ಚಳ್ಳಕೆರೆ : ಮೇ4 ರ ಬುಧವಾರ ಸಂಜೆ ಸುರಿದ ಮಳೆ ಹಾಗೂ ಬಿರುಗಾಳಿಗೆ 8 ಮನೆಗಳಿಗೆ ಹಾನಿಯಾಗಿದೆ. ಚಳ್ಳಕೆರೆ ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳಲ್ಲಿ ನಾಲ್ಕು ಹೋರಿಗಳು, 12 ತೆಂಗಿನ ಮರಗಳು, 8ಮನೆ ಗೋಡೆಗಳು ಶೀಟ್‌ಗಳು, ಮೇಲ್ಛಾವಣಿಗಳು ಬಿದ್ದಿವೆ ಎಂದು ತಹಶೀಲ್ದಾರ ಎನ್.ರಘುಮೂರ್ತಿ ವೀಕ್ಷಣೆ ಮಾಡಿ ಮಾತನಾಡಿದ್ದಾರೆ.
ನಿನ್ನೆ ಸುರಿದ ಮಳೆಗೆ ಚಳ್ಳಕೆರೆ ತಾಲೂಕಿನ ಮಲ್ಲೂರಹಳ್ಳಿ ಗ್ರಾಮದ ಜಮೀನಿನಲ್ಲಿ ನಿರ್ಮಿಸಿಕೊಂಡಿರುವ ಮನೆಗೆ ಗುರುವಾರ ಸಿಡಿಲು ಬಡಿದು ಸಂಪೂರ್ಣವಾಗಿ ಮನೆ ಹಾನಿಯಾಗಿದೆ. ಸಿಡಿಲಿನ ರಭಸಕ್ಕೆ ಮನೆಯ ಮೇಲ್ಚಾವಣಿ ಸಂಪೂರ್ಣವಾಗಿ ಮುಗುಚಿ ಬಿದ್ದಿದ್ದು ಈ ಮನೆಯು ಪರ್ವತಯ್ಯ ಎಂಬ ರೈತರಿಗೆ ಸೆರಿದ್ದಾಗಿದೆ. ಮನೆಯಲ್ಲಿ ನಾಗರಾಜ ಮಲ್ಲೇಶ, ಮಲ್ಲಮ್ಮ ಎಂಬ ಒಂದೇ ಕುಟುಂಬದ ಮೂರು ಜನರಿದ್ದು ಪ್ರಾಣಪಾಯದಿಂದ ಪಾರಾಗಿದ್ದು ಸಣ್ಣಪುಟ್ಟ ಗಾಯಗಳಾಗಿ ಸಾರ್ವಜನಿಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೂ ಚಳ್ಳಕೆರೆ ತಾಲ್ಲೂಕಿನ ತಳಕು ಹಾಗೂ ನಾಯಕನಹಟ್ಟಿ ಹೋಬಳಿಯಲ್ಲಿ ಅತಿಹೆಚ್ಚು ಸೀಟಿನ ಮನೆಗಳು ಹಳೆಯ ಮನೆಗಳು ದುರಸ್ಥಿಯಲ್ಲಿರುವ ಮನೆಗಳು ಇವೆ ಎಂದು ಕಂಡು ಬರುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದೆ. ಹಾಗಾಗಿ ಆರಂಭದಲ್ಲಿ ಮಳೆಯ ಆರ್ಭಟ ಜೋರಾಗಿರುತ್ತದೆ ಹಾಗಾಗಿ ಸಾರ್ವಜನಿಕರು ಹಳೆಯ ಗೋಡೆಗಳ ಪಕ್ಕದಲ್ಲಿ ಮರಗಳ ಕೆಳಗಡೆ ವಿದ್ಯುತ್ ಪರಿವರ್ತಕಗಳ ಬಳಿ ಹಾಗೂ ವಿದ್ಯುತ್ ಕಂಬಗಳ ಬಳಿ ಮೊಬೈಲ್ ಟವರ್ ಬಳಿ ನಿಲ್ಲುವುದಾಗಿ, ತಂಗುವುದು ಆಗಲಿ ಮಾಡಬಾರದು ಕಾರಣ ಎಲ್ಲಾ ತಾಣಗಳಲ್ಲಿ ಸಿಡಿಲಿನ ಆಕರ್ಷಣೆ ಹೆಚ್ಚಾಗಿರುತ್ತದೆ ಇದರಿಂದ ಪ್ರಾಣಹಾನಿ ಸಂಭವ ಹೆಚ್ಚಾಗಿರುತ್ತದೆ ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

Namma Challakere Local News
error: Content is protected !!