ನಾಯಕನಹಟ್ಟಿ::ಏ.5. 2024ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ.
ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿಗಳ ಆದೇಶದಂತೆ ಚಳ್ಳಕೆರೆ ಡಿವೈಎಸ್ ಪಿ ರವರ ನೇತೃತ್ವದಲ್ಲಿ ತಳಕು ವೃತ್ತ ನಿರೀಕ್ಷಕ ರಾಜಶೇಖರ್.ನಾಯಕನಹಟ್ಟಿ ಪಿಎಸ್ಐ ಕೆ.ಶಿವಕುಮಾರ್ ರವರು.
ಶುಕ್ರವಾರ ಹೋಬಳಿಯ ನೇರಲಗುಂಟೆ ಮತ್ತು ಮಲ್ಲೂರಹಳ್ಳಿ ಗ್ರಾಮದ
ಪ್ರಮುಖ ಬೀದಿಗಳಲ್ಲಿ ಕೇಂದ್ರೀಯ ರಿಸರ್ವ್ ಪೊಲೀಸ್ ಪಡೆ ಹಾಗೂ ಪೊಲೀಸರಿಂದ ಪಥ ಸಂಚಲನ ಅದ್ದೂರಿಯಾಗಿ ನಡೆಯಿತು.

ಇನ್ನೂ ಲೋಕಸಭಾ ಚುನಾವಣೆಯ 2024ರ ಏಪ್ರಿಲ್ 26ರಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯುತ್ತಿದ್ದು ಇಂತಹ ಸಂದರ್ಭದಲ್ಲಿ ಕರ್ನಾಟಕ ಸೂಕ್ಷ್ಮ ಪ್ರದೇಶಗಳಲ್ಲಿ ಚುನಾವಣೆ ಭದ್ರತೆಗಾಗಿ ಕೇಂದ್ರೀಯ ರಿಸರ್ವ್ ಪೊಲೀಸ್ ಪಡೆ ನಿಯೋಜನೆ ಮಾಡಲಾಗಿದೆ.
2024ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ವಿಶ್ವಾಸವನ್ನು ಕೇಂದ್ರೀಯ ರಿಜರ್ವ್ ಪೊಲೀಸ್ ಪಡೆ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಹೋಬಳಿಯ ನೇರಲಗುಂಟೆ ಮತ್ತು ಮಲ್ಲೂರಹಳ್ಳಿ ಸೂಕ್ಷ್ಮ ಸ್ಥಳಗಳಲ್ಲಿ ಪಥ ಸಂಚಲನ ನಡೆಸುವ ಮೂಲಕ ಜನರಲ್ಲಿ ವಿಶ್ವಾಸವನ್ನು ತುಂಬಿದರು.

ಕೇಂದ್ರೀಯ ರಿಸರ್ವ್ ಪೊಲೀಸ್ ಪಡೆಯ ಇನ್ಸ್ಪೆಕ್ಟರ್ ಸವಿತಾ ಮೂಲ. ಪಿಎಸ್ಐ ಮೀನಾ ಆರ್ಯ, ಸೃಷ್ಟಿ, ಕಮಲಾವತಿ,
ನಾಯಕನಹಟ್ಟಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಇದ್ದರು

About The Author

Namma Challakere Local News
error: Content is protected !!