ಚಳ್ಳಕೆರೆ ನ್ಯೂಸ್ :
ರಾಜ್ಯಾದ್ಯಂತ ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಪರೀಕ್ಷಾ ವಿಭಾಗದ ಯಾವುದೇ ನಕಲು ಹಾಗೂ ಅಕ್ರಮಕ್ಕೆ ಕಡಿವಾಣ ಹಾಕಲು ಈ ಬಾರಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಅದರಂತೆ ಚಳ್ಳಕೆರೆ ತಾಲೂಕಿನ ಸಾವಿರಾರು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರಿಯುತ್ತಿದ್ದಾರೆ ಆದರೆ ಕೆಲವರು ನಕಲು ಮಾಡಲು ಸ್ಥಳಿಯರು ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಆರೋಪವಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸುಸೂತ್ರವಾಗಿ ನಡೆಯಬೇಕು ಯಾವುದೇ ನಕಲು, ಅಕ್ರಮ ನಡೆಯದೆ ಎಲ್ಲಾ ವಿದ್ಯಾರ್ಥಿಗಳು ಪಾರದರ್ಶಕವಾಗಿ ಪರೀಕ್ಷೆ ಬರೆಯಬೇಕು ಎಂಬುದು ಪೋಷಕರ ಒತ್ತಾಸೆ ಹಾಗೂ ಶಿಕ್ಷಣ ಇಲಾಖೆಯ ಆಶಯ.
ಆದರೆ ಅದಕ್ಕೆ ವಿರುದ್ದವಾಗಿ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ನಕಲು ಹಾಗೂ ಆಕ್ರಮಗಳಿಗೆ ಆಸ್ಪದವಿದೆ ಎಂದು ಕೆಲವು ಪೋಷಕರು ಆರೋಪಿಸಿದ್ದಾರೆ.
ಹೌದು ತಾಲೂಕಿನಲ್ಲಿ ಸುಮಾರು18ಪರೀಕ್ಷಾ ಕೇಂದ್ರಗಳಲ್ಲಿ 6 ಕೇಂದ್ರಗಳು ನಗರದಲ್ಲಿ ಇದ್ದರೆ, ಉಳಿದ 12ಪರೀಕ್ಷಾ ಕೇಂದ್ರಗಳು ಗ್ರಾಮೀಣ ಭಾಗದಲ್ಲಿ ಇವೆ. ಆದರೆ ಯಾವುದೇ ಅಕ್ರಮ ಹಾಗೂ ನಕಲು ಮಾಡದಂತೆ ಶಿಕ್ಷಣ ಇಲಾಖೆ ಮುಂಜಾಗ್ರತಾ ಕ್ರಮವಹಿಸಿ, ಸಿಸಿಕ್ಯಾಮರಾ ಅಳವಡಿಕೆ, ಪೊಲೀಸ್ ಸರ್ಪಗಾವಲು, ಈಗೇ ಅಕ್ರಮಕ್ಕೆ ನುಸಳದಂತೆ ಕಡಿವಾಣ ಹಾಕಿದ್ದಾರೆ.
ಆದರೆ ಸಿಸಿಕ್ಯಾಮಾರಾ ಅಳವಡಿಸಿದ ಶಿಕ್ಷಣ ಇಲಾಖೆ ವಿದ್ಯುತ್ ಇಲ್ಲದಾಗ ಬ್ಯಾಟರಿ ಅಥವಾ ಪವರ್ ಬ್ಯಾಕ್ ಅಳವಡಿಸುವುದು ಮರೆತಂತಿದೆ ಆದರೆ ಇದನ್ನೆ ಬಂಡವಾಳಮಾಡಿಕೊAಡ ಕೆಲವರು ಪರೀಕ್ಷಾ ಸಮಯದಲ್ಲಿ ವಿದ್ಯುತ್ ಕಡಿತಗೊಳಿಸಿ ಅಕ್ರಮ, ನಕಲು ಮಾಡಲು ಅವಕಾಶ ಮಾಡಿಕೊಡುತ್ತಾರೆ ಎಂದು ಕೆಲವು ಪೋಷಕರ ಆರೋಪ ಮಾಡುತ್ತಾರೆ
ಒಂದು ವರ್ಷಗಳ ಕಾಲ ಶಿಸ್ತಿನಿಂದ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಪಾಡೆನು ಅಕ್ರಮ ನಕಲು ತಡೆಯಬೇಕು ಶಿಕ್ಷಣ ಇಲಾಖೆ ಯಾವ ಕ್ರಮ ಕೈಗೊಳ್ಳುತ್ತೆ, ಇದರಿಂದ ಮಕ್ಕಳ ಭವಿಷ್ಯದ ಮೇಲೆ ಒಡೆತ ಬಿದ್ದಂತಾಗುತ್ತದೆ, ಈ ಕೂಡಲೆ ಸಿಸಿ ಕ್ಯಾಮರಾಗಳಿಗೆ ವಿದ್ಯುತ್ ಪ್ರವಯಿಸಬೇಕು ಇಲ್ಲವಾದರೆ ಪರಿರ್ಯಾಯ ಮಾರ್ಗ ಕಂಡುಕೊಳ್ಳಬೇಕು ಕೇವಲ ಪರೀಕ್ಷೆ ಮಾಡುತ್ತೆವೆ ಎಂಬುದು ಬೇಡ ಎಂದು ಪೋಷಕರು ಕಿಡಿಕಾರಿದ್ದಾರೆ