ಚಿತ್ರದುರ್ಗ : ಶಿಕ್ಷಕನಾದವನು ವೃತ್ತಿಯಿಂದ ನಿವೃತ್ತನಾಗಬಹುದು. ಆದರೆ ಅವನು ಜೀವನಪೂರ್ತಿ ಶಿಕ್ಷಕನೇ. ವಿದ್ಯಾರ್ಥಿಗಳಿಗೆ ಕೇವಲ ಪಠ್ಯಕ್ರಮವನ್ನು ಬೋಧಿಸುವುದಲ್ಲ, ಅದರೊಂದಿಗೆ ಬದುಕಿನ ಪಾಠವನ್ನು ಹೇಳುವುದು ಶಿಕ್ಷಕನ ನೈತಿಕ ಜವಾಬ್ದಾರಿಯಾಗಿದೆ ಎಂದು ಪ್ರಾಚಾರ್ಯರಾದ ಡಾ. ಎಸ್.ಹೆಚ್. ಪಂಚಾಕ್ಷರಿ ಹೇಳಿದರು.
ನಗರದ ಚಂದ್ರವಳ್ಳಿಯ ಎಸ್.ಜೆ.ಎಂ. ಪದವಿ ಕಾಲೇಜಿನಲ್ಲಿ ಶನಿವಾರ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಪ್ರೊ. ಜಿ.ಎನ್. ಬಸವರಾಜಪ್ಪನವರಿಗೆ ಬೀಳ್ಕೊಡುಗೆ ಹಾಗು ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಶಿಕ್ಷಕ ರಾಷ್ಟçದ ಬೆನ್ನೆಲುಬು. ಸಮಾಜದ ಅಂಕುಡೊAಕುಗಳನ್ನು ತಿದ್ದುವುದು ಆತನ ನೈತಿಕ ಹಾಗು ಸಾಮಾಜಿಕ ಜವಾಬ್ದಾರಿಯಾಗಿದೆ. ಉತ್ತಮ ಶಿಕ್ಷಕ ಉತ್ತಮ ನಾಗರೀಕನನ್ನು ಸೃಷ್ಟಿಸುತ್ತಾನೆ. ಆ ನಿಟ್ಟಿನಲ್ಲಿ ಇಂದು ನಿವೃತ್ತಿ ಹೊಂದುತ್ತಿರುವ ಜಿ.ಎನ್. ಬಸವರಾಜಪ್ಪನವರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ ಎಂಬುದಕ್ಕೆ ಇಂದು ಕಾಲೇಜು, ಅವರ ಸಹೋದ್ಯೋಗಿಗಳು, ಹಳೆಯ ಹಾಗು ಹಾಲಿ ವಿದ್ಯಾರ್ಥಿಗಳು, ಅಭಿಮಾನಿಗಳು ಹಮ್ಮಿಕೊಂಡಿರುವ ಈ ಸಮಾರಂಭವೇ ಸಾಕ್ಷಿಯಾಗಿದೆ ಎಂದು ಹೇಳಿದರು.
ನಾನು ಅವರನ್ನು ಸಹೋದ್ಯೋಗಿಯಾಗಿ, ಮಿತ್ರನಾಗಿ ನೋಡದೆ ವೃತ್ತಿ ಬದುಕಿನಾಚೆ ಅವರ ವ್ಯಕ್ತಿತ್ವವನ್ನು ಕಂಡಿz್ದೆÃನೆ. ಸತತ ಪರಿಶ್ರಮ, ಆತ್ಮೀಯತೆ, ವೃತ್ತಿಬದ್ಧತೆ, ವಿದ್ಯಾರ್ಥಿಸ್ನೇಹಿ ವ್ಯಕ್ತಿತ್ವ ನಾನು ಅವರಲ್ಲಿ ಕಂಡುಕೊAಡ ಉತ್ತಮ ಗುಣಗಳು. ಅವರ ನಿವೃತ್ತಿ ಬದುಕು ಸುಂದರವಾಗಿರಲೆAದು ಮನದುಂಬಿ ಹಾರೈಸುತ್ತೇನೆ ಎಂದರು.
ಮುಖ್ಯಅತಿಥಿ ರಾಣೇಬೆನ್ನೂರು ಎಸ್‌ಜೆಎಂವಿ ಬಿಎಜೆಎಸ್‌ಎಸ್ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಆರ್.ವಿ. ಹೆಗಡಾಳ್ ಮಾತನಾಡಿ, ನನ್ನ 30ವರ್ಷಗಳ ವೃತ್ತಿಜೀವನದಲ್ಲಿ ನೇರ ನಡೆನುಡಿಗಳನ್ನಾಡುವಂತಹ ಸಹೋದ್ಯೋಗಿ ಮಿತ್ರರಲ್ಲಿ ಪ್ರೊ. ಜಿ.ಎನ್.ಬಿ. ಅವಿಸ್ಮರಣೀಯರು. ಸುಮಾರು 15ವರ್ಷಗಳ ಅವರ ಒಡನಾಟದಲ್ಲಿ ಅವರಿಂದ ನಾನು ಕಲಿತ ಬದುಕಿನ ಪಾಠಗಳು ಬಹಳ. ಎಂತಹ ಕಠಿಣ ಸಂದರ್ಭದಲ್ಲೂ ಅವರು ಕೊಡುತ್ತಿದ್ದ ಸಲಹೆ, ಧೈರ್ಯ ನನ್ನ ಮೇಲೆ ಬಹಳಷ್ಟು ಪರಿಣಾಮ ಬೀರಿವೆ. ಯಾವುದೇ ಶೈಕ್ಷಣಿಕ ಕಾರ್ಯಕ್ರಮಗಳಾಗಲಿ ಶಿಸ್ತು ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳುವ ಇವರ ದೊಡ್ಡಗುಣವನ್ನು ನಾನು ಅವರಿಂದ ಕಲಿತೆ. ತಾತ್ಪೂರ್ತಿಕವಾಗಿ ಅದು ಬಹಳ ಜನರಿಗೆ ವೇದನೆ ಎನಿಸಿರಬಹುದು. ಆದರೆ ಅವರಿಂದ ಕಲಿತಿರುವುದೇ ಬಹಳ ಎಂದು ಅವರೊಂದಿಗಿನ ಒಡನಾಟದ ದಿನಗಳನ್ನು ಮೆಲುಕು ಹಾಕಿದರು.
ತಮ್ಮ ವೃತ್ತಿ ಬದುಕಿನಲ್ಲಿ ಬಡತನದ ಕಾರಣಕ್ಕೆ ಶಿಕ್ಷಣದಿಂದ ಅವಕಾಶ ವಂಚಿತ ವಿದ್ಯಾರ್ಥಿಗಳಿಗೆ ನೀಡಿದ ನೆರವು ಇತ್ಯಾದಿಗಳನ್ನು ತೆರೆಮರೆಯಲ್ಲಿ ಮಾಡಿದ್ದಾರೆ. ನಿವೃತ್ತಿ ನಂತರದಲ್ಲಿ ಕಾಲೇಜು ಹಾಗು ವಿದ್ಯಾರ್ಥಿಗಳಿಗೆ ಅವರ ಮಾರ್ಗದರ್ಶನ, ಸಲಹೆ ಯಾವಾಗಲೂ ಇರಲಿ. ಅವರ ನಿವೃತ್ತಿ ಬದುಕು ಸುಖಕರವಾಗಿರಲಿ ಎಂದು ಹಾರೈಸಿದರು.
ಮತ್ತೋರ್ವ ಅತಿಥಿ ದಾವಣಗೆರೆ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಕೆ. ಮಲ್ಲಿಕಾರ್ಜುನ ಮಾತನಾಡಿ, ಪದವಿ ಅಧ್ಯಯನ ಮಂಡಳಿ ಸದಸ್ಯರಾಗಿ, ಪಠ್ಯಕ್ರಮ ಹಾಗು ಪಠ್ಯಪುಸ್ತಕಗಳ ರೂಪುರೇಷೆ ಸಿದ್ಧಪಡಿಸುವಾಗ ಪ್ರೊ. ಬಸವರಾಜಪ್ಪನವರು ನೀಡಿದ ಸಹಕಾರ, ಹಿರಿಯ ಕಿರಿಯರೆನ್ನದೆ ಎಲ್ಲರನ್ನೂ ಸಮಾನ ಪ್ರೀತಿಯಿಂದ ಕಾಣುತ್ತಿದ್ದ ಅವರ ಮಾನವೀಯ ಅಂತಃಕರಣವನ್ನು ಪ್ರಶಂಸಿಸಿದರು.
ಸAತೇಬೆನ್ನೂರು ಸರ್ಕಾರಿ ಕಾಲೇಜಿನ ಪ್ರಾಚಾರ್ಯ ಪ್ರೊ. ಗಿರಿಸ್ವಾಮಿ ಮಾತನಾಡಿ, ಕಳೆದ 20ವರ್ಷಗಳ ಸ್ನೇಹದಲ್ಲಿ ಬಸವರಾಜಪ್ಪ ಒಬ್ಬ ಅಧ್ಯಾಪಕನಾಗಿ, ಶೈಕ್ಷಣಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲನಾಗಿ, ಎಲ್ಲಕ್ಕು ಮಿಗಿಲಾಗಿ ಸದಾ ಲವಲವಿಕೆಯಿಂದ ಎಲ್ಲರನ್ನು ಅತ್ಯಂತ ಪ್ರೀತಿ ವಿಶ್ವಾಸದಿಂದ ಮಾತನಾಡಿಸುತ್ತ ಎಲ್ಲರ ಮನಸ್ಸನ್ನು ಗೆಲ್ಲುವ ಒಬ್ಬ ಸ್ನೇಹಜೀವಿ. ವೃತ್ತಿ ಬದುಕಿನಾಚೆಗೆ ಇವರ ಪ್ರವೃತ್ತಿಗಳು ನಮ್ಮೆಲ್ಲರಿಗೂ ಅನುಕರಣೀಯ ಎಂದು ಬಣ್ಣಿಸಿದರು.
ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಮಹಾಂತೇಶ್, ವಿಕಾಸ್, ನಪೀಜ್ ಪಾಷ ಮಾತನಾಡಿ, ಬಸವರಾಜಪ್ಪನವರ ಉಪನ್ಯಾಸ ಕೇವಲ ಪಠ್ಯಕ್ಕೆ ಸೀಮಿತವಾಗಿರಲಿಲ್ಲ. ಪಠ್ಯದ ಜತೆಗೆ ನಮ್ಮನ್ನು ಚಿಂತನೆಗೆ ಒಳಪಡಿಸುತ್ತಿದ್ದರು. ಹಳೆಗನ್ನಡ, ಕಾವ್ಯಮೀಮಾಂಸೆಯ ಸೂಕ್ಷö್ಮವಿಚಾರಗಳನ್ನು ಅವರು ಹೇಳುತ್ತಿದ್ದ ರೀತಿಯಿಂದಾಗಿಯೇ ಇಂದು ನಾವು ಕನ್ನಡ ವಿಷಯದ ಬಗ್ಗೆ ಅಭಿಮಾನ ತಾಳಲು, ಅಧ್ಯಯನ ಮಾಡಲು ಸ್ಫೂರ್ತಿಯಾಯಿತು ಎಂದು ತಮ್ಮ ಅಧ್ಯಯನದ ದಿನಗಳನ್ನು ಸ್ಮರಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ರೊ. ಜಿ.ಎನ್. ಬಸವರಾಜಪ್ಪ, 34ವರ್ಷಗಳ ಸುದೀರ್ಘ ಸೇವೆಯ ಕ್ಷಣಗಳನ್ನು ನೆನಪು ಮಾಡಿಕೊಳ್ಳುತ್ತ ಈ ಹೊತ್ತಿನ ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳನ್ನು ಕೇವಲ ಅಂಕಗಳ ಆಧಾರಿತವಾದ ಪರೀಕ್ಷೆಗೆ ಸಜ್ಜುಗೊಳಿಸದೆ ಅವರನ್ನು ಭವಿಷ್ಯದ ಬದುಕಿನ ಪರೀಕ್ಷೆಯಲ್ಲಿ ತೇರ್ಗಡೆಯಾಗುವಂತೆ ಮಾಡುವ ಜವಾಬ್ದಾರಿ ನನ್ನೆಲ್ಲ ಅಧ್ಯಾಪಕರ ಮೇಲಿದೆ. ವಿದ್ಯಾರ್ಥಿಗಳಲ್ಲಿ ಸಂಸ್ಕಾರವನ್ನು ಮಾನವೀಯ ಅಂತಕರಣವನ್ನು ಬೆಳೆಸುವ ನಿಟ್ಟಿನಲ್ಲಿ ಶ್ರಮಿಸಬೇಕಿದೆ. ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ವಿದ್ಯಾರ್ಥಿ ಜೀವನವನ್ನು ಹಾಳು ಮಾಡಿಕೊಳ್ಳದೆ ನಿರಂತರ ಪರಿಶ್ರಮ, ಸತತ ಓದು, ಅಭ್ಯಾಸಗಳ ಮೂಲಕ ಪರಿಪೂರ್ಣ ವ್ಯಕ್ತಿಯಾಗಿ ರೂಪುಗೊಳ್ಳಬೇಕೆಂದು ಕಿವಿಮಾತು ಹೇಳಿದರು. ಸುದೀರ್ಘ 34 ವರ್ಷಗಳ ವೃತ್ತಿಬದುಕಿನಲ್ಲಿ ತಮಗೆ ಆಶ್ರಯವನ್ನು, ಅವಕಾಶವನ್ನು ನೀಡಿದ ಶ್ರೀ ಮುರುಘಾಮಠ ಹಾಗು ವಿದ್ಯಾಪೀಠವು ತೋರಿಸಿದ ಪ್ರೀತಿ, ವಿಶ್ವಾಸ, ಮಮತೆಯನ್ನು ನೆನಪಿಸಿಕೊಳ್ಳುತ್ತ ನಾನು ಯಾವತ್ತೂ ಶ್ರೀಮಠಕ್ಕೆ ಚಿರಋಣಿಯಾಗಿರುತ್ತೇನೆಂದರು.
ಕಾಲೇಜಿನ ವಿಶ್ರಾಂತ ಪ್ರಾಚಾರ್ಯರುಗಳಾದ ಪ್ರೊ. ಹೆಚ್.ಸಿ. ಗಂಗಾAಬಿಕೆ, ಡಾ. ಕೆ.ಸಿ. ರಮೇಶ್, ಪ್ರೊ. ಸಿ. ಬಸವರಾಜಪ್ಪ, ವಿಶ್ರಾಂತ ಪ್ರಾಧ್ಯಾಪಕರುಗಳಾದ ಡಾ. ಎಂ.ಕೆ. ಪ್ರಭುದೇವ್, ಪ್ರೊ. ಕೊಟ್ರೇಶಪ್ಪ, ಪ್ರೊ. ಹೆಚ್.ಕೆ. ಶಿವಪ್ಪ, ಪ್ರೊ. ಎಸ್.ಬಿ. ಶಿವಕುಮಾರ್, ಸಹೋದ್ಯೋಗಿಗಳಾದ ಪ್ರೊ. ಎಲ್. ಶ್ರೀನಿವಾಸ್, ಪ್ರೊ. ಆರ್.ಕೆ. ಕೇದಾರನಾಥ್, ಮಧು ಮುಂತಾದವರು ನಿವೃತ್ತರ ಕುರಿತು ಮಾತನಾಡಿದರು.
ಹಿರಿಯ ಸಂಶೋಧಕರಾದ ಡಾ. ಬಿ. ರಾಜಶೇಖರಪ್ಪ, ನಿವೃತ್ತ ಪ್ರಾಧ್ಯಾಪಕರುಗಳಾದ ಡಾ.ಪಿ. ಯಶೋದ, ಪ್ರೊ. ಸಿ.ಎಂ. ಚಂದ್ರಪ್ಪ, ಪ್ರೊ. ಶ್ರೀನಿವಾಸರೆಡ್ಡಿ, ಪ್ರೊ. ವಿ.ಟಿ. ಹಿರೇಮಠ್, ಕಾಲೇಜಿನ ಬೋಧಕ ಹಾಗು ಬೋಧಕೇತರ ಸಿಬ್ಬಂದಿ, ನಿವತ್ತರ ಕುಟುಂಬದ ಬಂಧುಮಿತ್ರರು ಭಾಗವಹಿಸಿದ್ದರು.
ಸಹದ್ಯೋಗಿಗಳು, ಹಳೆಯ ಹಾಗು ಹಾಲಿ ವಿದ್ಯಾರ್ಥಿಗಳು ತುಂಬಿ ಬಂದ ಕಣ್ಣಾಲಿಗಳಿಂದ ಭಾವಪೂರ್ಣವಾಗಿ ಬೀಳ್ಕೊಟ್ಟರು.
ಆರಂಭದಲ್ಲಿ ಬಿ.ಕಾಂ. ವಿದ್ಯಾರ್ಥಿನಿ ಕು| ವಿದ್ಯಾ ಪ್ರಾರ್ಥಿಸಿದರು. ಗ್ರಂಥಪಾಲಕ ಡಾ. ಸತೀಶ್‌ನಾಯ್ಕ್ ಹೆಚ್. ಸ್ವಾಗತಿಸಿದರು. ಕನ್ನಡ ವಿಭಾಗದ ಡಾ. ರೇವಣ್ಣ ನಿರೂಪಿಸಿದರು.

Namma Challakere Local News
error: Content is protected !!