ಚಳ್ಳಕೆರೆ ನ್ಯೂಸ್ :

ಆದರ್ಶ ಗೃಹಸ್ಥ ಜೀವನಕ್ಕೆ ಆಧ್ಯಾತ್ಮಿಕ ಸಾಧನೆ ಅಗತ್ಯ” -ಶ್ರೀ ಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅಭಿಮತ.

ಚಳ್ಳಕೆರೆಯ ಶ್ರೀ ಶಾರದಾಶ್ರಮದಲ್ಲಿ “ಗೃಹಸ್ಥ ಜೀವನದಲ್ಲಿ ಆಧ್ಯಾತ್ಮಿಕ ಸಾಧನೆ” ಎಂಬ ವಿಷಯವಾಗಿ ಮಾತನಾಡಿದ ಅವರು-ಆದರ್ಶ ಗೃಹಸ್ಥ ಜೀವನಕ್ಕೆ ಶ್ರೀ ರಾಮಕೃಷ್ಣರು ಹೇಳಿದ ವಿಚಾರಗಳಾದ “ಭಕ್ತ ಭಗವಂತನಿಗೆ ತನ್ನ ದೇಹ-ಮನ-ಪ್ರಾಣಗಳನ್ನು ಅರ್ಪಿಸುವುದು,

ದೈನಂದಿನ ಜೀವನದಲ್ಲಿ ಸರಳ ಪ್ರಾರ್ಥನೆಯನ್ನು ರೂಢಿಸಿಕೊಳ್ಳುವುದು,ಭಗವನ್ನಾಮ ಸಂಕೀರ್ತನೆಯನ್ನು ಮಾಡುವುದು, ಸದಾ ನಿತ್ಯ -ಅನಿತ್ಯ ವಿವೇಕ ವಿಚಾರ ಮಾಡುವುದು,

ಆಗಾಗ ಏಕಾಂತ ವಾಸವನ್ನು ಮಾಡುವುದು, ಇವುಗಳ ಸಮರ್ಥ ಅನುಷ್ಠಾನದಿಂದ ಮಾತ್ರ ಮಾನವ ಜೀವನದ ಉದ್ದೇಶವಾದ “ಭಗವಂತನನ್ನು ಕಾಣಬಹುದು”.ಅಲ್ಲದೆ ನಾವು ಭಗವಂತನಲ್ಲಿ ಲೌಕಿಕವಾಗಿ ಬೇಡದೆ “ಶುದ್ಧಭಕ್ತಿ”ಗಾಗಿ ಪ್ರಾರ್ಥಿಸಬೇಕು, “ಪ್ರಾರ್ಥನೆ” ಎನ್ನುವುದು “ಭಕ್ತ-ಭಗವಂತನ ನಡುವೆ ಸೇತುವೆ ಇದ್ದ ಹಾಗೆ” ಎಂದು ವಿವಿಧ ಆಧ್ಯಾತ್ಮಿಕ ಸಾಧನೆಗಳ ಬಗ್ಗೆ ವಿವರಿಸಿದರು.

ಈ ವಿಶೇಷ ಸತ್ಸಂಗ ಕಾರ್ಯಕ್ರಮದ ಮೊದಲು ಶಿವಮೊಗ್ಗದ ರಾಮಕೃಷ್ಣ -ವಿವೇಕಾನಂದ ಆಶ್ರಮದ ಅಧ್ಯಕ್ಷರಾದ  ಸ್ವಾಮಿ ವಿನಯಾನಂದ ಸರಸ್ವತಿ ಮಹಾರಾಜ್ ಮತ್ತು ಶಿವಮೊಗ್ಗ ಹಾಗೂ ತರೀಕೆರೆ ಭಕ್ತರಿಂದ ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು.               

ಈ ವಿಶೇಷ ಸತ್ಸಂಗ ಸಭೆಯಲ್ಲಿ ಬಸವರಾಜಪ್ಪ , ಗೀತಾ ವೆಂಕಟೇಶ್ , ಗೀತಾ ನಾಗರಾಜ್,ಮಾಣೆಕ್ಯ ಸತ್ಯನಾರಾಯಣ, ವೀಣಾ ಮಂಜುನಾಥ,ವಿದ್ಯಾ, ಯಶೋಧಾ ಪ್ರಕಾಶ್ ಮಂಜುಳಮ್ಮ,ಭಾರತಿ, ವನಜಾಕ್ಷಮ್ಮ, ರತ್ನಮ್ಮ ಚೆನ್ನಬಸಪ್ಪ,ಲಕ್ಷ್ಮೀ ಚೆನ್ನಕೇಶವ,ರೂಪ ಗಿರೀಶ್ ,ಯತೀಶ್.ಎಂ. ಸಿದ್ಧಾಪುರ, ಸಂತೋಷಕುಮಾರ್ ಅಗಸ್ತ್ಯ ,ಪ್ರೇಮಕುಮಾರ್, ವಿನೋದ್, ಚಳ್ಳಕೆರೆ ಹಾಗೂ ಶಿವಮೊಗ್ಗ ಮತ್ತು ತರೀಕೆರೆಯ ಭಕ್ತರು ಭಾಗವಹಿಸಿದ್ದರು.

ರಾಮುದೊಡ್ಮನೆ ಚಳ್ಳಕೆರೆ?:

About The Author

Namma Challakere Local News
error: Content is protected !!