ಚಳ್ಳಕೆರೆ : 2024ರ ಲೋಕಸಭಾ ಬಿಜೆಪಿ ಅಭ್ಯರ್ಥಿಯಾಗಿ ಚಳ್ಳಕೆರೆ ಕ್ಷೇತ್ರಕ್ಕೆ ಆಗಮಿಸಿದ ಗೋವಿಂಡ ಎಂ.ಕಾರಜೋಳರವರು ನಾಯಕ ಸಮುದಾಯವನ್ನು ಕಡೆಗಣಿಸಿದ್ದಾರೆ, ಮುಂದಿನ ದಿನಗಳಲ್ಲಿ ಇದೇ ಮುಂದುವರೆದರೆ ನಾಯಕ ಸಮುದಾಯದ ಮುಖಂಡರು ತಟಸ್ಥರಾಗುತ್ತೆವೆ ಎಂದು ನಿಕಟ ಪೂರ್ವ ಯುವ ಮೋರ್ಚಾ ರಾಜ್ಯ ಕಾರ್ಯದರ್ಶೀ ಎವಿಬಿಪಿ ಮಂಜುನಾಥ್ ಹೇಳಿದರು.
ಅವರು ನಗರದ ಎಂಎಸ್.ಜಯರಾA ಅವರ ಕಛೇರಿಯಲ್ಲಿ ಆಯೋಜಿಸಿದ್ದ 2024ರ ಲೋಕಸಭಾ ಚುನಾವಣೆ ನಿಮಿತ್ತ ನಾಯಕ ಸಮುದಾಯದ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು, ಮಾ30ರಂದು ಚಳ್ಳಕೆರೆ ತಾಲೂಕಿಗೆ ಆಗಮಿಸಿದ ಬಿಜೆಪಿ ಅಭ್ಯರ್ಥಿ ಗೋವಿಂದ ಎಂ ಕಾರಜೋಳ ಕೇವಲ ಒಂದೇ ಸಮುದಾಯದ ಕಾರ್ಯಕರ್ತರನ್ನು ಮುಖಂಡರನ್ನು ಕೇವಲ ಹತ್ತು ಜನರನ್ನು ಮಾತ್ರ ಕರೆದುಕೊಂಡು ಗುಡಿ ಗೋಪುರಗಳನ್ನು ಸುತ್ತುವರೆದಿದಾರೆ, ಇದರಿಂದ ಬಿಜೆಪಿಯ ನಾಯಕ ಸಮುದಾಯದ ನಿಷ್ಠವಂತ ಕಾರ್ಯಕರ್ತರಿಗೆ ನೋವುಂಟು ಮಾಡಿದೆ ಆದ್ದರಿಂದ ಮುಂದಿನ ದಿನಗಳಲಿ ಇದೇ ರೀತಿ ಮುಂದುವರೆದರೆ ನವು ತಟಸ್ಥರಾಗುತ್ತವೆ ಎಂದು ನಾಯಕ ಸಮುದಾಯ ಎಚ್ಚರಿಕೆ ನೀಡಿದೆ ಎಂದರು.
ಇನ್ನೂ ಮಾಜಿ ಶಾಸಕ ಎಸ್.ತಿಪ್ಪೆಸ್ವಾಮಿ ಮಾತನಾಡಿ, ಈಡೀ ರಾಜ್ಯದಲ್ಲೆ ಮೊದಲ ಸ್ಥಾನದಲ್ಲಿ ಇರುವ ನಾಯಕ ಸಮುದಾಯ ಚಳ್ಳಕೆರೆ ತಾಲೂಕಿನಲ್ಲಿ ಇದೆ ಆದರೆ ಇಲ್ಲಿನ ನಾಯಕರಿಗೆ ಯಾವುದೇ ರಾಜಾಕೀಯ ಪಕ್ಷದ ನಾಯಕರು ಕರೆಯದೆ ಇರುವುದು ವಿಪರ್ಯಾಸ ಈಗೇ ಆದರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದರು.
ಇನ್ನೂ ಎಂ.ಎಸ್.ಜಯರಾA ಮಾತನಾಡಿ, ಪಕ್ಷಕ್ಕಾಗಿ ಹಗಲು ಇರುಳು ದುಡಿದವರು ಇದ್ದಾರೆ ಆದರೆ ಎಲ್ಲಾರನ್ನು ವಿಶ್ವಸಕ್ಕೆ ಪಡೆದು ಕಾರ್ಯಕರ್ತರನ್ನು ಮುಖಂಡರನ್ನು ಬೆಂಬಲ ಕೋರಬೇಕು ಕೇವಲ ಒಂದೇ ಸಮುದಾಯದ ಜನರು ಮತ ಹಾಕಿದರೆ ಗೆಲ್ಲುತ್ಥಾರೆಯೇ ಆದದರಿಂದ ನರೇಂದ್ರ ಮೋದಿಯನ್ನು ಮತ್ತೆ ಪ್ರಧಾನಿ ಮಂತ್ರಿ ಮಾಡಲು ನಾವೆಲ್ಲಾರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದರು,.
ಮುಖAಡ ದೊರೆಬೈಯಣ್ಣ ಮಾತನಾಡಿ, ಈ ಹಿಂದೆ ಕೇಂದ್ರದ ಮಂತ್ರಿ ಎ.ನಾರಾಯಣಸ್ವಾಮಿ ನಾಯಕ ಸಮುದಾಯಕ್ಕೆ ಏನು ಮಾಡಿಲ್ಲ ಇನ್ನೂ ಕೇವಲ ಐದು ವರ್ಷಗಳ ಕಾಲ ಸಂಸದರಾಗಿ ಒಂದು ದಿನ ಕ್ಷೇತ್ರದಲ್ಲಿ ಪ್ರವಾಸ ಮಾಡದೆ, ಈಗ ರಾಜಾಕೀಯದಿಂದ ಹಿಂದೆ ಸರಿದಿದ್ದಾರೆ ಈಗಲೂ ಸಹ ಅದೇ ರೀತಿ ಮುಂದುವರೆದೆ ನಮ್ಮ ಕಾರ್ಯಕರ್ತರ ಪಾಡೇನು ಎಂದರು.
ಡಾ.ಡಿಎನ್.ಮAಜುನಾಥ್ ಮಾತನಾಡಿ, ಬಿಜೆಪಿ ಪಕ್ಷದ ಆಡಳಿತ ಅವದಿಯಲ್ಲಿ ರಾಜ್ಯದ ಈಡಿ ನಾಯಕ ಸಮುದಾಯಕ್ಕೆ ಒಳಿತನ್ನು ಮಾಡಿದೆ. ಇನ್ನೂ ಈಡೀ ರಾಜ್ಯದಲ್ಲಿ ಕೇವಲ ಒಂದು ವಿಧಾನ ಸಭಾ ಕ್ಷೇತ್ರ ಮಾತ್ರ ಎಸ್‌ಟಿ ಮೀಸಲು ಕ್ಷೇತ್ರ ಇತ್ತು. ಆದರೆ ಅದನ್ನು ಸುಮಾರು 20ಎಸ್‌ಟಿ ಮೀಸಲು ಕ್ಷೇತ್ರಗಳಿಗೆ ಮೀಸಲಿಟ್ಟ ಹೆಗ್ಗಳಿಕೆ ಬಿಜೆಪಿಗೆ ಸಲ್ಲುತ್ತದೆ ಇನ್ನು ನಾಯಕ ಸಮುದಾಯದ ನೌಕರಿ ಪಡೆಯಲು ಕೇವಲ 3ರಷ್ಟು ಇದ್ದ ಮೀಸಲಾತಿ 7ಕ್ಕೆ ಹೆಚ್ಚಿಸಲಾಯಿತು ಒಟ್ಟಾರೆ ನಾಯಕ ಸಮುದಾಯಕ್ಕೆ ಬಿಜೆಪಿ ಅಗ್ರಸ್ಥಾನದ ಕೊಡುಗೆ ನೀಡಿದೆ. ಆದರಂತೆ ಸ್ಥಳಿಯ ಅಭ್ಯರ್ಥಿಗಳು ನಾಯಕ ಸಮುದಾಯವನ್ನು ಕಡೆಗಾಣಿಸದೆ ಅವರನ್ನು ಮುಂದೆ ಹಿಟ್ಟುಕೊಂಡು ಕ್ಷೇತ್ರದಲ್ಲಿ ಪ್ರವಾಸ ಮಾಡಿದರೆ ಗೆಲುವು ನಿಶ್ಚಿತ ಎಂದರು.
ನಗರಸಭೆ ಸದಸ್ಯ ಎಂ.ಜಯಣ್ಣ ಮಾತನಾಡಿ, ನಾಯಕ ಸಮುದಾಯದಲ್ಲಿ ಯಾರೇ ಗೆದ್ದರು ನಾಯಕರನ್ನು ಕಡೆಗಾಣಿಸುತ್ತಾರೆ ಈ ಹಿಂದೆ ಜಿಲ್ಲಾ ಉಸ್ತೂವಾರಿ ಮಂತ್ರಿಯಾಗಿದ್ದ ಶ್ರೀರಾಮುಲು ಹಾದಿಯಲ್ಲಿ ಕಾರ್ಯಕರ್ತರನ್ನು ಮುಖಂಡರನ್ನು ಕಡೆಗಣಿಸಿ ಅವರ ಹಿಂದೆ ಇರುವ ಕೆಲವೆ ಕೆಲವು ಮುಖಂಡರನ್ನು ಮಾತ್ರ ಪರಿಗಣಿಸದರೆ ಅವರಿಗೂ ತಕ್ಕ ಪಾಠ ಕಲಿಸಲಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಇದೇ ಸಂಧರ್ಭದಲ್ಲಿ ಎವಿಬಿಪಿ ಮಂಜುನಾಥ್, ನಗರಸಭೆ ಸದಸ್ಯ ಎಂ.ಜಯಣ್ಣ, ವೆಂಕಟೇಶ, ಪಾಲಮ್ಮ, ಮಾಜಿ ಶಾಸಕ ತಿಪ್ಪೇಸ್ವಾಮಿ, ಪರಾಜಿತ ಅಭ್ಯರ್ಥಿ ಅನಿಲ್ ಕುಮಾರ್, ಎಂ.ಎಸ್.ಜಯರಾA, ದೊರೆಬೈಯಣ್ಣ, ಬಾಲರಾಜು, ಮಂಜುನಾಥ್, ಡಾ.ಮಂಜುನಾಥ್, ಈಶ್ವರ ನಾಯಕ, ತಿಪ್ಪೆಶ್, ಕೃಷ್ಣೇಗೌಡ್ರು, ಇಂದಿರಾ, ನಾಗೇಶ್, ಬಾಲಾರಾಜು, ಇತರ ಮುಖಂಡರು ಇದ್ದರು.