ಚಳ್ಳಕೆರೆ : ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು ಇನ್ನು ಮುಂದೆ ನಾಡಿನ ಜನತೆಯ ನಾಡಿ ಮಿಡಿತವಾಗಬೇಕು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು

ಚಳ್ಳಕೆರೆ ನಗರದ ಜಯಣ್ಣ ಬಿಇಡಿ ಕಾಲೇಜಿನಲಿ ಏರ್ಪಡಿಸಿದ್ದ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ

ಸರ್ಕಾರಿ ಅಧಿಕಾರಿ ನೌಕರರು ಕನ್ನಡ ಭಾಷೆಯ ಉಳಿಸುವ ನಿಟ್ಟಿನಲ್ಲಿ ದೀಕ್ಷೆ ತೊಡಬೇಕು ಹಾಗೂ ಕನ್ನಡ ಭಾಷೆ ಬೇರೆ ಬೇರೆ‌ ಭಾಷೆಗಳಿಗಿಂತ ವಿಭಿನ್ನ ವಾದ ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿದ್ದು

ಇತ್ತಿಚನ ದಿನಗಳಲ್ಲಿ ಕನ್ನಡ ಭಾಷೆಗಿಂತ ಬೇರೆ ಬೇರೆ ಭಾಷಗಳ ಪ್ರಭಾವ ಹೆಚ್ಚುತ್ತಿದ್ದೆ ನಾವು ಬೇರೆ ಬೇರೆ ಭಾಷೆ ಕಲಿಯುವುದಕ್ಕೆ ವರ್ಷಗಳೆ ಬೇಕು ಅನ್ಯದೇಶದವರು ನಮ್ಮ ಕನ್ನಡ ಭಾಷಯನ್ನು ಕೆಲವೆ ದಿನಗಳಲ್ಲಿ ಕಲಿಯುತ್ತಾರೆ

ಅದಕ್ಕೆ ಈ ಕನ್ನಡ ಭಾಷೆ ಎನ್ನುವುದು ಇಷ್ಟೊಂದು ಸುಲಭ ಈ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯಾಸಕ್ತ ರಿಂದ ಹೊಸ ಹೊಸ ಪುಸ್ತಕ ಪ್ರಕಟಣೆ ಕನ್ನಡ ಸಾಹಿತ್ಯದ ಬಗ್ಗೆ ಹೊಸ ಹೊಸ ಚರ್ಚೆಗಳು ವಿಭಿನ್ನವಾದ ಸಭೆ-ಸಮಾರಂಭಗಳನ್ನು ಆಯೋಜಿಸಿ ಇದರ ಮುಖಾಂತರ ಕನ್ನಡದ ಆಸಕ್ತಿ ಮತ್ತು ಸದಭಿರುಚಿಯನ್ನು ತಾಲೂಕಿನ ಜನರಿಗೆ ತಲುಪಿಸುವ ಕೆಲಸವಾಗಬೇಕೆಂದು ಹೇಳಿದರು

ಈದೇ ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್ ಮಾತನಾಡಿ, ಕರ್ನಾಟಕದಲ್ಲಿ ಬಳಸಲಾಗುವ ಕನ್ನಡ ಭಾಷೆಯನ್ನು ದೇಶದ ಪ್ರಮುಖ ಭಾಷೆಗಳಲ್ಲಿ ಒಂದಾಗಿ ಭಾರತೀಯ ಸಂವಿಧಾನವು ಗುರುತಿಸಿದೆ ಎಂದರು

ತಹಸೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ಕರ್ನಾಟಕದ ಬಹುತೇಕ ಜನರಿಗೆ ಕನ್ನಡವು ಮಾತೃಭಾಷೆಯಾಗಿದೆ ಇಂತಹ ಕನ್ನಡ ಭಾಷೆ ಉಳಿಸಿ ಬೆಳಸಲು ಎಲ್ಲಾರು ಕೈಜೋಡಿಸಬೇಕು,ಕನ್ನಡ ಹುಟ್ಟಿನ ಬಗ್ಗೆ ರನ್ನ ಪಂಪನ ತ್ರಿಪದಿ ಬಗ್ಗೆ ರಾಘವಾಂಕನ ಕವಿರಾಜಮಾರ್ಗದ ಬಗ್ಗೆ ಮತ್ತು ಪರಿಹರ ರಗಳೆಯ ಉಪನ್ಯಾಸ ನೀಡಿದರು .

ಸಮಾರಂಭದಲ್ಲಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವೀರಭದ್ರಪ್ಪ ,ಸಾಹಿತಿಗಳಾದ ಮೋದೂರು ತೇಜ ಜಗದೀಶ ಉಪನ್ಯಾ,ಉಪನ್ಯಾಸಕರುಗಳಾದ ರಾಜಣ್ಣ, ಚಿತ್ತಯ್ಯ ವಿವೇಕಾನಂದ ಕಾಲೇಜಿನ ಆಡಳಿತಾಧಿಕಾರಿ ಪ್ರಮೀಳಾ ಮತ್ತಿತರು, ಉಪಸ್ಥಿತರಿದ್ದರು

Namma Challakere Local News
error: Content is protected !!