ನಾಯಕನಹಟ್ಟಿ ಏ.11 ಪಟ್ಟಣದ ಸುನ್ನಿ ಮದೀನ ಮಸೀದಿಯ ಮುಸ್ಲಿಂ ಸಮುದಾಯದವರು ಪರಮ ಪವಿತ್ರ ಹಬ್ಬ ರಂಜಾನ್‌ ಆಚರಣೆ ಪಟ್ಟಣದ ಬಿಳೆಕಲ್ ಬಡಾವಣೆಯ ಸುನ್ನಿ, ಮದೀನಾ ಮಸೀದಿಯ ಮುಸ್ಲಿಂ ಬಾಂಧವರು ಗುರುವಾರ ಸಡಗರ ಸಂಭ್ರಮದಿಂದ ನಡೆಯಿತು.

ಒಂದು ತಿಂಗಳ ಉಪವಾಸ ವ್ರತಾಚರಣೆ ಬಳಿಕ ಗುರುವಾರ ನಸುಕಿನಲ್ಲಿಯೇ ಪರಿಶುಭ್ರರಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಮುಸ್ಲಿಂ ಬಾಂಧವರು
ಹೊಸ ಬಟ್ಟೆಗಳನ್ನು ತೊಟ್ಟು ಪುರುಷರು, ಯುವಕರು ಹಾಗೂ ಮಕ್ಕಳು ಪಟ್ಟಣದ ಬೆಳಕಲ್ಲಿ ಬಡಾವಣೆಯಿಂದ ಮಾಳಪ್ಪನಹಟ್ಟಿ ರಸ್ತೆಯ ಖಾಸಗಿ ಜಮೀನಿನಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ನಂತರ ಒಬ್ಬರಿಗೊಬ್ಬರು ರಂಜಾನ್ ಹಬ್ಬದ ಶುಭಾಷಯಗನ್ನು ವಿನಿಮಯ ಮಾಡಿಕೊಂಡರು . ನಂತರ ಮನೆಯಲ್ಲಿ ಬಳಿಕ ಹಬ್ಬದ ಆಚರಣೆಗೆ ಅಗತ್ಯವಿರುವ ತರಹೇವಾರಿ ಹಬ್ಬದೂಟದ ಸಿದ್ಧತೆ ಮಾಡಿ ಸ್ನೇಹಿತರಿಗೆ ಕರೆದು ಊಟ ಬಡಿಸುತ್ತಾರೆ.

ಈ ಸಂದರ್ಭದಲ್ಲಿ ಸುನ್ನಿ ಮದೀನಾ ಮಸೀದಿಯ ಗುರುಗಳಾದ ಅಬ್ದುಲ್ ಮುಬೀನ್, ಅಧ್ಯಕ್ಷ ಮೊಹಮ್ಮದ್ ಯೂಸಿಫ್, ಕಾರ್ಯದರ್ಶಿ ಸನಾವುಲ್ಲಾ, ಉಪಾಧ್ಯಕ್ಷ ಮಹಮ್ಮದ್ ಫಯಾಜ್, ಸೈಯದ್ ಬೈಗ್, ಅಪ್ರೋಜ್, ಡಾ. ಹಯತ್, ಸುನ್ನಿ ಮದೀನಾ ಮಸೀದಿಯ ಸಮಸ್ತ ಮುಸ್ಲಿಂ ಬಾಂಧವರು ಇದ್ದರು.

Namma Challakere Local News
error: Content is protected !!