಮನೆಯಲ್ಲಿ ಕೂಡ ಅಕ್ರಮ ಮಧ್ಯೆ ಮಾರಾಟದ ದಂಧೆ ಹೇರಳವಾಗಿ ಮಕ್ಕಳು ಕುಡಿತಕ್ಕೆ ಬಲಿಯಾಗಿ ಇಂದು ಗ್ರಾಮದ ಸ್ಥಿತಿ ಚಿಂತಜನಕವಾಗಿದೆ.
- ಇಂತಹ ಅಬಕಾರಿ ಇಲಾಖೆ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಂಡು ಗ್ರಾಮದಲ್ಲಿ ನಡೆಯುವ ಅಕ್ರಮ ಮಧ್ಯೆ ಮಾರಾಟಕ್ಕೆ ಕಡಿವಾಣ ಹಾಕಿ ಎಂದು ಮನವಿ ನೀಡಿದ್ದರು.
ಇದರ ಅನ್ವಯ ತಹಶೀಲ್ದಾರ ಎನ್.ರಘುಮೂರ್ತಿ ತಾಲೂಕಿನ ತಿಮ್ಮಪ್ಪಯ್ಯಹಳ್ಳಿಗೆ ಬೇಟಿ ನೀಡಿ ಅಕ್ರಮ ಮಧ್ಯೆ ಮಾರಾಟ ಮಾಡುವ ಅಂಗಡಿಗಳು ಹಾಗೂ ಖಾಸಗಿ ಮನೆಗಳ ಮೇಲೆ ದಾಳಿ ನಡೆಸಿ ಸುಮಾರು ಅಕ್ರಮ ಮಧ್ಯೆಯನ್ನು ವಶಪಡಿಸಿಕೊಂಡು ಮುಂದೆ ಈರೀತಿ ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ತಹಶೀಲ್ದಾರ್ ಎನ್.ರಘುಮೂರ್ತಿ, ಗ್ರಾಮದ ಸಾರ್ವಜನಿಕರ ಸಾಮಾಜಿಕ ಬದುಕಿನಲ್ಲಿ ಬಹಳಷ್ಟು ತೊಂದರೆಯಾಗುತ್ತದೆ ಎಂದು ಮಹಿಳೆಯರು ಹಾಗೂ ಸಾರ್ವಜನಿಕರು ಮನವಿ ಮೇರೆಗೆ ದಾಳಿ ನಡೆಸಿದ್ದೆವೆ ಮಧ್ಯೆ ಮಾರಾಟ ಮಾಡುವ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ಕೂಡ ನಡೆಸಿದ್ದೆವೆ ಇನ್ನೂ ಮುಂದಿನ ದಿನಗಳಲ್ಲಿ ಅಕ್ರಮ ಮದ್ಯೆ ಮರಾಟ ಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ನ್ಯಾಯಾಂಗ ತನಿಖೆಗೆ ಆಗ್ರಹಿಸಲಾಗುವುದು ಎಂದಿದ್ದಾರೆ.