ಮತಗಟ್ಟೆಗಳಲ್ಲಿ ಮೂಲಭೂತ ಸೌಲಭ್ಯ ಇರುವಂತೆ ಸೆಕ್ಟೆರ್ ಅಧಿಕಾರಿಗಳು ಕ್ರಮವಹಿಸಿಬೇಕು : ಚುನಾವಣೆ ಅಧಿಕಾರಿ ಬಿ.ಆನಂದ್
ಚಳ್ಳಕೆರೆ ನ್ಯೂಸ್ : ಮತಗಟ್ಟೆಗಳಲ್ಲಿ ಬಿಎಲ್ ಓ ಗಳು ಕುದ್ದಾಗಿ ಹಾಜರಿರಬೇಕು, ಸೆಕ್ಟರ್ ಅಧಿಕಾರಿಗಳು ಬೇಟಿ ನೀಡಿದಾಗ ಮತಗಟ್ಟೆಗಳಲ್ಲಿ ಇರುವ ಸಮಸ್ಯೆಗಳ ಬಗ್ಗೆ ಸೆಕ್ಟರ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಸಹಾಯಕ ಚುನಾವಣಾ ಅಧಿಕಾರಿ ಬಿ.ಆನಂದ ಹೇಳಿದರು.
ಅವರು ನಗರದ ತಾಲೂಕು ಕಛೇರಿಯಲ್ಲಿ ಸೆಕ್ಟರ್ ಅಧಿಕಾರಿಗಳು, ಮಾಸ್ಟರ್ ಟ್ರೈನಿಂಗ್ ಗಳಿಗೆ ಕರೆದಿದ್ದ ಸಭೆಯಲ್ಲಿ ಮಾತನಾಡಿದರು. ಮತಗಟ್ಟೆಗಳಲ್ಲಿ ಕುಡಿಯುವ ನೀರು, ಶೌಚಾಲಯ ಹಾಗೂ ವಿದ್ಯುತ್ , ಇರುವಂತೆ ಮತಗಟ್ಟೆಯಲ್ಲಿ ಮುಂಜಾಗ್ರತ ಕ್ರಮವಹಿಸಿ, ಶೌಚಾಲಯ, ಹಾಗೂ ವಯೋವೃದ್ದರಿಗೆ ರ್ಯಾಂಪ್ ವ್ಯವಸ್ಥೆ, ಈಗೇ ಎಲ್ಲಾ ಮೂಲಭೂತ ಸೌಕರ್ಯಗಳ ಬಗ್ಗೆ ಇನ್ನು ಎರಡು ದಿನದಲ್ಲಿ ಮಾಹಿತಿ ನೀಡಬೇಕು, ತಾಲೂಕಿನಲ್ಲಿ ಸು.12 ಕ್ರಿಟಿಕಲ್ ಮತಗಟ್ಟೆಗಳು, ಹಾಗೂ ನಾಲ್ಕು ಬೆಳೆಗೆರೆ, ಪೇಲಾರಹಟ್ಟಿ, ಸಿದ್ದೇಶನ ದುರ್ಗ ಹಾಗೂ ಗಾಂಧಿನಗರದ ಮತಗಟ್ಟೆಗಳನ್ನು ಗುರುತಿಸಲಾಗಿದೆ,
ಬಿಸಿಲಿನ ತಾಪ ಹೆಚ್ಚಿದೆ ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಮತಗಟ್ಟೆಗಳಲ್ಲಿ ನೆರಳಿನ ವ್ಯವಸ್ಥೆ, ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಳ್ಳಿ, ಏ.7 ರಂದು ಸೆಕ್ಟರ್ ಅಧಿಕಾರಿಗಳಿಗೆ ತರಬೇತಿಯನ್ನು ನೀಡಲಾಗುತ್ತದೆ ಎಂದರು,
ತಹಶಿಲ್ದಾರ್ ರೇಹಾನ್ ಪಾಷ ಮಾತನಾಡಿ, ಶಾಲೆಗಳಲ್ಲಿ ಬಿಎಲ್ ಓಗಳು ಕುದ್ದಾಗಿ ಹಾಜರಿರಬೇಕು, ಸೆಕ್ಟರ್ ಅಧಿಕಾರಿಗಳು, ಮಾಹಿತಿ ಕೆಳಿದಾಗ ಕಾಲ ಕಾಲಕ್ಕೆ ತಕ್ಕಂತೆ ಮಾಹಿತಿ ನೀಡಬೇಕು, ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 260, ಮತಗಟ್ಟೆಗಳು ಇವೆ, ಅದರಲ್ಲಿ ಸು. 78 ಮತಗಟ್ಟೆಗಳಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಇವೆ, ಅವುಗಳನ್ನು ನೀತಿ ಸಂಹಿತೆ ಜಾರಿಯಾಗುವ ಮುಂಚೆಯೇ ಅಧಿಕಾರಿಗಳು ಗಮನಹರಿಸಬೇಕು ಎಂದರು.
ಇದೇ ಸಂಧರ್ಭದಲ್ಲಿ ತಹಶಿಲ್ದಾರ್ ರೇಹಾನ್ ಪಾಷ, ಬಿಇಓ ಕೆಎಸ್.ಸುರೇಶ್, ತಾಪಂ ಇಓ, ಲಕ್ಷ್ಮಣ, ನಗರಸಭೆ ಪೌರಾಯುಕ್ತ ಜೀವನ್ ಕೆ, ಕುಡಿಯುವ ನೀರು ಇಲಾಖೆ ಎಇಇ ದಯಾನಂದ, ಎಇಇ ಕಾವ್ಯ, ತಾಲೂಕು ಪಂಚಾಯತ ಸಹಾಯಕ ನಿರ್ದೇಶಕ ಸಂತೋಷ, ಸಂಪತ್ , ಕೃಷಿ ಅಧಿಕಾರಿ ಅಶೋಕ್, ತೋಟಗಾರಿಕೆ ಅಧಿಕಾರಿ ವಿರೂಪಾಕ್ಷಪ್ಪ ಇತರರು ಇದ್ದರು.