ಚಳ್ಳಕೆರೆ : ಬಯಲು ಸೀಮೆಯ ಬುಡಕಟ್ಟು ಗೋವುಗಳನ್ನು ಉಳಿಸುವ ಮೂಲಕ ಭಾರತ ದೇಶದ ಗೋ ಸಂಪತ್ತು ಉಳಿಸುವ ಅಗತ್ಯವಿದೆ ಸರಕಾರ ಕೇವಲ ಬರಗಾಲ ಎಂಬುದು ಘೋಷಣೆ ಮಾಡಿದರೆ ಸಾಲದು ತುರ್ತಾಗಿ ಅಗತ್ಯ ನೆರವು ನೀಡಬೇಕು ಎಂದು ಶ್ರೀ ರಾಮಕೃಷ್ಣ ಆಶ್ರಮದ ಜಪಾನಂದ ಜೀ ಮಹಾರಾಜು ಹೇಳಿದರು.
ಅವರು ನಗರದ ರೋಟರಿ ಕ್ಲಬ್ ಸಭಾಗಂಣದಲ್ಲಿ ಸುಧಾಮೂರ್ತಿ ಮೂರ್ತಿ ಹಾಗೂ ಎನ್‌ಆರ್.ನಾರಾಯಣ ಮೂರ್ತಿ, ಮೂರ್ತಿ ಟ್ರಸ್ಟ್ ಪ್ರಯೋಜಕತ್ವದಲ್ಲಿ ನಡೆಸುವ ದೇವರ ಎತ್ತುಗಳಿಗೆ ಮೇವು ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಲೋಕಸಭಾ ಚುನಾವಣೆ ನೀತಿ ಸಂಹಿತೆ ಎಂದು ಸಬೂಬು ಹೇಳಿದರೆ ಮೂಖ ಪ್ರಾಣಿಗಳು ಮೇವು ಇಲ್ಲದೆ ಸಾಯುತ್ತಿವೆ, ಇತ್ತ ಅಧಿಕಾರಿಗಳು ಗಮನಹರಿಸಬೇಕಿದೆ ಕೇವಲ ಹೋಬಳಿಗೊಂದು ಗೋಶಾಲೆ ತೆರೆದು ಕೈ ತೊಳೆದುಕೊಂಡರೆ ಸಲಾದು, ಬದಲಾಗಿ ನಮ್ಮ ದೇವರ ಹಟ್ಟಿಗಳ ಬಳಿ ಮೇವು ಬ್ಯಾಂಕ್ ತೆರೆದು ಮೇವು ನೀಡಿ, ಸಾಯುವ ಗೋವುಗಳ ರಕ್ಷಣೆಗೆ ಮುಂದಾಗಿ ಎಂದು ಅಧಿಕಾರಿಗಳ ಕಿವಿಯಿಂಡಿದರು.
ಇನ್ನೂ ಕಿಲಾರಿಗಳ ಗೋಳೂ ಕೇಳುವವರಿಲ್ಲ ಚಳ್ಳಕೆರೆ, ಮೊಳಕಾಲ್ಮೂರು ತಾಲೂಕಿನಲ್ಲಿ ಬುಡಕಟ್ಟು ಸಮುದಾಯದ ದೇವರ ಹಸುಗಳು ಮೇವು ಇಲ್ಲದೆ ಸಾಯುತ್ತಿರುವುದು ವಿಪರ್ಯಾಸ, ಆದ್ದರಿಂದ ನಾವು ಕೂಡ ಸಹಾಯ ಮಾಡುತ್ತೆವೆ ನೀವು ಕೂಡ ಮಾಡಿ, ಗೋವುಗಳ ಕಡೆ ಜಿಲ್ಲಾಧಿಕಾರಿಗಳು ದಾವಿಸಬೇಕು ಮೂಖ ಪ್ರಾಣಿಗಳ ವೇಧನೆ ಕೇಳಬೇಕು, ಮೂಖ ಪ್ರಾಣಿಗಳ ಉಳಿವಿಗೆ ಆಂದೋಲನ ಮಾಡಲು ಬಿಡಬೇಡಿ ನಮ್ಮ ತಾಳ್ಮೆ ಪರೀಕ್ಷಿಸಬೇಡಿ, ಮೇವು ನೀರಿಗಾಗಿ ವಲಸೆ ಹೋದ ದೇವರ ಎತ್ತುಗಳು 200 ಹಸುಗಳಲ್ಲಿ 40 ಹಸುಗಳು ಅಸುನೀಗಿವೆ ಎಂದರು.
ಬಾಕ್ಸ್ ಮಾಡಿ :
ತಾಲೂಕಿನ ನರ‍್ಲಗುಂಟೆ, ನೆಲಗೇತನಹಟ್ಟಿ, ಭೀಮಗೊಂಡನಹಳ್ಳಿ, ಜೋಗಿಹಟ್ಟಿ, ಚನ್ನಬಯಯ್ಯನಹಟ್ಟಿ, ಅಬ್ಬೇನಹಳ್ಳಿ, ಮೊಳಕಾಲ್ಮೂರು ತಾಲೂಕಿನ ಸೂರಮ್ಮನಹಳ್ಳಿ, ಮುತ್ತಿಗಾರಹಳ್ಳಿ ಗ್ರಾಮಗಳಲ್ಲಿ ಸುಮಾರು 1500ರಿಂದ ಎರಡು ಸಾವಿರ ಕ್ಕೂ ಹೆಚ್ಚು ದೇವರ ಎತ್ತುಗಳಿದ್ದು ಮೇವು ನೀರಿನಲ್ಲದೆ ಪ್ರಾಣ ಬಿಡುವ ಹಂತಕ್ಕೆ ತಲುಪಿವೆ ಪ್ರತಿ ವರ್ಷದಂತೆ ಈ ವರ್ಷವೂ ಸಹ ಕಳೆದ ವರ್ಷ ನಾವು ಸುಮಾರು 360 ಟನ್ ಗಳುವಿತರಿಸಿದ್ದೆವೆ, ಇನ್ನೂ ದೇವರ ಎತ್ತುಗಳಿಗೆ ಉಚಿತವಾಗಿ ಮೇವು ವಿತರಣೆ ಮಾಡಲಾಗುವುದು –ಶ್ರೀ ರಾಮ ಕೃಷ್ಣ ಆಶ್ರಮದ ಜಪಾನಂದ ಜೀ ಮಹಾರಾಜು
ಇದೇ ಸಂಧರ್ಭದಲ್ಲಿ ಗೋ ಸಂರಕ್ಷಕರಾದ ಮಹೇಶ್, ಸಿದ್ದೇಶ್, ಡಾ.ಮಂಜುನಾಥ್, ಕಿಲಾರಿಗಳಾದ ಮಂಜಣ್ಣ, ಪಾಲಯ್ಯ, ಬೋರೇಶ್, ಪಾಲಯ್ಯ, ಮುತ್ತಯ್ಯ, ಇತರರಿದ್ದರು.