ಚಳ್ಳಕೆರೆ ನಗರದ ಎನ್ ಜಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ “ಜೀವ ಸಂರಕ್ಷಣೆಯ ಪ್ರಥಮ ಚಿಕಿತ್ಸೆಯ ಕುರಿತು ಪ್ರಾತ್ಯಕ್ಷಿಕೆ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮ”ವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ವಾಹನ ಅಪಘಾತ , ಮೂರ್ಚೆ ರೋಗ, ಹಾವು ಕಚ್ಚಿದಾಗ ಮತ್ತು ಹೃದಯಾಘಾತ ಸಂಭವಿಸಿದ ಸಂದರ್ಭದಲ್ಲಿ ನೀಡಬೇಕಾದ ಪ್ರಥಮ ಚಿಕಿತ್ಸೆಯ ಕುರಿತು ಪ್ರಾತ್ಯಕ್ಷಿಕೆ ನೀಡುವ ಮೂಲಕ ವಿವರಿಸಿದರು.
ಅಲ್ಲದೆ ವಿವಿಧ ಸಂಶೋಧನಾ ವರದಿಗಳ ಬಗ್ಗೆ ಉಲ್ಲೇಖಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಗಳಾದ ಪ್ರಮೀಳ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಎನ್ ಜಯಣ್ಣ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಹೇಮಂತರಾಜ ಎಲ್.ಎನ್, ಉಪನ್ಯಾಸಕರಾದ ರಾಘವೇಂದ್ರ ನಾಯಕ, ಕೆ.ಬಿ.ರವಿಕುಮಾರ್.ದೊರೆಸ್ವಾಮಿ, ವಿಶ್ವನಾಥ್, ನಾಗೇಶ್, ಕಲ್ಲೇಶ, ಶಾಮಸುಂದರ್, ಶಿವಕುಮಾರ್. ಕೆ, ಕಚೇರಿ ಅಧೀಕ್ಷಕರಾದ ವಾಣೆಶ್ರೀ, ಯತೀಶ್ ಎಂ.ಸಿದ್ದಾಪುರ, ಭೀಮಪ್ಪ,ಸಾವಿತ್ರಮ್ಮ, ಹಾಗೂ ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿದ್ದರು.