ವರಿಷ್ಠರ ಆದೇಶ ಪಾಲಿಸುವುದು ನನ್ನ ಕರ್ತವ್ಯ
ಕೇಂದ್ರ ಸಚಿವ ಎ.
ನಾರಾಯಣಸ್ವಾಮಿ ನಾನು ರಾಜ್ಯ ರಾಜಕಾರಣದಲ್ಲಿರುತ್ತೇನೆಂದು
ಹೇಳಿದ್ದು,
ನನ್ನನ್ನು ಶಿಫಾರಸ್ಸು ಮಾಡಿದ್ದು, ವರಿಷ್ಠರ ಸೂಚನೆ
ಪಾಲಿಸುವುದು ನನ್ನ ಕರ್ತವ್ಯವೆಂದು ಚಿತ್ರದುರ್ಗ ಲೋಕಸಭಾ
ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಹೇಳಿದರು.
ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದರು. ನಾನು
ಪಕ್ಷದ ಆದೇಶ ಧಿಕ್ಕರಿಸಲ್ಲ, ಮೋದಿ ಮತ್ತೆ ಪ್ರಧಾನಿ ಆಗಬೇಕೆನ್ನೋದು
ನಮ್ಮ ಆಸೆ, ಈ ಬಾರಿ ಜೆಡಿಎಸ್ ಕೈ ಜೋಡಿಸಿದೆ.
ನಾಯಕರ
ಜೊತೆ ಸಮನ್ವಯತೆ ಆಗಿದೆ. ಕಾರ್ಯಕರ್ತರಿಗೆ ಕೆಲಸ ಮಾಡುವಂತೆ
ಹೇಳಿದ್ದಾರೆಂದರು.