ಚಳ್ಳಕೆರೆ ನ್ಯೂಸ್ :
2024 ರ ಲೋಕಸಭಾ ಚುನಾವಣೆ ನಿಮ್ಮಿತ್ತ ಹಿರಿಯ ನಾಗರೀಕರ ಹಾಗೂ ವಿಕಲಚೇತನರ
ಮನೆಬಾಗಿಲಿಗೆ ಮತಹಾಕಿಸಿಕೊಳ್ಳಲು
ಅಧಿಕಾರಿಗಳು ಬರಲಿದ್ದಾರೆ.
ನಿಮ್ಮ ಮನೆಯ ಬಳಿ ಇದ್ದು ನಿಮ್ಮ ಅಮೂಲ್ಯವಾದ
ಮತಚಲಾಯಿಸುವಂತೆ ಸಹಾಯಕ ಚುನಾವಣಾಧಿಕಾರಿ ಆನಂದ್
ತಿಳಿಸಿದ್ದಾರೆ.
ಅವರು ನಗರದ ತಾಲೂಕು ಕಛೇರಿಯಲ್ಲಿ ಮತ ಹಾಕಿಸಿಕೊಳ್ಳುವ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು,
ಈಗಾಗಲೆ 499 ಮತದಾರರನ್ನು ಗುರುತಿಸಿದ್ದು 15 ತಂಡಗಳನ್ನು ರಚನೆ
ಮಾಡಿದ್ದು ಏ 13 ರಿಂದ16 ರವರೆಗೆ ವಯೋವೃದ್ದರ ಅಂಗವಿಲಕರ
ಮನೆಗಳ ಬಳಿ ಮತ ಹಾಕಿಸಿಕೊಳ್ಳಲು ಬರಲಿದ್ದಾರೆ.
ಏ.26 ರಂದು ಮೊದಲ ಹಂತ ನಡೆಯಲಿರುವ ಲೋಕಸಭಾ ಕ್ಷೇತ್ರಗಳಲ್ಲಿ
ನಾಳೆಯಿಂದ ಹಿರಿಯ ನಾಗರಿಕರ ಮತದಾನ ನಡೆಯಲಿದೆ.
ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 85 ವರ್ಷಕ್ಕಿಂತ ಮೇಲ್ಪಟ್ಟ
(ಎವಿಎಸ್ಸಿ) ಹಾಗೂ ವಿಶೇಷ ಚೇತನರಿಗೆ (40%ಕ್ಕಿಂತ ಹೆಚ್ಚು ಅಂಗವಿಲತೆ
ಉಳ್ಳ ಮತದಾರರ ಪಟ್ಟಿಯಲ್ಲಿ ಗುರುತಿಸಿರುವವರಿಗೆ) ಅಂಚೆ
ಮತದಾನದ ಮೂಲಕ ಅವಕಾಶ ಕಲ್ಪಿಸಲಾಗಿದೆ. 499 ಮತದಾರರು
ಮನೆಯಲ್ಲೇ ಮತದಾನ ಮಾಡುತ್ತೇವೆ ಎಂದು ನೋಂದಣೆ
ಮಾಡಿಕೊಂಡವರಿಗೆ ಮನೆಯಿಂದಲೇ ಗೌಪ್ಯ ಮತದಾನಕ್ಕೆ ಅವಕಾಶ
ಕಲ್ಪಿಸಲಾಗುವುದು.
ಮತದಾರರ ಮನೆಗೆ ಇಬ್ಬರು ಮತಗಟ್ಟೆ
ಅಧಿಕಾರಿಗಳು, ಭದ್ರತಾ ಸಿಬ್ಬಂದಿ, ವಿಡಿಯೋಗ್ರಾಫರ್ ಒಳಗೊಂಡಿರುವ
ಮತಗಟ್ಟೆ ತಂಡವು ಮನೆಗೆ ತೆರಳಿ ಮತದಾನ ಗುರುತಿನ ಚೀಟಿ
ಪರಿಶೀಲಿಸಲಾಗುತ್ತದೆ.
ಬಳಿಕ ಗೌಪ್ಯ ಮತದಾನಕ್ಕಾಗಿ ಅಂಚೆ
ಮತಪತ್ರದಲ್ಲಿ ಮತ ಚಲಾಯಿಸಲು ಅವಕಾಶ ಕಲ್ಪಿಸುತ್ತದೆ. ಈ ಎಲ್ಲಾ
ಪ್ರಕ್ರಿಯೆಯನ್ನು ವಿಡಿಯೋ ಮೂಲಕ ಸೆರೆಹಿಡಿಯಲಾಗುತ್ತದೆ.
ಮತಗಟ್ಟೆ ಸಿಬ್ಬಂದಿಯು ಮತಪತ್ರ ಹಾಗೂ ಮತಪೆಟ್ಟಿಗೆಗಳೊಂದಿಗೆ ಪ್ರತೀ
ಮತದಾರರ ಮನೆಗೆ ಎರಡು ಬಾರಿ ಭೇಟಿ ನೀಡುತ್ತಾರೆ. ಮುಂಚಿತವಾಗಿ
ಮಾಹಿತಿ ನೀಡಿದ ಬಳಿಕವೇ ಮತಗಟ್ಟೆ ಸಿಬ್ಬಂದಿ ಭೇಟಿ ನೀಡುತ್ತಾರೆ.
ಮಾಹಿತಿ ನೀಡಿದ ಬಳಿಕವೇ ಮತಗಟ್ಟೆ ಸಿಬ್ಬಂದಿ ಭೇಟಿ ನೀಡುತ್ತಾರೆ.
ಮೊದಲ ಬಾರಿ ಮತದಾರರು ಮನೆಯಲ್ಲಿರದಿದ್ದರೆ, ಎರಡನೇ ಬಾರಿ
ಹೋಗುತ್ತಾರೆ. ಈ ವೇಳೆ ಮತದಾರರು ಸಿಗದಿದ್ದರೆ, ಮತಕಟ್ಟೆಗೆ ಹೋಗಿ
ಮತ ಚಲಾಯಿಸಲು ಅವಕಾಶ ಇರುವುದಿಲ್ಲ ಯಾರೂ ಮತದಾನದಿಂದ
ವಂಚಿತರಾಗದೆ ನಿಮಗೆ ತಿಳಿಸಿದ ದಿನಾಂಕ ಹಾಗೂ ಸಮಯದಂದು
ಮನೆಯಲ್ಲಿಯೇ ಇದ್ದು ನಿಮ್ಮ ಅಮೂಲ್ಯವಾದ ಮತವನ್ನು
ಚಲಾಯಿಸುವಂತೆ ಸಲಹೆ ನೀಡಿದ್ದಾರೆ,
ಈ ಸಂದರ್ಭದಲ್ಲಿ ತಹಶೀಲ್ದಾರ್ ರೇಹಾನ್ ಪಾಷ ಮತಗಟ್ಟೆ
ಅಧಿಕಾರಿಗಳು ಉಪಸ್ಥಿತರಿದ್ದರು.