ಚಳ್ಳಕೆರೆ : ನಗರದ ವಾಸವಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿಗೆ ಪ್ರಥಮ ಸ್ಥಾನ ಬರುವ ಮೂಲಕ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.
ಹೌದು ಅದರಂತೆ ಪಿಯುಸಿ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು ನಗರದ ವಾಸವಿ ಕಾಲೇಜಿಗೆ ಶೆ.99.377 ಫಲಿತಾಂಶ ಬರುವ ಮೂಲಕ ತಾಲೂಕಿಗೆ ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ.
ಇನ್ನೂ ಸೈಯದ್ ಪೈಜಾನ್ ಎಂಬ ವಿದ್ಯಾರ್ಥಿ 600ಕ್ಕೆ ಸು.593 ಅಂಕ ಪಡೆಯುವ ಮೂಲಕ 98.83 ಫಲಿತಾಂಶ ಪಡೆದಿದ್ದಾನೆ, ಅದರಂತೆ ಕಾಲೇಜಿನಲ್ಲಿ ಪಿ. ಪೂಜಿತ-584, ಬಿ.ವರ್ಷಿತಾ-583, ಎ.ನಿತಿನ್-583, ಹೆಚ್.ಐಶ್ವರ್ಯ-580, ಚಾಕಲಿ ಸಾಯಿ ಗಮ್ಯ-576 ಈಗೇ ಈ ಬಾರೀಯ ಕಾಲೇಜಿನ ಶ್ರೇಷ್ಠ ವಿದ್ಯಾರ್ಥಿಗಳಾಗಿದ್ದಾರೆ ಎಂದು ಕಾಲೇಜಿನ ಪ್ರಾಶುಂಪಾಲರಾದ ಡಿ.ವೆಂಕಟಶಿವರೆಡ್ಡಿ ತಿಳಿಸಿದ್ದಾರೆ.
ತಾಲೂಕಿನಲ್ಲಿ ವಾಸವಿ ಕಾಲೇಜಿನ ವಿದ್ಯಾಥಿಗಳು ಪಿಯುಸಿಯಲ್ಲಿ ಅತೀ ಹೆಚ್ಚಿನ ಅಂಕ ಗಳಿಸುವ ಮೂಲಕ ಉತ್ತಿರ್ಣರಾಗಿದ್ದು, ವಾಸವಿ ಕಾಲೇಜಿನ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ, ಉನ್ನತ ಶ್ರೇಣಿಯಲ್ಲಿ ಕಾಲೇಜಿನ 183 ವಿದ್ಯಾರ್ಥಿಗಳು, ಪ್ರಥಮ ಸ್ಥಾನದಲ್ಲಿ 133 ವಿದ್ಯಾರ್ಥಿಗಳು, ದ್ವೀತೀಯ ಸ್ಥಾನದಲ್ಲಿ 3 ವಿದ್ಯಾರ್ಥಿಗಳು ಸಾಧನೆಗೈಯುವ ಮೂಲಕ ಯಶಸ್ವು ಪಡೆದಿದ್ದಾರೆ ಎಂದರು. ಡಾ.ಸಿ.ರಾಧಕೃಷ್ಣ, ಚೈತನ್ಯ ಶೀಕ್ಷಣ ಸಂಸ್ಥೆಗಳ ಸಮೂಹದ ನಿದೇಶರ್ಧಕರು ಎಲ್ಲಾ ವಿದ್ಯಾರ್ಥಿಗಳಿಗೆ ಶುಭಾ ಹಾರೈಸಿದ್ದಾರೆ. ಚಳ್ಳಕೆರೆ ತಾಲೂಕಿಗೆ ಪ್ರಥಮ ಸ್ಥಾನ ವಾಸವಿ ಕಾಲೇಜು ಆದರೆ ಇನ್ನೂ 593 ಅಂಕ ಪಡೆದ ವಿದ್ಯಾರ್ಥಿ ರಾಜ್ಯದಲ್ಲೆ ಐದನೇ ಟಾಪರ್ ಎಂದು ಹೇಳಲಾಗಿದೆ.
ಈ ಸಂಧರ್ಭದಲ್ಲಿ ಪದವಿ ಕಾಲೇಜಿನ ಪ್ರಾಶುಂಪಾಲರಾದ ಜೆ.ಶ್ರೀರಾಮುಲು, ಉಪನ್ಯಾಸಕ ಮಂಜುನಾಥ್, ಕಿಶೋರ್‌ಕುಮಾರ್, ಮಧು, ಗಿರೀಶ್, ಇತರರು ಇದ್ದರು.

  1. ಸೈಯದ್ ಪೈಜಾನ್
  2. ಪಿ. ಪೂಜಿತ
  3. ಬಿ.ವರ್ಷಿತಾ
  4. ಎ.ನಿತಿನ್
  5. ಹೆಚ್.ಐಶ್ವರ್ಯ
  6. ಚಾಕಲಿ ಸಾಯಿ ಗಮ್ಯ

About The Author

Namma Challakere Local News
error: Content is protected !!