ನಾಯಕನಹಟ್ಟಿ:: ಏ.8. ಐತಿಹಾಸಿಕ ಇತಿಹಾಸವುಳ್ಳ ಹಟ್ಟಿ ದೊರೆ ಮಲ್ಲಪ್ಪ ನಾಯಕರ ನೂತನ ಭಾವಚಿತ್ರವನ್ನು ಗ್ರಾಮಸ್ಥರು ಅದ್ದೂರಿಯಾಗಿ ಅನಾವರಣಗೊಳಿಸಿದರು.
ಸೋಮವಾರ ಬೆಳಗ್ಗೆ ಗ್ರಾಮದ ನಾಯಕ ಸಮುದಾಯದವರು ಮತ್ತು ಇತರೆ ಸಮುದಾಯದವರು ಸೇರಿ ಹಟ್ಟಿ ದೊರೆ ಮಲ್ಲಪ್ಪನಾಯಕರ ನೂತನ ಭಾವಚಿತ್ರವನ್ನು ಅನಾವರಣ ಗೊಳಿಸಿದರು.

ಕ್ರಿ.ಶ.1.400 ರಿಂದ ಸುಮಾರು 215 ವರ್ಷಗಳ ಕಾಲ ಐತಿಹಾಸಿಕ ನಾಯಕನಹಟ್ಟಿಯಲ್ಲಿ ಹಟ್ಟಿ ಮಲ್ಲಪ್ಪನಾಯಕನ ಮನೆತನದವರು ಆಳ್ವಿಕೆ ನಡೆಸಿದರು ಇವರು ವಿಜಯನಗರ ಸಾಮ್ರಾಜ್ಯದ ಸಾಮಾಂತರಾಗಿ ಮತ್ತು ಚಿತ್ರದುರ್ಗದ ಮದಕರಿ ನಾಯಕನ ಆಳ್ವಿಕೆ ಕಾಲದಲ್ಲಿ ವೈವಾಹಿಕ ಸಂಬಂಧಗಳ ಮೂಲಕ ಒಳ್ಳೆಯ ಆಡಳಿತವನ್ನು ನಡೆಸಿದರು.
ಇವರು ಮೂಲತಃ ನಾಯಕ ಜನಾಂಗದವರಾಗಿದ್ದು ಜನಾಂಗದ ಕುರುಹಾಗಿ ಕಂಪಳದ ಮತ್ತು 12 ಪೆಟ್ಟಿಗೆಯ ದೇವರು ಆರಾಧಕರಾಗಿದ್ದರು ಎನ್ನುತ್ತದೆ ಇತಿಹಾಸ.

ಸಕ್ಲರ್ ದಡ್ಡಪ್ಪ. ದಳವಾಯಿ ಬೋರಯ್ಯ, ಎನ್ ನಾಗರಾಜ್, ಚಂದ್ರಣ್ಣ, ಚಿತ್ತಯ್ಯ, ತಿಪ್ಪೇಸ್ವಾಮಿ, ದೊರೆ ತಿಪ್ಪೇಸ್ವಾಮಿ, ದಳವಾಯಿ ರುದ್ರಮನಿ. ಕಿನ್ನರಿ ರುದ್ರಯ್ಯ, ದಳವಾಯಿ ರುದ್ರಮುನಿ, ಧಣಿ, ಬಿ ದೊರೆ ತಿಪ್ಪೇಸ್ವಾಮಿ ನಾಯಕ. ಶ್ರೀ ಜಯಲಕ್ಷ್ಮಿ ಬೋರ್ವೆಲ್ಸ್ ಮಾಲೀಕ ಸುನಿಲ್, ಸೇರಿದಂತೆ ಮುಂತಾದವರು ಇದ್ದರು

Namma Challakere Local News
error: Content is protected !!