ಕ್ರೀಡೆಯಲ್ಲಿ ಕ್ರೀಡೆಯಲ್ಲಿ ಕ್ರೀಡಾಪಟುಗಳು ಸೋಲು- ಗೆಲುವು ಸಮಾನವಾಗಿ ಸ್ವೀಕರಿಸಿ ಹಿರೇಹಳ್ಳಿ ವಕೀಲ ಟಿ. ಮಲ್ಲೇಶ್ ಸೋಲು- ಗೆಲುವು ಸಮಾನವಾಗಿ ಸ್ವೀಕರಿಸಿ ಹಿರೇಹಳ್ಳಿ ವಕೀಲ ಟಿ. ಮಲ್ಲೇಶ್
ನಾಯಕನಹಟ್ಟಿ:: ಕ್ರಿಕೆಟ್ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ತೀರ್ಪನ್ನು ಗೌರವದಿಂದ ಸ್ವೀಕರಿಸಬೇಕು ಎಂದು ಹಿರೇಹಳ್ಳಿ ವಕೀಲ ಟಿ. ಮಲ್ಲೇಶ್ ಹೇಳಿದ್ದಾರೆ.
ಮಂಗಳವಾರ ಸಮೀಪದ ತೋರೆಕೋಲಮ್ಮನಹಳ್ಳಿ, ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಮತ್ತು ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ್ ರಾಮ್ ರವರ ಜನ್ಮ ದಿನಾಚರಣೆ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಭೀಮ ಫೌಂಡೇಶನ್ ತೊರೆಕೋಲಮ್ಮನಹಳ್ಳಿ ಮತ್ತು ಮಾದಿಗ ಸೇವಾ ಟ್ರಸ್ಟ್ ನಾಯಕನಹಟ್ಟಿ ಹೋಬಳಿ ಮತ್ತು ಜೈ ಭೀಮ್ ಗೆಳೆಯರ ಬಳಗದ ವತಿಯಿಂದ ಗ್ರಾಮದ ಗಾದ್ರಿ ಪಾಲಜ್ಜರ ಜಮೀನಿನಲ್ಲಿ ಮಹಾನಾಯಕ ಪ್ರೀಮಿಯರ್ ಲೀಗ್ ಸೀಸನ್ -6 ಕ್ರಿಕೆಟ್ ಕ್ರೀಡಾಕೂಟವನ್ನು ಟೇಪ್ ಕತ್ತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಬಾಬಾ ಸಾಹೇಬ್ ಡಾ. ಬಿಆರ್ ಅಂಬೇಡ್ಕರ್ ಅವರು ಇಡೀ ವಿಶ್ವವೇ ಮೆಚ್ಚುವಂತ ಮಹಾ ಸಂವಿಧಾನವನ್ನು ನಮಗೆ ನೀಡಿದ್ದಾರೆ ಸಂವಿಧಾನವನ್ನು ಪ್ರತಿಯೊಬ್ಬರೂ ಗೌರವಿಸಬೇಕು ಮತ್ತು ಪ್ರಜಾಪ್ರಭುತ್ವ ಉಳಿಯಬೇಕಂದರೆ ಎಲ್ಲಾ ಯುವಕರು ಜಾಗೃತರಾಗಬೇಕು ಶಿಕ್ಷಣ ಸಂಘಟನೆ ಹೋರಾಟ ಇದರ ಕಡೆ ಗಮನ ಹರಿಸಬೇಕು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಸ್ಥಾನಮಾನ ಗಳಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರು.
ಕೊರಡಿಹಳ್ಳಿ ಆನಂದಪ್ಪ, ಅಬ್ಬೆನಹಳ್ಳಿ ಯುವ ಮುಖಂಡ ಎಂ ಎಸ್ ಶಿವಪ್ರಕಾಶ್,
ಮಲೇಬೋರಯ್ಯನಹಟ್ಟಿ ಬಿ ಶಂಕರ ಸ್ವಾಮಿ, ಗ್ರಾಮಸ್ಥರಾದ ಆರ್ ಬಸವರಾಜ್, ಸುಮಿತ್ರಮ್ಮ, ಮಾರಕ, ಜೋಗಿಹಟ್ಟಿ ಪ್ರಥಮ ದರ್ಜೆ ಗುತ್ತಿಗೆದಾರರು ಜಿ ವೆಂಕಟೇಶ್, ರುದ್ರೇಶ್. ಈ ಮಧು, ನಾಗೇಶ್, ಬಿ ಕುಮಾರ್, ಎಚ್ ವೆಂಕಟೇಶ್, ಈ ಪೆನ್ನೇಶ್, ಬಸವರಾಜ್ ಹಂಪಣ್ಣ, ಎಂ ನಾಗೇಶ್ , ದುರುಗೇಶ್, ಮಧು, ಟಿ ತಿಪ್ಪೇಶ್ ದಪ್ಪ, ಅಶೋಕ್, ನವೀನ್, ಸುನಿಲ್, ಭೀಮಾ ಫೌಂಡೇಶನ್ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಗೂ ಜೈ ಭೀಮ್ ಮಾದಿಗ ಯುವಕ ಸಂಘ ಸರ್ವ ಸದಸ್ಯರು ಸಮಸ್ತ ತೋರೆಕೊಲಮ್ಮನಹಳ್ಳಿ ಗ್ರಾಮಸ್ಥರು ಇದ್ದರು.