ಚಳ್ಳಕೆರೆ ನ್ಯೂಸ್ :
ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿಕಲಚೇತನರು, ಹಿರಿಯ ನಾಗರಿಕರು ಸೇರಿದಂತೆ ಸುಮಾರು 499 ಮತದಾರರು ಮನೆಯಲ್ಲೇ ಮತದಾನ ಮಾಡಲು ನೋಂದಾಯಿಸಿಕೊAಡಿದ್ದು ಆದ್ದರಿಂದ ಇಂದಿನಿAದ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 15 ಅಧಿಕಾರಿಗಳ ತಂಡಗಳಿAದ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಸಹಾಯಕ ಚುನಾವಣೆ ಅಧಿಕಾರಿ ಬಿ ಆನಂದ್ ಹೇಳಿದ್ದಾರೆ.
ಅವರು ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಮನೆಯಲ್ಲೇ ಮತದಾನ ಮಾಡುವ ಮತದಾರರಿಗೆ ಮತಪೆಟ್ಟಿಗೆಗಳನ್ನು ಅಧಿಕಾರಿಗಳಿಗೆ ನೀಡಿ ಮಾತನಾಡಿದರು, ಇನ್ನೂ ಪ್ರತಿ ಮತದಾರನ ಮನೆಯ ಅಂಗಳದಿAದ ಮತದಾನ ಮುಗಿಯುವವರೆಗೂ ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ.
ಆರೋಗ್ಯ ಸಮಸ್ಯೆ , ಅಂಗ ವೈಫಲ್ಯತೆ ಇರುವವರಿಗೆ ಸಹಾಯಕ ಮತದಾರರು ಅವರ ಸಮ್ಮುಖದಲ್ಲಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಈ ಎಲ್ಲಾನ್ನು ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ. ಅದರಂತೆ ಇಂದು 8:00 ಗಂಟೆಯಿAದ ಮತದಾರರು ನೋಂದಾಯಿಸಿಕೊAಡ ದಿನಾಂಕ ಹಾಗೂ ಆ ಸಮಯದಂದು ಮತದಾರರ ಮನ ಬಳಿಗೆ ಹೋಗಿ ಮತದಾನ ಮಾಡಿಸಲಾಗುತ್ತದೆ.

ಇನ್ನೂ ಮತದಾನದಿಂದ ಯಾರೂ ಕೂಡ ವಂಚಿತರಾಗದAತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ತಹಶೀಲ್ದಾರ್ ರೇಹಾನ್ ಪಾಷ, ಸೆಕ್ಟರ್ ಅಧಿಕಾರಿಗಳು, ಎಫ್ ಎಸ್ ಟಿ ಅಧಿಕಾರಿಗಳು, ಚುನಾವಣಾ ಅಧಿಕಾರಿಗಳು, ಸಿಬ್ಬಂದಿ ವರ್ಗ , ಹಾಜರಿದ್ದರು

About The Author

Namma Challakere Local News
error: Content is protected !!