ನಾಯಕನಹಟ್ಟಿ:: ಕ್ರೀಡಪಟುಗಳಿಗೆ ಉತ್ತೇಜನ ಹಾಗೂ ಪ್ರೋತ್ಸಾಹ ನೀಡುವುದು ಪ್ರತಿಯೊಬ್ಬ ಯುವಕರ ಕರ್ತವ್ಯವಾಗಿದೆ ಎಂದು ಪ್ರಥಮ ದರ್ಜೆ ಗುತ್ತಿಗೆದಾರ ಜಿ. ವೆಂಕಟೇಶ್ ಹೇಳಿದ್ದಾರೆ.
ಗುರುವಾರ ಜೋಗಿಹಟ್ಟಿ ಗ್ರಾಮದ ಎ.ಕೆ. ಕಾಲೋನಿಯ ಡಾ ಬಿ ಆರ್ ಅಂಬೇಡ್ಕರ್ ಯುವಕ ಸಂಘ ವತಿಯಿಂದ ಯುಗಾದಿ ಹಬ್ಬದ ಪ್ರಯುಕ್ತ ಪ್ರಥಮ ಬಾರಿಗೆ ಮಹಾನಾಯಕ ಪ್ರೀಮಿಯರ್ ಲೀಗ್ ಸೀಸನ್ 1 .
ಕಪ್ ಕ್ರಿಕೆಟ್ ಕ್ರೀಡಾಕೂಟದಲ್ಲಿ ಜಯಗಳಿಸಿದ ಕ್ರೀಡಾಪಟುಗಳಿಗೆ ಬಹುಮಾನವನ್ನು ವಿತರಣೆ ಮಾಡಿ ಮಾತನಾಡಿದ ಅವರು ನಮ್ಮ ಗ್ರಾಮದ ಯುವಕರು ದುಶ್ಚಟಗಳಿಗೆ ಬಲಿಯಾಗದೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಜೀವನದಲ್ಲಿ ಪ್ರತಿಯೊಬ್ಬರಿಗೂ ಕ್ರೀಡೆ ಅತ್ಯಮೂಲ್ಯವಾದದ್ದು ಮಾನಸಿಕವಾಗಿ ದೈಹಿಕವಾಗಿ ಯುವಕರು ಸದೃಢರಾಗಲು ಕ್ರೀಡೆ ಉತ್ತಮವಾದದ್ದು ಕ್ರೀಡೆ ಮನಸ್ಸಿಗೆ ಮೃದು ಹಾಗೂ ದೈಹಿಕವಾಗಿ ಬಲ ನೀಡುವ ಕ್ರೀಡೆ ಆದರಿಂದ ಇಂತಹ ಕ್ರೀಡೆಗಳಿಗೆ ನಾನು ಸದಾ ಪ್ರೋತ್ಸಾಹವನ್ನು ನೀಡುತ್ತೇನೆ ಎಂದರು.

ಗ್ರಾಮಸ್ಥರಾದ ಸಣ್ಣಪ್ಪ, ಟಿ. ತಿಪ್ಪೇಸ್ವಾಮಿ, ದಲಿತ ಮುಖಂಡ ಟಿ.ಮುನಿರಾಜ್, ವಿಶ್ವನಾಥ್, ಎನ್ ಟಿ. ರಾಮಚಂದ್ರಪ್ಪ, ಡಿ ತಿಪ್ಪೇಸ್ವಾಮಿ, ಎಮ್ ಡಿ ಹನುಮಂತಪ್ಪ, ಎನ್ ಟಿ ಚೌಡೇಶ್,

ಕ್ರಿಕೆಟ್ ಕ್ರೀಡಾಕೂಟಕ್ಕೆ ದಾನಿಗಳು
.
ಪ್ರಥಮ ಬಹುಮಾನ ತೊರೆಕೋಲಮ್ಮನಹಳ್ಳಿ ಜಿ. ದುರುಗೇಶ್, ದ್ವಿತೀಯ ಬಹುಮಾನ ಡಿ. ತಿಪ್ಪೇಸ್ವಾಮಿ,
ಶಾಮಿಯಾನ ದಾನಿಗಳು ಟಿ.ಶಿವಕುಮಾರ್, ಡಿ ತಿಪ್ಪೇಸ್ವಾಮಿ ,ವಿಶ್ವನಾಥ ,
ನಾಗರಾಜ್, ಎಂ ತಿಪ್ಪೇಸ್ವಾಮಿ, ಮೆಡಲ್ ದಾನಿಗಳು ಎನ್ ಟಿ ರಾಮಚಂದ್ರಪ್ಪ ,ಟಿ. ಮುನಿರಾಜ್, ಹಾಗೂ ಜೋಗಿಹಟ್ಟಿ ಸಮಸ್ತ ಊರಿನ ಗ್ರಾಮಸ್ಥರು ಕ್ರೀಡಾಪಟುಗಳು ಇದ್ದರು

Namma Challakere Local News
error: Content is protected !!