ಕಾಂಗ್ರೇಸ್ ಪಕ್ಷ ಐದುಸುಳ್ಳು ಗ್ಯಾರಂಟಿ ಕೋಡುವುದರ ಮೂಲಕ ಅಧಿಕಾರಕ್ಕೆ ಬಂದಿದೆ : ಶಾಸಕ ಜನಾರ್ಧನರೆಡ್ಡಿ
ಚಳ್ಳಕೆರೆ : ಕಾಂಗ್ರೇಸ್ ಮುಳುಗುವ ದೋಣಿಯಾಗಿದೆ ಆದ್ದರಿಂದ ಅಂತಹ ಪಕ್ಷಕ್ಕೆ ಮತ ನೀಡಿದರೆ ನಿಮ್ಮ ಮತ ವೇಸ್ಟ್ ಹಾಗುತ್ತದೆ, ಬಿಜೆಪಿಗೆ ಮತ ನೀಡಿ, ದೇಶದ ಅಭಿವೃದ್ದಿ ಕಾಣಿ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಹೇಳಿದರು.
ಅವರು ನಗರದ ಶ್ರೀ ಗುರುರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ರೈತನಾಯಕ ಬಿಎಸ್.ಯಡಿಯೂರಪ್ಪನವರಿಂದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು, ಕಾಂಗ್ರೇಸ್ ನಲ್ಲಿ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಕೇಳಿದರೆ ಅವರ ಬಳಿ ಉತ್ತರ ಇಲ್ಲ, ಕಾಂಗ್ರೇಸ್ ಪಕ್ಷದಲ್ಲಿ ಹುಡುಕಾಡುವ ಪರಸ್ಥಿತಿ ಇದೆ.
ಬಿಜೆಪಿ ಹಾಗೂ ಜೆಡಿಎಸ್ ಗಾಳಿ ರಾಜ್ಯದಲ್ಲಿ ಬೀಸುತ್ತಿದೆ, ಭವಿಷದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ವ್ಯತ್ಯಾಸ ಆಗಂದತೆ ನೀಡಿಕೋಳ್ಳುತ್ತೆವೆ, ವಿಶ್ವವೇ ಮೆಚ್ಚುವಂತ ಪ್ರಧಾನ ನರೇಂದ್ರ ಮೋದಿಜೀ ಅಂತಹ ವ್ಯಕ್ತಿ ಈ ದೇಶದ ಮೂರನೇ ಬಾರಿ ಪ್ರಧಾನಿಯಾಗಿ ಮಾಡಲು ಅವಕಾಶ ಮಾಡಿಕೊಡಿ, ಚಿತ್ರದುರ್ಗ ಲೋಕಾಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಎಂ.ಕಾರಜೋಳ ರವರು ಗೆಲ್ಲಿಸಬೇಕು ಪ್ರಧಾನಿ ನರೇಂದ್ರ ಮೋದಿಯವರನ್ನು ಅಧಿಕಾರಕ್ಕೆ ತರಬೇಕು, ನಾನು ಮುಖ್ಯ ಮಂತ್ರಿಯಾಗಿದ್ದ ಸಂಧರ್ಭದಲ್ಲಿ ಭಾಗ್ಯಲಕ್ಷಿö್ಮÃ ಯೋಜನೆ, ಕಿಸಾನ್ ಸಮ್ಮನ್ ಯೋಜನೆ ಭವಿಷ್ಯ ಯಾರೂ ಕೂಡ ಮರೆಯುವಂತಿಲ್ಲ ಈ ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ ಎಂದರು.
ಇನ್ನೂ ಗಂಗಾವತಿ ಶಾಸಕ ಜನಾರ್ಧನರೆಡ್ಡಿ ಮಾತನಾಡಿ, ಈಡೀ ಪ್ರಪಂಚದ ಎಲ್ಲಾ ದೇಶಗಳಲ್ಲಿ ವಿಶ್ವಗುರು ಎಂದು ಹೇಳುವುದು ನಮ್ಮ ಭಾರತಕ್ಕೆ, ಆದ್ದರಿಂದ ಪ್ರಧಾನಿ ಮೋದಿಜೀ ಯವರನ್ನು ನೆನೆಯಬೇಕು, 2014ರ ಪೂರ್ವದಲ್ಲಿ ರಾಷ್ಟಿçÃಯ ಹೆದ್ದಾರಿಗಳು ಅಭಿವೃದ್ದಿ, ವಿಮಾಣ ನಿಲ್ದಾಣಗಳು, ಬಂದರ್ ಗಳು ದೇಶದ ಉದ್ದಗಲಕ್ಕೂ ಅಭಿವೃದ್ದಿ ಕಾಣುತ್ತೆಲೆ ಇವೆ,
ನಮಗೆ ಹಬ್ಬಗಳು ಬಂದರೆ ನೆಂಟರು ಇಷ್ಟರು ಸೇರಿ ಹಬ್ಬವನ್ನು ಆಚರಿಸುತ್ತೆವೆ, ಆದರೆ ಪ್ರಧಾನಿ ಮೋದಿಜೀ ದೀಪವಾಳಿಯಂದು ಸೈನಿಕರ ಜೋತೆ ಹಬ್ಬವನು ಆಚರಿಸಿದ್ದಾರೆ ಇಂತಹ ಪ್ರಧಾನಿ ಮತ್ತೆ ಎಲ್ಲಿ ಸಿಗುತ್ತಾರೆ,
ಗ್ರಾಮಗಳಲಿ ಪಲ್ಲಕ್ಕಿ ಎದುರುಗಡೆ ಬಂದರೆ ಅದರಲ್ಲಿ ದೇವರು ಇದ್ದರೆ ಮಾತ್ರ ಕೈ ಮುಗಿಯುತ್ತೆವೆ ಅದರಂತೆ ಬಿಜೆಪಿ ಪಲ್ಲಕ್ಕಿಯಲ್ಲಿ ನರೇಂದ್ರ ಮೋದಿಜೀ ಇದ್ದಾರೆ, ಆದರೆ ಕಾಂಗ್ರೇಸ್ ಪಕ್ಷದ ಪಲ್ಲಕ್ಕಿ ಖಾಲಿ ಇದೆ ಅದಕ್ಕೆ ಯಾಕೆ ಕೈ ಮುಗಿಯಬೇಕು, ಆದ್ದರಿಂದ ಕಾಂಗ್ರೇಸ್ ಪಕ್ಷಕ್ಕೆ ಹಾಕುವ ಮತ ಡೆಸ್ಟ್ ಪಿನ್‌ಗೆ ಹಾಕಿದಂತೆ ಹಾಗುತ್ತದೆ ಆದೇ ಬಿಜೆಪಿ ಪಕ್ಷದ ನರೇಂದ್ರ ಮೋದಿಗೆ ಹಾಕುವ ಮತ ಶ್ರೇಷ್ಠತೆ ಪಡೆದುಕೊಳ್ಳುತ್ತದೆ ಎಂದರು.
ರಾಜ್ಯದಲ್ಲಿ ವಿಜಯೇಂದ್ರ ನೇತೃತ್ವದ ಬಿಜೆಪಿ ಪಕ್ಷದಲ್ಲಿ ಈಡೀ ರಾಜ್ಯದಲ್ಲಿ 28 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಮೋದಿಜೀ ಕೈ ಬಲಪಡಿಸಬೇಕು, ದೇಶದ 140 ಕೋಟಿ ಜನರ ಆರ್ಶೀವಾದ ಬಿಜೆಪಿ ಮೇಲಿದೆ,
ಹೇಳಿಕೆ :
ಕಾಂಗ್ರೇಸ್ ಪಕ್ಷ ಐದು ಸುಳ್ಳು ಗ್ಯಾರಂಟಿ ಕೋಡುವುದರ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೇಸ್ ಪಕ್ಷ, ಜಾಸ್ತಿ ದಿನ ಉಳಿಯುದಿಲ್ಲ ಸುಳ್ಳು ಭರವಸೆಗಳು ಕೊಟ್ಟರು, ಕಾಂಗ್ರೆಸ್ ಸೋತರೆ ಗ್ಯಾರಂಟಿ ನಿಲ್ಲಿಸಿ ಬಿಡುತ್ತಿವೆ ಎನ್ನುತ್ತಾರೆ. ಮೈಸೂರು ಭಾಗದಲ್ಲಿ ಕಾಂಗ್ರೇಸ್ ಪಕ್ಷವನ್ನು ಗೆಲ್ಲಿಸಿ ಇಲ್ಲವಾದರೆ ನನ್ನ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಬಿಡುತ್ತಾರೆ ಎಂದು ಬೇಡಿಕೊಳ್ಳುವ ಸಂಧರ್ಭ ಮುಖ್ಯಮಂತ್ರಿಗಳಿಗೆ ಇದೆ, ಇನ್ನೂ ಕಾಂಗ್ರೇಸ್ ಪಕ್ಷ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲವಾದರೆ ಬೀದಿಗೆ ಎಳೆಯುವ ಶಕ್ತಿ ಬಿಜೆಪಿಗೆ ಇದೆ ಎಂದು ಗುಡುಗಿದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಅಂದಿನ ಮಾಜಿ ಸಚಿವರಾದ ತಿಪ್ಪೆಸ್ವಾಮಿಯವರು ಕಾರಣರಾಗಿದ್ದರು ಅಂತವರ ಮಗ ಕೆ.ಟಿ.ಕುಮಾರಸ್ವಾಮಿ ಪಕ್ಷಕ್ಕೆ ಸೇರುವುದು ಬಲ ಬಂದಿದೆ ಈ ಕ್ಷೇತ್ರದಲ್ಲಿ ಸುಮಾರು 20ಸಾವಿರಕ್ಕು ಅದಿಕ ಮತಗಳ ಅಂತರದಿAದ ಗೆಲ್ಲಿಸಬೇಕು ಎಂದರು.
ಶಾಸಕ ಬೈರಾತಿ ಬಸವರಾಜ್ ಮಾತನಾಡಿ, ಚಿತ್ರದುರ್ಗ ಜಿಲ್ಲೆ ಅಭಿವೃದ್ದಿ ಪಥದತ್ತ ಸಾಗಲು ಬಿಜೆಪಿಗೆ ಮತ ನೀಡಿ ಸಜ್ಜನ ರಾಜಾಕಾರಣಿ ಗೋವಿಂದ ಎಂ.ಕಾರಜೋಳ ಒಬ್ಬರು, ನರೇಂದ್ರ ಮೋದಿಗೆ ಕೈ ಬಲಪಡಿಸಲು ಮತ ನೀಡುವ ಮೂಲಕ ಲೋಕಸಭೆಗೆ ಕಳಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂಧರ್ಭದಲ್ಲಿ ಕೆಟಿ.ಕುಮಾರಸ್ವಾಮಿ ಮಾತನಾಡಿ, 2008 ರಲ್ಲಿ ಯಡಿಯೂರಪ್ಪನವರ ಸಾರಥ್ಯದಲ್ಲಿ ಬಿಜೆಪಿಗೆ ಸೇರಿದ್ದ ನಮ್ಮ ಅಪ್ಪ, ಅವರಂತೆ ಇಂದು ಯಡಿಯೂರಪ್ಪನವರ ನೇತೃತ್ವದಲ್ಲಿ ಮತ್ತೆ ಮರಳಿ ಬಿಜೆಪಿ ಗೂಡಿಗೆ ಸೇರಿದ್ದೆನೆ, ನನಗೆ ಸಂತಸ ತಂದಿದೆ, ಎಲ್ಲಾ ಸಮಾಜವನ್ನು ಒಗ್ಗೂಡಿಸಿಕೊಂಡು ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗೇಸ್‌ಗಿAತ ಹೆಚ್ಚಿನ ಮತಗಳನ್ನು ನೀಡುವ ಮೂಲಕ ಪಕ್ಷವನ್ನು ಗೆಲ್ಲಿಸುತ್ತೆವೆ ಎಂದರು.
ಇದೇ ಸಂಧರ್ಭದಲ್ಲಿ ಮಾಜಿ ಸಚಿವ ತಿಪ್ಪೆಸ್ವಾಮಿಯವರ ಪುತ್ರ ಕೆ.ಟಿ.ಕುಮಾರಸ್ವಾಮಿಯವರನ್ನು ಬಿಜೆಪಿ ಪಕ್ಷಕ್ಕೆ ಆತ್ಮೀಯವಾಗಿ ಪಕ್ಷದ ಬಾವುಟ ಕೊಟ್ಟು ಪಕ್ಷ ಸೇರರ್ಪಡೆ ಮಾಡಿಕೊಂಡರು.
ಇದೇ ಸಂಧರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ, ಶಾಸಕ ಬೈರತಿ ಬಸವರಾಜ್, ಮಾಜಿ ಶಾಸಕ ಜಿಎಸ್.ತಿಪ್ಪಾರೆಡ್ಡಿ, ಗಂಗವತಿ ಶಾಸಕ ಜರ್ನಾಧನರೆಡ್ಡಿ, ಜಿಲ್ಲಾ ಅಧ್ಯಕ್ಷ ಮುರುಳಿ, ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಪರಾಜಿತ ಅಭ್ಯರ್ಥಿ ಆರ್.ಅನಿಲ್‌ಕುಮಾರ್, ಕೆಟಿ.ಕುಮಾರಸ್ವಾಮಿ, ಮಾಜಿಶಾಸಕ ಬಸವರಾಜ್ ಮಂಡಿಮಠ್, ಕೆ.ಎಸ್.ನವೀನ್, ಲಿಂಗಮೂರ್ತಿ, ಜಯಪಾಲಯ್ಯ, ಮಾತೃಶ್ರೀ ಮಂಜುನಾಥ್, ಮಂಜುನಾಥ್, ನಾಗೇಶ್, ದಿನೇಶ್ ರೆಡ್ಡಿ, ಶಿವಪುತ್ರಪ್ಪ ಇತರರು ಭಾಗವಹಿಸಿದ್ದರು.