ಚಳ್ಳಕೆರೆ ನ್ಯೂಸ್ :
“
ಚಳ್ಳಕೆರೆಯ ಎನ್.ಜಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ 2022-2023 ನೇ ಸಾಲಿನ ಪ್ರಥಮ ವರ್ಷದ ಬಿ.ಇಡಿ.ಪ್ರಶಿಕ್ಷಣಾರ್ಥಿಗಳಿಗೆ ಆಯೋಜಿಸಿದ್ದ “ಅಣುಬೋಧನಾ ಕಾರ್ಯಾಗಾರ” ಉದ್ಘಾಟಿಸಿ ಮಾತನಾಡಿದ-ಅವರು “ಸಮರ್ಥ ಶಿಕ್ಷಕರಾಗಿ ಉತ್ತಮ ಪಾಠ ಬೋಧನೆ ಮಾಡಲು ಅಣುಬೋಧನೆಯ ವಿವಿಧ ಕೌಶಲಗಳನ್ನು ಚೆನ್ನಾಗಿ ಕಲಿಯುವಂತೆ ಪ್ರಶಿಕ್ಷಣಾರ್ಥಿಗಳಿಗೆ ಕಿವಿಮಾತು ಹೇಳಿದರು”.
ಕಾಲೇಜಿನ ಹಿರಿಯ ಉಪನ್ಯಾಸಕರಾದ ಕೆ.ಬಿ.ರವಿಕುಮಾರ್- “ಅಣುಬೋಧನೆಯ ಮಹತ್ವದ ಬಗ್ಗೆ ಪ್ರಶಿಕ್ಷಣಾರ್ಥಿಗಳಿಗೆ ಹಿತವಚನ ನುಡಿದರು”.
ಈ ವಿಶೇಷ ಕಾರ್ಯಾಗಾರದ ಘನ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಎನ್ ಜಯಣ್ಣ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಹೇಮಂತರಾಜ ಎಲ್.ಎನ್.ಮಾತನಾಡಿ -“ನಮ್ಮ ಕಾಲೇಜಿನಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಅಣುಬೋಧನೆಯ ವಿವಿಧ ಕೌಶಲಗಳನ್ನು ಅತ್ಯಂತ ಸಮರ್ಥವಾಗಿ ಅನುಭವಿ ಉಪನ್ಯಾಸಕರಿಂದ ಕಲಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಶ್ಲಾಘಿಸಿದರು”.
ಈ ಕಾರ್ಯಕ್ರಮದ ನಂತರ “ಅಣುಬೋಧನಾ ಚಕ್ರದ” ಬಗ್ಗೆ ಹಿರಿಯ ಮತ್ತು ಅನುಭವಿ ಉಪನ್ಯಾಸಕರಾದ ರಾಘವೇಂದ್ರ ನಾಯಕ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಬೋಧಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ದೊರೆಸ್ವಾಮಿ, ವಿಶ್ವನಾಥ್,ನಾಗೇಶ್, ಕಲ್ಲೇಶ, ಶಾಮಸುಂದರ್, ಕಚೇರಿ ಅಧೀಕ್ಷಕರಾದ ವಾಣೆಶ್ರೀ ,ಯತೀಶ್ ಎಂ.ಸಿದ್ದಾಪುರ,ಹರ್ಷ, ಹಾಗೂ ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿದ್ದರು.