ಓಬಯ್ಯನಹಟ್ಟಿಯಲ್ಲಿ ಮ್ಯಾಸನಾಯಕರ ಬುಡಕಟ್ಟು ಸಂಸ್ಕೃತಿ ಆಚರಣೆಯಂತೆ ಯುಗಾದಿ ಹಬ್ಬ ಸಂಭ್ರಮಾಚರಣೆ.
ನಾಯಕನಹಟ್ಟಿ :: ಏ.9. ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ ಎನ್ನುವಂತೆ ಓಬಯ್ಯನಹಟ್ಟಿ ಗ್ರಾಮಸ್ಥರು ಬುಡಕಟ್ಟು ಸಂಸ್ಕೃತಿಯ ಆಚರಣೆಯಂತೆ ಉಗಾದಿ ಹಬ್ಬವನ್ನು ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ಆಚರಣೆ ಮಾಡಿದರು.
ಹೋಬಳಿ ತಿಮ್ಮಪ್ಪಯ್ಯನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಓಬಯ್ಯನಹಟ್ಟಿ ಗ್ರಾಮದಲ್ಲಿ ಮ್ಯಾಸನಾಯಕರ ಬುಡಕಟ್ಟು ಸಂಸ್ಕೃತಿ ಯು ಜೀವಂತವಾಗಿ ಇವೇ.
ಮಂಗಳವಾರ ಬೆಳಿಗ್ಗೆಯಿಂದಲೇ ಓಬಯ್ಯನಹಟ್ಟಿ ಗ್ರಾಮಸ್ಥರು ಶ್ರೀ ಉಳ್ಳಾತಿ ಬೋರಲಿಂಗೇಶ್ವರ ದೇವರ ಎತ್ತುಗಳನ್ನು ಸಕಲ ಬಿರುದಾವಳಿಗಳೊಂದಿಗೆ ಗ್ರಾಮಕ್ಕೆ ಕರೆತಂದು ಮ್ಯಾಸನಾಯಕರ ಬುಡಕಟ್ಟು ಸಂಸ್ಕೃತಿ ಅನಾವರಣಗೊಳಿಸುವ ಮೂಲಕ ವಿಶೇಷವಾಗಿ ದೇವರ ಎತ್ತುಗಳಿಗೆ ಪೂಜೆಯನ್ನು ನೆರವೇರಿಸಿ ಹಿಂದುಗಳ ಹೊಸ ವರ್ಷದ ಯುಗಾದಿ ಹಬ್ಬವನ್ನು ಬೇವು ಬೆಲ್ಲ ಮಿಶ್ರಿತ ಪಾನಕ ವಿತರಣೆ ಮಾಡುವ ಮೂಲಕ ಸಂಭ್ರಮ ಸಡಗರದಿಂದ ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ಊರಿನ ಮುಖಂಡರು, ಮಹಿಳೆಯರು, ಯುವಕರು ಹಾಗೂ ಓಬಯ್ಯನಹಟ್ಟಿ ಸಮಸ್ತ ಗ್ರಾಮಸ್ಥರು ಇದ್ದರು