ಚಳ್ಳಕೆರೆ ನ್ಯೂಸ್ : 2024 ರ ಲೋಕಸಭಾ ಚುನಾವಣೆ ಹೊತ್ತಲ್ಲೆ ಕೆಟಿ ಕುಮಾರಸ್ವಾಮಿ ಗಾಳ ಹಾಕಿದ ಬಿಜೆಪಿ ಅಭ್ಯರ್ಥಿ ಗೋವಿಂದ ಎಂ ಕಾರಜೋಳ ರವರು, ಕುಮಾರಸ್ವಾಮಿ ಮನೆಗೆ ಬಂದು ಬಿಜೆಪಿ ಗೆ ಆಹ್ವಾನ ಮಾಡಿದ್ದಾರೆ.
ಚಿತ್ರದುರ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು ಮಾಜಿ ಸಚಿವ ಚಳ್ಳಕೆರೆ ತಿಪ್ಪೇಸ್ವಾಮಿ ಪುತ್ರ ಕೆ.ಟಿ.ಕುಮಾರಸ್ವಾಮಿ ಅವರಿಗೆ ಗಾಳ ಹಾಕಿದ್ದು, ಬಿಜೆಪಿ ಪಕ್ಷಕ್ಕೆ ಸೆಳೆಯುವ ಮೂಲಕ ಚಳ್ಳಕೆರೆ ಕ್ಷೇತ್ರದಲ್ಲಿ ಒಂದಿಷ್ಟು ಮತಗಳು ಪ್ರಮಾಣ ಹೆಚ್ಚಿಸಿಕೊಳ್ಳಲು ಪ್ಲಾನ್ ರೂಪಸುತ್ತಿದೆ.
ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಮಾತನಾಡಿ ಬಿಜೆಪಿ ಪಕ್ಷದ ಹಿರಿಯ ಮುತ್ಸದಿ, ತಿಪ್ಪೇಸ್ವಾಮಿಯವರು ನಮ್ಮ ಪಕ್ಷದ ನಿಷ್ಠವಂತ ರಾಜಕಾರಣಿ. ಅವರ ಪುತ್ರ ಕೆ.ಟಿ.ಕುಮಾರಸ್ವಾಮಿ ಸಹ ನಮ್ಮ ಪಕ್ಷದಲ್ಲೇ ಹಲವಾರು ಹಂತದಲ್ಲಿ ಕಾರ್ಯನಿರ್ವಹಿಸಿದವರು. ರಾಜಕೀಯ ಬೆಳೆವಣಿಗೆ ಹಿನ್ನೆಲೆಯಲ್ಲಿ ಪಕ್ಷದಿಂದ ದೂರವಾಗಿದ್ದ ಅವರನ್ನು ಮತ್ತೆ ಪಕ್ಷಕ್ಕೆ ಕರೆತರುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ.
ಬಿಜೆಪಿಗಾಗಿ ದುಡಿದ ತಿಪ್ಪೇಸ್ವಾಮಿಯವರನ್ನು ಎಂದಿಗೂ ಮರೆಯುವಂತಿಲ್ಲ. ಅವರ ಪತ್ರರೂ ಸಹ ಪಕ್ಷದಲ್ಲಿ ಹಲವಾರು ಹಂತದಲ್ಲಿ ಕಾರ್ಯನಿರ್ವಹಿಸಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಮತ್ತಷ್ಟು ಬೆಳೆಯಬೇಕಾದ ಯುವ ನಾಯಕ ಕುಮಾರಸ್ವಾಮಿ. ಅವರ ರಾಜಕೀಯ ಭವಿಷ್ಯವನ್ನು ಉಜ್ವಲ ಮಾಡುವ ಉದ್ದೇಶದಿಂದ ಮತ್ತೆ ಪಕ್ಷಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದೆ.
ಪಕ್ಷದ ಮುಖಂಡರು, ಹಿರಿಯರು, ಬೆಂಬಲಿಗರೊAದಿಗೆ ಕುಮಾರಸ್ವಾಮಿ ಬಿಜೆಪಿ ಆಹ್ವಾನಿಸಲಾಗಿದೆ. ರಾಜ್ಯದ ಸಚಿವರಾಗಿ ಸೇವೆ ನಿರ್ವಹಿಸಿದ ಸಂದರ್ಭದಲ್ಲಿ ನಾನು ಸಹ ತಿಪ್ಪೇಸ್ವಾಮಿಯವರ ಜೊತೆಯಲ್ಲಿ ಸಚಿವರಾಗಿ ಸೇವೆ ಮಾಡಿದ್ದೇನೆ. ಸದಾಕಾಲ ಜನರ ಸೇವೆಯ ಬಗ್ಗೆ ಅವರು ಮಾತನಾಡುತ್ತಿದ್ದರು. ಹೆಚ್ಚು ಸಾಧನೆ ಮಾಡಬೇಕೆಂಬ ತುಡಿತ ಅವರಲ್ಲಿ ಶಾಶ್ವತವಾಗಿತ್ತು. ಅವರ ಅನಾರೋಗ್ಯ ಸಂದರ್ಭದಲ್ಲೂ ಸಹ ನಾನು ಬೆಂಗಳೂರಿನಲ್ಲಿ ಅವರನ್ನು ಭೇಟಿಯಾಗಿದ್ದೆ. ನಮ್ಮ ಅವರ ಒಡನಾಟ ಅತ್ಯಂತ ಸ್ನೇಹಮಯಿಯಾಗಿತ್ತು ಎಂದು ನೆನಪಿಸಿಕೊಂಡರು.

ಯುವ ಮುಖಂಡ ಕೆ.ಟಿ.ಕುಮಾರಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಬಿಜೆಪಿ ಹಿರಿಯ ಮುಖಂಡ ಪಿ.ರಾಮಕೃಷ್ಣರೆಡ್ಡಿ, ಬಿಜೆಪಿ ಮುಖಂಡ, ನಗರಸಭಾ ಸದಸ್ಯ ಎಸ್.ಜಯಣ್ಣ, ವೆಂಕಟೇಶ್, ರಂಗಸ್ವಾಮಿ, ಬಂಡೆರAಗಪ್ಪ, ವೆಂಕಟಪ್ಪ, ಬಿ.ಎಸ್.ಶಿವಪುತ್ರಪ್ಪ, ಚಿದಾನಂದ, ವೀರೇಶ್, ಕೆಂಪಮAಜ ಮುಂತಾದವರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!