ಚಳ್ಳಕೆರೆ ನ್ಯೂಸ್ :
ಅವನ ಮಗನಿಗೆ ಟಿಕೆಟ್ ತಪ್ಪಿಸುವಷ್ಟು ದೊಡ್ಡ ಲೀಡರ್
ಅಲ್ಲ
ಹೊಳಲ್ಕಕೆರೆ ಶಾಸಕ ಚಂದ್ರಪ್ಪನ ಮಗನ ಟಿಕೆಟ್ ತಪ್ಪಿಸುವಷ್ಟು ದೊಡ್ಡ
ಲೀಡರ್ ಅಲ್ಲ. ಪಕ್ಷದ ವರಿಷ್ಠರು ಕಾಂಬಿನೇಷನ್ಸ್ ನೋಡಿ ಟಿಕೆಟ್
ಕೊಡುತ್ತಾರೆ,
ಪಕ್ಷದ ವರಿಷ್ಠರ ಆದೇಶ ಅವರಿಗೆ ಟಿಕೆಟ್ ಕೊಟ್ಟು
ಕಳುಹಿಸಿದ್ದಾರೆ ಎಂದು ಮಾಜಿ ಶಾಸಕ ಜಿ. ಹೆಚ್ ತಿಪ್ಪಾರೆಡ್ಡಿ
ಹೊಳಲ್ಕೆರೆ ಶಾಸಕ ಚಂದ್ರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ಆ
ಪೋತಪ್ಪ ನಾಯಕನ ಮಗನಿಗೆ ಟಿಕೆಟ್ ಸಿಗುವ ಭರವಸೆ ಇರಲಿಲ್ಲ.
ಅವನು ನಾನು ಮತ್ತು ಯಡಿಯೂರಪ್ಪ ಟಿಕೆಟ್ ತಪ್ಪಿಸಿದ್ದಾರೆಂದು
ಹೇಳುತ್ತಿದ್ದಾನೆ ನಾನು ರಾಜಕಾರಣ ಮಾಡುವಾಗ ಅವನು ನಿಕ್ಕರ್
ಹಾಕಿಕೊಂಡು ಚಳ್ಳಕೆರೆಯಲ್ಲಿದ್ದ ಎಂದು ಮಾಜಿ ಶಾಸಕ ತಿಪ್ಪಾರೆಡ್ಡಿ
ಹೊಳಲ್ಕೆರೆ ಶಾಸಕ ಚಂದ್ರಪ್ಪ ಮೇಲೆ ಕೆಂಡ ಕಾರಿದರು.
ಅವರು
ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು. ಪಕ್ಷದ
ವರಿಷ್ಠರು ಮಾಹಿತಿ ಕೇಳಿದಾಗ ಹೇಳದೆ ಹೆದರಿ ನಾನು ಕೂರಲು
ಸಾಧ್ಯವಿಲ್ಲ. ನಾನು ಹಿಂದೆ ಬಿದ್ದು ಟಿಕೆಟ್ ತಪ್ಪಿಸಿದ್ದೇನೆ ಅನ್ನೋದಕ್ಕೆ
ಅವನ ಮಗ ದೊಡ್ಡ ಲೀಡರ್ ಅಲ್ಲ ಎಂದರು.