ಚಳ್ಳಕೆರೆ ನ್ಯೂಸ್ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚೆಕ್ ಪೋಸ್ಟ್ ಹಾಗೂ ಮತಗಟ್ಟೆಗಳನ್ನು ತಪಾಸಣೆ ಮಾಡಿದ ಚುನಾವಣೆ ಅಧಿಕಾರಿ ಬಿ.ಆನಂದ್
ಹೌದು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಎಸಗದಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದರು, ಸಹ ಕೆಲವು ಅಕ್ರಮಣಕಾರಿ ವ್ಯಕ್ತಿಗಳು ನಗದು ಹಾಗೂ ಚುನಾವಣೆಗೆ ಆಮೀಷ ಹೊಡ್ಡುವ ವಸ್ತುಗಳನ್ನು ರವಾನಿಸುತ್ತಾರೆ. ಇತಂಹವುಗಳನ್ನು ಕಡಿವಾಣ ಹಾಕಲು ಚುನಾವಣೆ ಕಟ್ಟುನಿಟ್ಟಿನ ಸೂಚನೆ ಸಹ ನೀಡಿದೆ.
ಆದರಂತೆ ಚಿತ್ರದುರ್ಗ ಲೋಕಸಭಾ ಅಖಾಡದಲ್ಲಿ ಯಾವುದೇ ಅಕ್ರಮ ಎಸಗದಂತೆಮುಂಜಾಗ್ರತ ಕ್ರಮ ವಹಸಿದ ಜಿಲ್ಲಾಧಿಕಾರಿಗಳು ಹಾಗೂ ಆಯಾ ತಾಲೂಕು ಚುನಾವಣೆ ಅಧಿಕಾರಿಗಳು ದಿನನಿತ್ಯದ ಚೆಕ್‌ಪೋಸ್ಟ್ ಗಳನ್ನು ತಪಾಸಣೆ ಮಾಡುತ್ತಿದ್ದಾರೆ.
ಅದರಂತೆ ಇಂದು ಚಳ್ಳಕೆರೆ ಕ್ಷೇತ್ರ ವ್ಯಾಪ್ತಿಯ ಬೋಗಳರಹಟ್ಟಿ ಚೆಕ್‌ಪೋಸ್ಟ್ ಗೆ ಚುನಾವಣೆ ಅಧಿಕಾರಿ ಬಿ.ಆನಂದ್ ಬೇಡಿ ನೀಡಿ ರಸ್ತೆಯಲ್ಲಿ ವಾಹನಗಳ ತಪಾಸಣೆ ನಡೆಸಿ ನಂತರ ದಿನ ನಿತ್ಯ ವಾಹನಗಳ ಓಡಾಟದ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದರು.
ಇನ್ನೂ ವಿಶ್ವವಾಣಿ ಪತ್ರಿಕೆಯೊಂದಿಗೆ ಮಾಹಿತಿ ಹಂಚಿಕೊಂಡ ಅವರು, ಲೋಕಸಭಾ ಚುನಾವಣೆಯಲ್ಲಿ ಯಾವುದೇ ರೀತಿಯಲ್ಲಿ ಅಕ್ರಮ ಎಸಗದಂತೆ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ, ಇನ್ನೂ ಇದಕ್ಕೆ ಮೀರಿ ಅಕ್ರಮವಾಗಿ ನಗದು ಅಥವಾ ಯಾವುದೇ ರೀತಿಯ ವಸ್ತುವಿನ ಚೆಕ್ ಪೋಸ್ಟ್ ನಲ್ಲಿ ಸೂಕ್ತವಾದ ದಾಖಲೆ ನೀಡದಿದ್ದಲ್ಲಿ ಜಪ್ತಿ ಮಾಡಲಾಗುವುದು ಎಂದರು.
ಇದೇ ಸಂಧರ್ಭದಲ್ಲಿ ಹುಣಸೇಟ್ಟೆ, ಬೋಗಳರಹಟ್ಟಿ, ಇಗೇ ಹಲವು ಚುನಾವಣೆ ಮತಗಟ್ಟೆಗಳಿಗೆ ಬೇಟಿ ನೀಡಿ ಮತಗಟ್ಟೆಗಳಲ್ಲಿನ ಮೂಲಭೂತ ಸೌಲಭ್ಯಗಳ ಬಗ್ಗೆ ಪರೀಶಿಲಿಸಿದರು. ಇನ್ನೂ ಕುಡಿಯುವ ನೀರು, ಶೌಚಾಲಯ, ಬೆಳಕಿನ ವ್ಯವಸ್ಥೆ, ವಿಕಲಚೇತನರಿಗೆ ರ್ಯಾಂಪ್ ವ್ಯವಸ್ಥೆ ಈಗೇ ಎಲ್ಲಾ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದು ಸ್ಥಳ ಪರೀಶಿಲನೆ ನಡೆಸಿದರು.
ಇದೇ ಸಂಧರ್ಭದಲ್ಲಿ ಸಿಬ್ಬಂದಿ ಶ್ರೀಧರ್, ಪೊಲೀಸ್ ಅಧಿಕಾರಿಗಳು ಹಾಜರಿದ್ದರು.