ಚಳ್ಳಕೆರೆ ನ್ಯೂಸ್ : ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ವರದಾನವಾಗಿದೆ, ಇಂದು ಗೃಹ ಲಕ್ಷ್ಮಿ ಯೋಜನೆ, ಶಕ್ತಿ ಯೋಜನೆ, ಉಚಿತ ಬಸ್ ಪಾಸ್ ಈಗೇ ಐದು ಗ್ಯಾರಂಟಿ ಯೋಜನೆಗಳು‌ ತುಂಬಾ ಸಹಾಯಕಾರಿಯಾಗಿವೆ ಆದ್ದರಿಂದ ‌ರಾಜ್ಯದಲ್ಲಿ‌ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತಂದ ಮತದಾರರು ದೇಶದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತ ನಡೆಸುವಂತೆ ನಿಮ್ಮ ಓಟು ಅಮೂಲ್ಯವಾದದ್ದು ಆದ್ದರಿಂದ ನಿಮ್ಮ ಮತ ಬಿಜೆಪಿ ಗೆ‌ ಹಾಕಿದರೆ ಅದು ವೇಷ್ಟು ಹಾಗುತ್ತದೆ‌ ಆದ್ದರಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು   ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ  ಟಿ ರಘುಮೂರ್ತಿ  ಹೇಳಿದರು.

ಅವರು  ಲೋಕಸಭಾ ಚುನಾವಣೆ ಅಂಗವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿಎನ್.ಚಂದ್ರಪ್ಪ ರವರ ಪರವಾಗಿ ಮತಯಾಚನೆ ಮಾಡಿ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಬೀಡು ಬಿಟ್ಟು ಮತಯಾಚನೆ‌ ನಡೆಸುತ್ತಿದ್ದಾರೆ

ಅದರಂತೆ ಚಳ್ಳಕೆರೆ ತಾಲ್ಲೂಕಿನ ಜಾಜೂರು,

ಪಗಡಲಬಂಡೆ,ಚನ್ನಮ್ಮನಾಗತಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ  ಬಿ. ಎನ್.ಚಂದ್ರಪ್ಪ ರವರ ಪರವಾಗಿ ಚುನಾವಣೆ ಪ್ರಚಾರ ಮಾಡಿದ ಅವರು

ಬಿಜೆಪಿ ಪೊಳ್ಳು ಹೇಳಿಕೆಗಳ ಮೂಲಕ ಜನರನ್ನು ದಿಕ್ಕು‌ತಪ್ಲಿಸುತ್ತಿದ್ದಾರೆ,‌ ಸುಮಾರು 70 ವರ್ಷ ಆಳ್ವಿಕೆ ಮಾಡಿದ ಕಾಂಗ್ರೆಸ್ , ಜನರ ಪರ ಅಭಿವೃದ್ಧಿ ಮಾಡುತ್ತಾ ಬಂದಿದೆ.  

ನಿಮ್ಮ ಓಟು ಅಭಿವೃದ್ಧಿಗೆ ಜನರ ಕಲ್ಯಾಣ ಮಾಡುವರರಿಗೆ ಮಾತ್ರ ಮೀಸಲು‌ ಇರಿಸಬೇಕು, ನಮ್ಮ ಕ್ಷೇತ್ರದಲ್ಲಿ ಕೂಡ ಅಂದಿನ ಸಿದ್ದರಾಮಯ್ಯ‌ ಅವಧಿಯಲ್ಲಿ‌ ತಂದ ಕೋಟಿ ಕೋಟಿ ಅನುದಾನದಿಂದ ಬಯಲು ಸೀಮೆ ಅಭಿವೃದ್ಧಿ  ಮಾಡಲು ಸಾಧ್ಯವಾಯಿತು.

ಅದರಲ್ಲಿ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ‌ವ್ಯಾಪ್ತಿಯ ಸುಮಾರು ಐದು ಬ್ಯಾರೇಜ್ ಗಳು ಇಂದು ರೈತ‌ಕುಲಕ್ಕೆ ವರದಾನವಾಗಿವೆ, ಇಂತಹ ಉರಿ‌ಬೇಸಿಗೆಯಲ್ಲಿ ಹಸಿರಾಗಿರಲು ವಾಣಿ ವಿಲಾಸ‌ಸಾಗರದ ನೀರು  ವೇದಾವತಿ‌ ಮೂಲಕ  ಕುಡಿಯುವ ನೀರಿಗಾಗಿ ಬಿಟ್ಟ ನೀರಿನ‌ಸೆಲೆ ಇಂದು ಅಂತರ್ಜಾಲ ಹೆಚ್ಚಳಕ್ಕೆ ಕಾರಣವಾಗಿದೆ.

ಈಗೇ ನೂರಾರು ಕೋಟಿಯಲ್ಲಿ ಬಯಲು ಸೀಮೆ ಅಭಿವೃದ್ಧಿ ಮಾಡಿದ ಪಕ್ಣ ಕಾಂಗ್ರೆಸ್ ಇಂತಹ ನಿಮ್ಮ ಮನೆಯ ಪಕ್ಷಕ್ಕೆ ಮತ‌ ನೀಡಿ‌  ಎಂದು ಕರೆ‌ನೀಡಿದರು

ಈ ಸಂದರ್ಭದಲ್ಲಿ ಪರಶುರಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ.ಟಿ ಶಶಿಧರ,ಕೆ.ಎಂ.ಎಫ್ ನಿರ್ದೇಶಕರಾದ  ಸಿ.ವೀರಭದ್ರ ಬಾಬು,ಮಾಜಿ ತಾಲ್ಲೂಕು ಪಂಚಾಯತಿ ಸದಸ್ಯರಾದ ಗದ್ದಿಗೆ ತಿಪ್ಪೇಸ್ವಾಮಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಗೀತ ಬಾಯಿ,ಪ್ರಭುದೇವ್,ಸಿ.ಟಿ.ಶ್ರೀನಿವಾಸ,ಚನ್ನಕೇಶವ, ಬಿ.ಕೆ.ಕಾಟಯ್ಯ, ರೆಡ್ಡಿಹಳ್ಳಿ ಶಿವಣ್ಣ,ಉಪ್ಪಾರ ಸಮಾಜದ ತಾಲ್ಲೂಕು ಅಧ್ಯಕ್ಷರಾದ ಹನುಮಂತಪ್ಪ, ಪ್ರಚಾರ ಸಮಿತಿಯ ಉಪಾಧ್ಯಕ್ಷರಾದ ಮಂಜುನಾಥ,ನಗರಸಭಾ ಸದಸ್ಯರಾದ ಬಿ.ಟಿ.ರಮೇಶ್ ಗೌಡ ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಧ್ಯಕ್ಷರು,ಸದಸ್ಯರು,ಗ್ರಾಮದ ಮುಖಂಡರು,ಸಾರ್ವಜನಿಕರು ಮುಖಂಡರು, ಕಾರ್ಯಕರ್ತರು ಉಪಸ್ಥಿತಿದ್ದರು.

Namma Challakere Local News
error: Content is protected !!