ಚಳ್ಳಕೆರೆ : ರೈತರು ಬೆಳೆದಂತಹ ಬೆಳೆಗೆ ಪೂರಕವಾದಂಥ ಬೆಲೆ ಸಿಕ್ಕಲಿ, ರೈತನ ಬದುಕು ಹಸನವಾಗುತ್ತದೆ ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದ್ದಾರೆ.
ಚಳ್ಳಕೆರೆ ತಾಲೂಕಿನ ಚಿಕ್ಕಮ್ಮನಹಳ್ಳಿ ಹಾಗೂ ಬುಡ್ನಹಟ್ಟಿ ಮಧ್ಯೆ ರಾಷ್ಟ್ರೀಯ ಹೇದ್ದಾರಿ ಸಮೀಪ ನೂತನವಾಗಿ ಟೊಮೊಟೊ ಮಾರುಕಟ್ಟೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಲಕ್ಷ್ಮಿ ವೆಜಿಟೇಬಲ್ ಅಂಡ್ ಫ್ರೂಟ್ಸ್ ಸಂಸ್ಥೆಯವರು ಪ್ರಾರಂಭ ಮಾಡಿರುವಂತಹ ಟೊಮೆಟೊ ಖರೀದಿ ಮಾರುಕಟ್ಟೆಯಿಂದ ರೈತರು ಸದುಪಯೊಗ ಪಡಿಸಿಕೊಳ್ಳಬೇಕು, ಈ ಸಂಸ್ಥೆಯವರು ರೈತರ ಹಿತವನ್ನು ಮನದಲ್ಲಿಟ್ಟುಕೊಂಡು ರೈತರನ್ನು ಕಾಳಜಿಯಿಂದ ಈ ಸಂಸ್ಥೆಯವರು ನಿರ್ವಹಣೆ ಮಾಡಬೇಕು,
ಯಾವುದೇ ಸಂದರ್ಭದಲ್ಲೂ ಖರೀದಿಯಲ್ಲಿ ರೈತರಿಗೆ ಅನ್ಯಾಯವಾಗದ ಹಾಗೆ ನಡೆದುಕೊಳ್ಳಬೇಕು ವೈಜ್ಞಾನಿಕವಾಗಿ ರೈತರ ಬೆಳೆಯುವಂತಹ ಹಣ್ಣು ಮತ್ತು ತರಕಾರಿಗಳನ್ನು ಸಂರಕ್ಷಣೆ ಮಾಡಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು
ರೈತರುಗಳು ಕೂಡ ಗುಣಮಟ್ಟದ ಹಣ್ಣುಗಳನ್ನು ಮಾರುಕಟ್ಟೆಗೆ ಪೂರೈಸಬೇಕು ಈ ಮೂಲಕ ಸ್ವಾವಲಂಬಿಗಳಾಗಿ ಸ್ವಾಭಿಮಾನದ ಬದುಕನ್ನು ರೈತರು ಕಟ್ಟಿ ಕೊಳ್ಳಬೇಕೆಂದು ಮನವಿ ಮಾಡಿದರು
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ ಕುವೆಂಪುರವರು ಹಾಡಿದ ಗೀತೆ ನೇಗಿಲ ಮೇಲಿದೆ ಧರ್ಮ ಎನ್ನುವ ವಾಖ್ಯ ರೈತನ ಮತ್ತು ಧರ್ಮದ ಸಂರಕ್ಷಣೆ ಮಾಡುವ ಕೆಲಸವನ್ನು ಸರ್ಕಾರ ಹಾಗೂ ಇಂಥ ಸಂಸ್ಥೆಗಳು ಮಾಡಬೇಕೆಂದು ಹೇಳಿದರು.
ಸಂಸ್ಥೆಯ ಪಾಲುದಾರರಾದ ನೆರ್ಲಗುಂಟೆ ಚಂದ್ರಣ್ಣ, ವೀರಶೈವ ಸಮಾಜದ ಅಧ್ಯಕ್ಷ ಕೆ.ಸಿ.ನಾಗರಾಜು, ಕುರುಬ ಸಮಾಜದ ಅಧ್ಯಕ್ಷ ಮಲ್ಲೇಶಪ್ಪ, ಮತ್ತಿತರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.