ಚಳ್ಳಕೆರೆ ನ್ಯೂಸ್ : 2024 ರ ಲೋಕ‌ ಸಮರಕ್ಕೆ‌ ಈಗಾಗಲೇ ‌ದಿನಾಂಕ‌ ನಿಗಧಿಯಾಗಿ ಈಡೀ ದೇಶದಲ್ಲಿ ಏಳು ಹಂತದ ಚುನಾವಣೆಗೆ ಆದೇಶ ಹೊರಡಿಸಿದ ಅಧಿಕಾರಿಗಳು ‌ಕರ್ನಾಟಕ ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಸಲು ಅಧಿಕಾರಿಗಳು ಸನ್ನದು ಹಾಗಿದ್ದಾರೆ.
ಅದರಂತೆ 14 ಕ್ಷೇತ್ರಗಳು ಮೊದಲ ಹಂತದಲ್ಲಿ ಚುನಾವಣೆ ನಡೆದರೆ ಇನ್ನೂ 14. ಕ್ಷೇತ್ರಗಳಲ್ಲಿ ಎರಡನೇ ಹಂತದಲ್ಲಿ ಮತದಾನ ನಡೆಯುತ್ತಿದೆ

ಅದರಂತೆ ಮೊದಲ ಹಂತದ ಮತದಾನದಲ್ಲಿ‌ ಕಲ್ಲಿನ ಕೋಟೆ ಚಿತ್ರದುರ್ಗ ಲೋಕಸಭಾ ಕ್ಷೇತ್ರ ಸಜ್ಜಾಗಿದ್ದು ನೀತಿಸಂಹಿತೆ ಕೂಡ‌ಜಾರಿಯಾಗಿ ಸುಮಾರು ಚೆಕ್‌ಪೋಸ್ಟ್ ಗಳನ್ನು ಹಾಲಿ ಅಕ್ರಮ ಕ್ಕೆ ಕಡಿವಾಣ ಹಾಕಿದ್ದಾರೆ.

ಅದರಂತೆ ಜಿಲ್ಲಾಧಿಕಾರಿ ‌ವೆಂಕಟೇಶ್ ಹಾಗೂ ತಹಶಿಲ್ದಾರ್ ರೇಹಾನ್ ಪಾಷ ರವರು ಇಂದು ಜಂಟಿಯಾಗಿ ಚಳ್ಳಕೆರೆ ತಾಲೂಕಿನ ಸುಮಾರು ಐದು ಚೆಕ್‌ಪೋಸ್ಟ್ ಗಳಿಗೆ‌ಬೇಟಿ‌ನೀಡಿ ಅಲ್ಲಿನ ವ್ಯವಸ್ಥೆ ಹಾಗೂ ‌ವಾಹನಗಳ ತಪಾಸಣೆ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಅದರಂತೆ ಚಳ್ಳಕೆರೆ ನಗರದ ಕೆಇಬಿ ಮುಂಬಾಗದ ಚೆಕ್‌ಪೋಸ್ಟ್ ಗೆ ಮೊದಲಿಗೆ ಬೇಟಿ ನೀಡಿದ‌ ಅವರು ಚಿತ್ರದುರ್ಗ ಮಾರ್ಗದ ವಾಹನಗಳ ತಪಾಸಣೆ ಹಾಗೂ ಇನ್ನಿತರೆ ಮಾಹಿತಿಯನ್ನು ಪಡೆದು ನಂತರ ಆಂದ್ರಪ್ರದೇಶದಿಂದ ಅಕ್ರಮವಾಗಿ ಯಾವುದೇ ರೀತಿಯಲ್ಲಿ ಸಾಗಟವಾಗಬಾರದು ಎಂದು ತಾಲೂಕಿನ ಜಾಜೂರು ವ್ಯಾಪ್ತಿಯಲ್ಲಿ ನಿರ್ಮಿಸಿದ ಚೆಕ್‌ಪೋಸ್ಟ್ ಗೆ‌ ಬೇಟಿ ನೀಡಿ ತಪಾಸಣೆ ನಡೆಸಿದರು.

ನಂತರ ಬಳ್ಳಾರಿ ಮಾರ್ಗದ ಚೆಕ್‌ಪೋಸ್ಟ್ ಹಾಗೂ ಬೆಂಗಳೂರು ಮಾರ್ಗದ ರೋಜ್ ಹೋಟೆಲ್ ಬಳಿ , ಹಾಗೂ ನಾಗಪನಹಳ್ಳಿ ಗೇಟ್ ಬಳಿಯ ಚೆಕ್‌ಪೋಸ್ಟ್ ಗೆ ಬೇಟಿ ನೀಡಿ ವಾಹನಗಳ ತಪಾಸಣೆ ಮಾಹಿತಿ ಪಡೆದರು

ಇದೇ ಸಂದರ್ಭದಲ್ಲಿ ತಹಶಿಲ್ದಾರ್ ರೇಹಾನ್ ಪಾಷ, ಹಾಗೂ ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ವರ್ಗ ಹಾಜರಿದ್ದರು.

About The Author

Namma Challakere Local News
error: Content is protected !!