ಚಳ್ಳಕೆರೆ : ರಾಜ್ಯ ರಾಜಾಕರಣದ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ಕ್ಷೇತ್ರದಲ್ಲಿ ತಯಾರಿ ನಡೆಯುತ್ತಿದೆ.

ಅಂತೆಯೇ ಕ್ಚೇತ್ರದ ತುಂಬೆಲ್ಲ ವಿವಿಧ ಪಕ್ಷಗಳು ತಮ್ಮ ತಮ್ಮ ಪಕ್ಷ ಸಂಘಟನೆಗೆ ಸೇರ್ಪಡೆ ಕಾರ್ಯ ಕೂಡ ಭರ್ಜರಿಯಾಗಿ ನಡೆಯುತ್ತಿದೆ ಅದರಂತೆ ಇಂದು ಜೆಡಿಎಸ್ ಪಕ್ಷಕ್ಕೆ ಸುಮಾರು 60ಜನ ವಿಶ್ವಕರ್ಮ ಸಮಾಜದಿಂದ ಪಕ್ಷ ಸೆರ್ಪಡೆಗೊಂಡರು.

ಇನ್ನೂ ಜಲಧಾರೆ ರಥಯಾತ್ರೆ ಮೂಲಕ ರಾಜ್ಯದ ತುಂಬೆಲ್ಲಾ ಕೈಗೊಂಡ ಜೆಡಿಎಸ್ ಪಕ್ಷದ ರಥಯಾತ್ರೆ ರಾಜ್ಯದಲ್ಲಿ ಬಾರೀ ಸಂಚಲ ಮೂಡಿಸಿದೆ.
ಅದರಂತೆ ಇಂದು ಜೆಡಿಎಸ್ ಪಕ್ಷ ಸಂಘಟನೆಗಳು ತಾಲೂಕಿನ ಹಲವು ದಿಕ್ಕುಗಳಿಂದ ನಡೆಯುತ್ತಿವೆ ಅದರಂತೆ ಇಂದು ನಗರದ ವಿಶ್ವಕರ್ಮ ಸಮುದಾಯದ ಸುಮಾರು 60ಜನ ಯುವಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ತಾಲೂಕು ಅಧ್ಯಕ್ಷ ಪಿ.ತಿಪ್ಪೆಸ್ವಾಮಿ, ಕ್ಷೇತ್ರದಲ್ಲಿ ನಿತ್ಯವೂ ಪಕ್ಷಕ್ಕೆ ಸೇರ್ಪಡೆಯಾಗುವವರ ಸಂಖ್ಯೆ ಹೆಚ್ಚಾಗಿದೆ ರಾಜ್ಯದಲ್ಲಿ ಕುಮಾರಸ್ವಾಮಿ ಆಡಳಿತದ ಸರ್ಕಾರ ತರಲು ಸರ್ವ ಜನರು ಕಾಯುತ್ತಿದ್ದಾರೆ, ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಆದ್ದರಿಂದ ಕ್ಷೇತ್ರದ ಜನತೆ ಅಭ್ಯರ್ಥಿ ಎಂ.ರವೀಶ್‌ರವರನ್ನು ಈ ಬಾರಿ ಕೈ ಹಿಡಿದರೆ ಕ್ಷೇತ್ರದ ಜನತೆ ಕಂಡ ಕನಸು ನನಸು ಮಾಡಲು ಹೊರಟಿದ್ದಾರೆ ಎಂದರು.

ಇನ್ನೂ ಈದೇ ಸಂಧರ್ಭದಲ್ಲಿ ಅಭ್ಯರ್ಥಿ ಎಂ. ರವೀಶ್ ಮಾತನಾಡಿ, ಕ್ಷೇತ್ರದ ತುಂಬೆಲ್ಲಾ ಒಡನಾಟ ಬೆಳೆಸಿದ್ದೆವೆ ಈ ಬಾರಿ ಜನರ ವಿಶ್ವಾಸ ನಮ್ಮ ಮೇಲೆ ಹಾಗೂ ನಮ್ಮ ಪಕ್ಷದ ಮೇಲೆಯಿದೆ, ರೈತಪರ ಯೋಜನೆಗಳೇ ನಮಗೆ ಶ್ರೀರಕ್ಷೆ ಅಂದು ಕುಮಾರಸ್ವಾಮಿ ಮುಖ್ಯ ಮಂತ್ರಿಯಾದ ವೇಳೆಯಲ್ಲಿ ರೈತರ ಸಾಲಮನ್ನಾ ಯೋಜನೆ ಈಗೇ ಹಲವಾರು ಜನಪರವಾದ ಯೊಜನೆಗಳನ್ನು ಜಾರಿಗೆ ತಂದಿದೆ ಈ ಆದ್ದರಿಂದ ಈ ಬಾರಿ ಜನರು ನಮ್ಮ ಪಕ್ಷಕ್ಕೆ ಒಲವು ತುಂಬಾ ಇದೆ ಎಂದಿದ್ದಾರೆ.

ಇಂದು ವಿಶ್ವಕರ್ಮ ಯುವಕ ಸಂಘದ ತಾಲೂಕು ಅಧ್ಯಕ್ಷ ಬಿ.ಎನ್.ಜಿ. ವೆಂಕಟೇಶ್ ನೇತೃತ್ವದಲ್ಲಿ ಸುಮಾರು 60ಜನ ಯುವಕರು ಪಕ್ಷ ಸೆರ್ಪಡೆಗೊಂಡರು, ನಾಗರಾಜ್‌ಚಾರ್, ಮಂಜುನಾಥ್‌ಚಾರ್, ನಾಗಭೂಷಣ್ ಚಾರ್, ಕುಮಾರ್, ಹೇಮಂತ, ರಾಮಣ್ಣ, ರಾಘು, ರಾಮು, ರಾಮಚಾರಿ, ಗೋಪಾಲಿ, ಚಂದ್ರಕಾಂತ, ಇತರರು ಜೆಡಿಎಸ್ ಪಕ್ಷದ ಬಾವುಟವನ್ನು ಹಿಡಿಯುವ ಮೂಲಕ ಪಕ್ಷ ಸೆರ್ಪಡೆಗೊಂಡರು.
ಈದೇ ಸಂಧರ್ಭದಲ್ಲಿ ನಗರಸಭೆ ಸದಸ್ಯ ಪ್ರಮೋದ್, ಶ್ರೀನಿವಾಸ್, ಮಾಜಿ ಅಧ್ಯಕ್ಷ ಎಸ್‌ಟಿ.ವಿಜಯ್ ಕುಮಾರ್, ಭಿಮಣ್ಣ, ಆನಂದಪ್ಪ, ಚೆನ್ನಿಗರಾಮಯ್ಯ, ವಿಜಯಣ್ಣ, ಬಾರ್ ತಿಪ್ಪಣ್ಣ, ಇತರರು ಇದ್ದರು.

About The Author

Namma Challakere Local News
error: Content is protected !!