ಚಳ್ಳಕೆರೆ ನ್ಯೂಸ್ : ಕೆರೆ ಮಣ್ಣು ನಾವು‌ ಮಾರಾಟಕ್ಕೆ ಕೇಳುತ್ತಿಲ್ಲ, ನಮ್ಮ‌ ಜಮೀನುಗಳ ಬೆಳೆಗೆ ಹಾಕಲು ಕೇಳುತ್ತೆವೆ ನಾವು ಕೂಡ ಈದೇ ಪಂಚಾಯತ್ ವ್ಯಾಪ್ತಿಯಲ್ಲಿ ಬರುತ್ತೆವೆ ಆದ್ದರಿಂದ ಕೆರೆ‌ಮಣ್ಣು‌ ನೀಡಿ‌ ಎಂದು ದೇವರೆಡ್ಡಿಹಳ್ಳಿ ಸಾರ್ವಜನಿಕರು ಧರಣಿ ಮಾಡುತ್ತಿದ್ದಾರೆ.

ಹೌದು
ಚಳ್ಳಕೆರೆ ತಾಲೂಕು ತಳಕು ಹೋಬಳಿ ದೇವರೆಡ್ಡಿಹಳ್ಳಿ ಗ್ರಾಮದ ರೈತರು ಬುಕ್ಕಾಂಬೂದಿ‌ ಕೆರೆಯ ಹೂಳೆತ್ತುವ ಫಲವತ್ತಾದ ಮಣ್ಣು ನಮ್ಮ ಜಮೀನುಗಳಿಗೆ ಕೊಡಿ,ಇಲ್ಲವಾದರೆ ಚುನಾವಣೆ ಬಹಿಷ್ಕಾರ ಮಾಡುತ್ತೆವೆ ಎಂದು ಗ್ರಾಮಸ್ಥರು ಪ್ರತಿಭಟಿಸಿದರು..

2024 ರ ಸಾರ್ವತ್ರಿಕ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡಿದಾರೆ, ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬುಕ್ಕಂಬೂದಿ ಗ್ರಾಮದ ಕೆರೆಮಣ್ಣು ರೈತರು ಹೂಳೆತ್ತಲು ( ಮಣ್ಣನ್ನು ತೆಗೆಯಲು ) ಬುಕ್ಕುಂಬೂದಿ ಗ್ರಾಮಸ್ಥರಿಂದ ಅಡ್ಡಿ ಹಾಗೂ ತಿರಸ್ಕಾರ ಮಾಡಿದ್ದಾರೆ.

ಆದ್ದರಿಂದ ಅದೇ ವ್ಯಾಪ್ತಿಗೆ ಒಳಪಡುವ ದೇವರೆಡ್ಡಿಹಳ್ಳಿಯ ರೈತರಿಗೆ ಕೆರೆ ಮಣ್ಣು ಬೇಕಾಗಿರುತ್ತದೆ ಆದ್ದರಿಂದ ಮಣ್ಣು ‌ಕೊಡಲಿಲ್ಲವಾದರೆ ಚುನಾವಣೆಯ ಮತ ಬಹಿಷ್ಕಾರ ಮಾಡುತ್ತೆವೆ ಎಂದು ರೈತ ಮುಖಂಡ
ಕೆ ವಿ ಮಲ್ಲಾರೆಡ್ಡಿ ಹೇಳಿದ್ದಾರೆ.

ಇದೇ ಸಂಧರ್ಭದಲ್ಲಿ
ಕೆಎನ್ ವಿಶ್ವನಾಥ ರೆಡ್ಡಿ,
ಜಿಟಿ ಸೋಮಶೇಖರ್ ರೆಡ್ಡಿ,
ಪಿ ಎನ್ ಮಂಜುನಾಥ ರೆಡ್ಡಿ,
ಜಿ ಎನ್ ಸುರೇಶ್ ರೆಡ್ಡಿ,
ಪಿಎಂ ಗಿರೀಶ್ ಕುಮಾರ್,
ತಿಪ್ಪಾರೆಡ್ಡಿ,
ಹೂವಿನ ರೆಡ್ಡಿ,
ಎಸ್ ಎಚ್ ಹನುಮಂತರೆಡ್ಡಿ,
ನಿಂಗರೆಡ್ಡಿ,
ಬಸವ ರೆಡ್ಡಿ
ರಾಮಾಂಜನೇಯ ರೆಡ್ಡಿ,
ಹಾಗೂ ದೇವರೆಡ್ಡಿಹಳ್ಳಿ ಗ್ರಾಮದ ರೈತರು ಹಾಗೂ ಗ್ರಾಮಸ್ಥರು ಹಾಜರಿದ್ದರು

Namma Challakere Local News
error: Content is protected !!