ಚಳ್ಳಕೆರೆ : ಮತದಾನ ಪವಿತ್ರವಾದದ್ದು ಆದ್ದರಿಂದ ಯಾರೂ ಕೂಡ ಮತದಾನದಿಂದ ಹಿಂದೆ ಸರಿಯದೆ ಮತದಾನ ಕೇಂದ್ರಕ್ಕೆ ಬಂದು ಮತದಾನ ಮಾಡಬೇಕು ಎಂದು ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾಪಂ.ಇಓ ಲಕ್ಷ್ಮಣ್ ಹೇಳಿದರು.
ಅವರು ನಗರದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಚುನಾವಣೆ ಸ್ವೀಪ್ ಸಮಿತಿಯಿಂದ ಆಯೋಜಿಸಿದ್ದ ಲೋಕಸಭಾ ಚುನಾವಣೆ ಅಂಗವಾಗಿ ಮತದಾನ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು,
ತಹಶೀಲ್ದಾರ್ ರೇಹಾನ್ ಪಾಷ, ಮಾತನಾಡಿ, ಪ್ರತಿಯೊಬ್ಬರು ಮತದಾನದಿಂದ ಹಿಂದೆ ಸರಿಯಾದೆ ಹದಿನೆಂಟು ವರ್ಷ ತುಂಬಿದ ಪ್ರತಿಯೊಬ್ಬರು ಮತದಾನ ಮಾಡಬೇಕು, ಚುಣಾವಣೆ ಅಕ್ರಮಗಳಲ್ಲಿ ಭಾಗಿಯಾಗದೆ, ಮತದಾನ ಪ್ರತಿಜ್ಞನಾ ವಿಧಿಯನ್ನು ಮಾಡಬೇಕು, ಅದರಂತೆ ಗ್ರಾಮದ ಸರ್ವತೋಮುಖ ಅಭಿವೃದ್ದಿಗೆ ಚುನಾವಣೆ ಬಹು ಮುಖ್ಯವಾಗುತ್ತದೆ ,ಆದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿ ಎಂದರು.
ಈ ಸಂಧರ್ಭದಲ್ಲಿ ತಹಶೀಲ್ದಾರ್ ರೇಹಾನ್ ಪಾಷ, ನಗರಸಭೆ ಪೌರಾಯುಕ್ತ ಜೀವನ್ ಕೆ, ಆರೋಗ್ಯ ಅಧಿಕಾರಿ ಡಾ.ಕಾಶಿ, ಸಹಾಯಕ ಅಧಿಕಾರಿ ಕುದಾಪುರ ತಿಪ್ಪೇಸ್ವಾಮಿ, ಹಾಗೂ ಆಶಾ ಕಾರ್ಯಕರ್ತೆಯರು, ಹಾಗೂ ನಗರಸಭೆ ಪೌರಕಾರ್ಮಿಕರು ಹಾಗು ಸಿಬ್ಬಂದಿ ಪಾಲ್ಗೊಂಡಿದ್ದರು,
ಇನ್ನೂ ಮತದಾನ ಜಾಗೃತಿ ಜಾಥದಿಂದ ನಗರದ ವಾಲ್ಮೀಕಿ ವೃತದಿಂದ ನೆಹರು ವೃತ್ತ ರವರಿಗೆ ಜಾಗೃತಿ ಮೂಡಿಸಿದರು.