ಚಳ್ಳಕೆರೆ ನ್ಯೂಸ್ : ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಯುಗಾದಿ ಮತ್ತು ರಂಜಾನ್ ಹಬ್ಬವು
ಏಕ ಕಾಲಕ್ಕೆ ಬಂದಿರುವುದರಿಂದ ಎಲ್ಲಾ ಹಿಂದು ಮತ್ತು ಮುಸ್ಲಿಂ
ಭಾಂಧವರು, ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕೆಂದು ಎಂದು ಡಿವೈಎಸ್ ಪಿ ಬಿಟಿ.ರಾಜಣ್ಣ ಹೇಳಿದರು.

ಅವರು ನಗರದ ಪೋಲಿಸ್ ಠಾಣೆಯಲ್ಲಿ ಯುಗಾದಿ ಹಾಗೂ ರಂಜಾನ್ ಹಬ್ಬದ ಪ್ರಯುಕ್ತ ಹಿಂದು-ಮುಸ್ಲಿಂ ಸಮುದಾಯದವರು ಹಾಗೂ ಸಾರ್ವಜನಿಕರಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.

ಚಳ್ಳಕೆರೆ ‌ನಗರದ ಕೋಮು ಸೌಹಾರ್ದ ತೆಗೆ ಹೆಸರು ವಾಸಿಯಾದ ನಗರ ಆದ್ದರಿಂದ ಇದುವದೆಗೆ ಯಾವುದೇ ಅಂತಹ ಪ್ರಕರಣಗಳು ಕಂಡು ಬಂದಿಲ್ಲ ಆದ್ದರಿಂದ ಈ ಬಾರಿ ಸಹ ಸಹಾನುಬಾಳ್ವೆಯಿಂದ ಹಬ್ಬಗಳನ್ನು ಆಚರಿಸಬೇಕು, ನಗರದ ಬಳ್ಳಾರಿ
ರಸ್ತೆಯಲ್ಲಿರುವ ಜಾಮಿಯಾ ಮಸೀದಿಗೆ ಬಂದು ಸೇರಿ ಬೆಂಗಳೂರು
ರಸ್ತೆಯಲ್ಲಿರುವ ಇದ್ಗಾ ಮೈದಾನಕ್ಕೆ ಮೆರವಣಿಗೆ ಮುಖಾಂತರ
ಹೋಗುವಾಗ ಯಾವುದೇ ಅಡಚಣೆ ಉಂಟಾಗದಂತೆ ಸೂಕ್ತ
ಪೊಲೀಸ್ ಬಂದೋಬಸ್ತ್ ನೀಡಲಾಗುವುದು‌,

ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕಾರ ನೀಡಬೇಕು ಎಂದರು.

ಇನ್ನೂ ಠಾಣಾಧಿಕಾರಿ ಕೆ.ಕುಮಾರ್ ಮಾತನಾಡಿ, ರಂಜಾನ್ ಹಾಗೂ ಹಿಂದೂಗಳ ಯುಗಾದಿ ಹಬ್ಬ ಒಟ್ಟಿಗೆ ಬಂದಿರುವುದು ಸಂತಸ ಆದರೆ ಆರೋ ಕುಡಿಗೇಡಿಗಳು ಗಲಭೆ ಹಬ್ಬಿಸಲೆಂದು ಇರುತ್ತಾರೆ ಆಂತಹ ಸನ್ನಿವೇಶಕ್ಕೆ ಕಿವಿಗೋಡಬಾರದು, ಎರಡು ಸಮುದಾಯದವರು ಹಬ್ಬವನ್ನು ಶಾಂತಿಯುತವಾಗಿ
ಆಚರಿಸಬೇಕು, ಅದಕ್ಕೆ ಬೇಕಾದ ಸೂಕ್ತ ಬಂದೋಬಸ್ತ್
ಕಲ್ಪಿಸಲಾಗುವುದು, ನಗರದಲ್ಲಿ ಯುಗಾದಿ ಎಂದು ಪ್ರತಿಷ್ಠಗೆ ಜೂಜಾಟದಲ್ಲಿ ತೊಡಗುವುದು ಬೇಡ, ನಿಮ್ಮ ಕುಟುಂಬದ ಸಮ್ಮುಖದಲ್ಲಿ ಹಬ್ಬವನ್ನು ಆಚರಿಸಿ ಎಂದರು.

ಈ ಸಂದರ್ಭದಲ್ಲಿ ಪಿಎಸ್ಐ ಕೆ.ಸತೀಶ್ ನಾಯ್ಕ್, ಶಿವರಾಜ್, ಧರೇಪ್ಪ ಬಾಳಪ್ಪ, ಹಾಗೂ ಹಿಂದೂ,ಮುಸ್ಲಿಂ ಸಮುದಾಯದ ಮುಖಂಡರು.
ವಿವಿಧ ಸಂಘಟನೆಯ ಮುಖಂಡರು ಇತರರಿದ್ದರು.

About The Author

Namma Challakere Local News
error: Content is protected !!