ರಾಮಾಂಜನೇಯ ಕೆ.ಚನ್ನಗಾನಹಳ್ಳಿ

ಚಳ್ಳಕೆರೆ : ಮಧ್ಯ ಕರ್ನಾಟಕದ ಐತಿಹಾಸಿಕ ಜಾತ್ರೆಯೆಂದು ಎಂದೇ ಖ್ಯಾತಿ ಪಡೆದ ಕಾಯಕ ಯೋಗಿ ಶ್ರೀಗುರು ತಿಪ್ಪೆರುದ್ರಸ್ವಾಮಿ ಬ್ರಹ್ಮರಥೋತ್ಸವ ಜರುಗಲಿದೆ.
ಮಧ್ಯ ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ಎಲ್ಲಾ ಜನರ ಆರಾಧ್ಯ ದೈವನಾಗಿದ್ದಾನೆ. ರಥೋತ್ಸವಕ್ಕೆ ರಾಜ್ಯದ ನಾನಾ ಕಡೆಯಿಂದ ಬರುವ ಭಕ್ತಾಧಿಗಳು ಸಾಕ್ಷಿಯಾಗುತ್ತಾರೆ, ಇಲ್ಲಿನ ವಿಶೇಷ ಎಂದರೆ ಹೊರಮಠ, ಒಳಮಠಗಳ ಜತೆ ಸುತ್ತ ಮುತ್ತಲ ಸ್ಥಳಗಳು ಧಾರ್ಮಿಕ ಹಾಗು ಐತಿಹಾಸಿಕ ಮಹತ್ವ ಪಡೆದು ಪ್ರೇಕ್ಷಣೀಯ ಸ್ಥಳಗಳಾಗಿವೆ. ಒಳಮಠ ಸ್ವಾಮಿ ನೆಲೆಸಿದ ಸ್ಥಳವಾದರೆ, ಹೊರಮಠ ಜೀವೈಕ್ಯ ಸಮಾಧಿಯಾದ ಸ್ಥಳ, ಮಾಡಿದಷ್ಟು ನೀಡು ಭಿಕ್ಷೆ ಎಂಬ ಅಕ್ಷಯ ಪಾತ್ರೆಯನ್ನು ಹೊಂದಿದ ಶ್ರೀ ಕಾಯಕಯೋಗಿ ಗುರು ತಿಪ್ಪೆರುದ್ರನ ಬ್ರಹ್ಮರಥೋತ್ಸವ ಸಂಭ್ರಮ ಸಡಗರದಿಂದ ಜರುಗಲಿದೆ.
ಒಳಮಠದ ವಿಶೇಷ ;
ಆಂದ್ರ ಪ್ರದೇಶದ ರಾಯ ದುರ್ಗದ ಮೂಲಕ ಕರ್ನಾಟಕಕ್ಕೆ ಆಗಮಿಸಿದ ತಿಪ್ಪೇರುದ್ರ ಸ್ವಾಮಿಗಳು ಇಲ್ಲಿ ನೆಲಸಿದ್ದ ಮಾರಿಯನ್ನು ಹೊರಕ್ಕೆ ಹಾಕಿ ಮಾರಿ ದೇವಾಲಯದಲ್ಲಿ ನೆಲೆಸುತ್ತಾರೆ. ಅಂದಿನಿAದಲೂ ಒಳಮಠ ಶ್ರೀಗಳು ನೆಲೆಸಿದ ದೇವಾಲಯವಾಗಿದೆ. ದೇವಾಲಯದ ರಾಜಗೋಪುರ ಅಥವಾ ವಿಮಾನಗೋಪುರ ಎಂದು ಕರೆಯಲ್ಪಡುವ ಗೋಪುರ ಪ್ರಮುಖ ಆಕರ್ಷಣೆ. 75 ಅಡಿ ಎತ್ತರವಿರುವ ಚಿನ್ನ ಲೇಪಿತ ಕಳಶ ಹಾಗು ಗೋಪುರ ದೂರದಿಂದಲೇ ಭಕ್ತರನ್ನು ಕೈ ಬೀಸಿ ಕರೆಯುತ್ತದೆ. ಭಕ್ತನೊಬ್ಬ 17ನೇ ಶತಮಾನದಲ್ಲಿ ಮಹಾ ಗೋಪುರವನ್ನು ನಿರ್ಮಿಸಿದ್ದಾನೆ. ಗೋಪುರ ಆಯುತಾಕಾರದ ಜಗಲಿಯ ಮೇಲೆ ಗಾರೆಯಿಂದ ನಿರ್ಮಿಸಲಾಗಿದೆ.

ರಾಜ ಗೋಪುರದಲ್ಲಿ ನೂರಾರು ಗಾರೆಯ ಶಿಲ್ಪಗಳು ಪ್ರಮುಖ ಆಕರ್ಷಣೆ. ಆನೆಗಳ ಸಾಲು, ರಾಮಾಯಣ, ಮಹಾಭಾರದ ಪ್ರಮುಖ ಘಟನಾವಳಿಗಳ ಚಿತ್ರಣ, ಮದನಿಕ ಚಿತ್ರಗಳು ಗಮನ ಸೆಳೆಯುತ್ತವೆ. ಬ್ರಿಟಿಷರು ಆಗಮನ ನಂತರ ಭಾರತೀಯ ಶಿಲ್ಪಯುಗದಲ್ಲಿ ಉಂಟಾದ ಪ್ರಭಾವವನ್ನು ಇಲ್ಲಿನ ಚಿತ್ರಗಳ ಸ್ಪಷ್ಟವಾಗಿ ಗುರುತಿಸಬಹುದು. ಹಲವಾರು ಚಿತ್ರಗಳಲ್ಲಿ ಬ್ರಿಟಿಷರ ವೇಷಭೂಷಣಗಳನ್ನು ಚಿತ್ರಗಳಲ್ಲಿ ಕಾಣಬಹುದು. ರಾಜ ಗೋಪುರ ದಾಟಿ ಒಳ ಪ್ರವೇಶಿಸುತ್ತಿದ್ದಂತೆ ಮುಖ ಮಂಟಪದ ಕಪ್ಪು ಗ್ರಾನೈಟ್ ಸ್ತಂಭಗಳು ಗಮನಸೆಳೆಯುತ್ತವೆ. ಅದ್ಬುತವಾದ ಶಿಲ್ಪ ಕಲಾಕೃತಿಗಳು ಗಣಪತಿ, ಶಿವ ಸೇರಿದಂತ ಹತ್ತಾರು ಚಿತ್ರಾಕೃತಿಗಳು ಕಪ್ಪು ಶಿಲೆಯಲ್ಲಿ ಮೈದಳೆದಿವೆ.

ಗರ್ಭ ಗುಡಿಯಲ್ಲಿ ಉತ್ಸವ ಮೂರ್ತಿ, ಹಾಗು ಸ್ಥಿರ ಮೂರ್ತಿಗಳಿಗೆ ನಿತ್ಯ ತ್ರಿಕಾಲ ಪೂಜೆ ಸಲ್ಲುತ್ತದೆ. ಇತ್ತೀಚಿಗೆ ಸ್ವಾಮಿಯ ಮುಖಕ್ಕೆ ಚಿನ್ನದ ಮುಖವಾಡವನ್ನು ಹೊದಿಸಲಾಗಿದೆ. ಜಾತ್ರೆಯ ಕಂಕಣ ದಾರಣೆ, ಸಂಕ್ರಾAತಿ ದಿನಗಳ ಸಮಯದಲ್ಲಿ ಬೆಳ್ಳಿ ರಥದ ಉತ್ಸವ ನಡೆಯುತ್ತದೆ. ದೇವಾಲಯದ ಹಿಂಭಾಗದಲ್ಲಿ ರುದ್ರಾಭೀಷೇಕವನ್ನು ನಡೆಸಲಾಗುವುದು.

ಹೊರಮಠ ;

ಭಕ್ತರಿಗಷ್ಟೇ ಅಲ್ಲದೆ, ಇತಿಹಾಸಕಾರರು ಹಾಗು ಸಂಶೋಧಕರಿಗೂ ಪ್ರೇಕ್ಷಣೀಯ ಸ್ಥಳವಾಗಿದೆ. ಒಳಮಠದಲ್ಲಿ ವೀರಶೈವ ಪಂಗಡದವರು ಅರ್ಚಕರಾದರೆ, ಹೊರಮಠದಲ್ಲಿ ನಾಯಕ ಜನಾಂಗದವು ಅರ್ಚಕರಾಗಿದ್ದಾರೆ. ಒಳಮಠವು ಹಿಂದೂ ಶಿಲ್ಪ ಕಲಾ ಶೈಲಿಯಲ್ಲಿದ್ದರೆ, ಹೊರಮಠವು ಹಿಂದೂ ಸಾರ್ಸೆನಿಕ್ , ಹಾಗು ಇಸ್ಲಾಂ ಕಲಾಕೃತಿಯ ವಿಶೇಷವನ್ನು ಹೊಂದಿದೆ. ಎಲ್ಲ ಹಿಂದೂ ದೇವಾಲಯಗಳಲ್ಲಿ ಗೋಪುರಗಳಿದ್ದರೆ, ಹೊರಮಠದಲ್ಲಿ ಮಾತ್ರ ಮಸೀದಿಗಳಂತೆ ಗುಂಬಜ್ ರೂಪದಲ್ಲಿ ನಿರ್ಮಿಸಲಾಗಿದೆ. ಗೋಲ್ ಗುಂಬಜ್ ರೀತಿಯ ಗುಂಡನೆಯ ರಚನೆಯ ಗುಂಬಜ್ ಗಮನ ಸೆಳೆಯುತ್ತದೆ. ಹೀಗಾಗಿ ಹೊರಮಠವು ಹಿಂದೂ ಮುಸ್ಲೀಂ ಧರ್ಮಗಳ ಭಾವೈಕ್ಯ ಸಂಗಮವಾಗಿದೆ. ಗ್ರಾಮ ಹಾಗು ಸುತ್ತಲಿನ ನೂರಾರು ಮುಸ್ಲೀಂ ಜನರು ದೇವಾಲಯದ ದರ್ಶನ ಪಡೆಯುತ್ತಾರೆ. ಪ್ರತಿ ಸೋಮವಾರ ನಡೆಯುವ ವಾರೋತ್ಸವದಲ್ಲಿ ದೇವರಿಗೆ ಕಾಯಿ, ಹಣ್ಣು ನೀಡಿ ಪೂಜೆ ಸಲ್ಲಿಸುವ ಸಂಪ್ರದಾಯವನ್ನು ಮುಸ್ಲೀಂರು ಹೊಂದಿದ್ದಾರೆ.
25 ಅಡಿ ವ್ಯಾಸ ಹಾಗು 35 ಅಡಿ ಎತ್ತರದ ಗುಂಬಜ್‌ನ್ನು ಇಟ್ಟಿಗೆ ಹಾಗು ಗಾರೆಯಿಂದ ನಿರ್ಮಿಸಲಾಗಿದೆ. ಗುಂಬಜ್ ಕೆಳಮಧ್ಯ ಭಾಗದಲ್ಲಿ ತಿಪ್ಪೇರುದ್ರ ಸ್ವಾಮಿ ಸಮಾಧಿಯನ್ನು ನಿರ್ಮಿಸಲಾಗಿದೆ. ವಿಶಾಲ ಪ್ರದೇಶದಲ್ಲಿರುವ ಹೊರಮಠಕ್ಕೆ ಹೊಂದಿಕೊAಡAತೆ ಸ್ವಾಮಿಗಳು ನಿರ್ಮಿಸಿದ ಚಿಕ್ಕ ಕೆರೆ ಇದೆ. ಪ್ರಶಾಂತ ಹಾಗು ಉತ್ತಮ ವಾತಾವರಣದಲ್ಲಿರುವ ದೇವಾಲಯ ಭಕ್ತರು ಪ್ರಮುಖ ಧಾರ್ಮಿಕ ಸ್ಥಳ.

ಏಕಾಂತ ಮಠ. ;
ಗ್ರಾಮದಿಂದ ನಾಲ್ಕು ಕಿಮೀ ದೂರದಲ್ಲಿ ರಾಜ್ಯ ಹೆದ್ದಾರಿ 45 ಪಕ್ಕದಲ್ಲಿರುವ ಸ್ಥಳ ಏಕಾಂತೇಶ್ವರ ದೇವಾಲಯ. ತಿಪ್ಪೇರುದ್ರ ಸ್ವಾಮಿಗಳು ಗ್ರಾಮದಿಂದ ದೂರ ಬಂದು ಏಕಾಂತವಾಗಿ ಕುಳಿತು ತಪಸ್ಸು ನಡೆಸುತ್ತಿದ್ದರಂತೆ. ಹೀಗಾಗಿ ಏಕಾಂತವಾಗಿ ತಪಸ್ಸು ಆಚರಣೆ ನಡೆಸಿದ ಸ್ಥಳ ಏಕಾಂತೇಶ್ವರ ದೇವಾಲಯವಾಗಿದೆ. ದೇವಾಲಯ ಪಕ್ಕದಲ್ಲಿರುವ ಗುಹೆ ಹಲವು ಆಸಕ್ತಿಗಳಿಗೆ ಕಾರಣವಾಗಿದೆ. ಇಲ್ಲಿನ ಗುಹೆಯಲ್ಲಿ ಶ್ರೀಗಳು ಏಕಾಂತವಾಗಿ ಕುಳಿತು ಧ್ಯಾನಾಸಕ್ತರಾಗುತ್ತಿದ್ದರು. ಇಲ್ಲಿರುವ ಗುಹೆಯಿಂದ ಕಾಶಿಗೆ ಸುರಂಗ ಮಾರ್ಗವಿದೆ ಎಂಬ ನಂಬಿಕೆಯನ್ನು ಇಲ್ಲಿಯ ಜನರು ಹೊಂದಿದ್ದಾರೆ. ಆದರೆ ಗುಹೆಯಿಂದ ಮುಂದುವರಿಯುವ ಮಾರ್ಗವನ್ನು ಇತ್ತಿಚೆಗೆ ಮುಚ್ಚಲಾಗಿದೆ. ಈಗಲೂ ಹಲವಾರು ಜನರು ಗುಹೆ ಪ್ರವೇಶಿಸಿ ಅಲ್ಲಿರುವ ಮೂರ್ತಿಗೆ ಪೂಜೆ ಸಲ್ಲಿಸಿ ಧ್ಯಾನ ಮಾಡುತ್ತಾರೆ.

ಹಿರೇಕೆರೆ :

ತಿಪ್ಪೇರುದ್ರöಸ್ವಾಮಿಗಳು 5ಗ್ರಾಮಗಳು ಹಾಗು 5 ಕೆರೆಗಳನ್ನು ಜನರ ನೆರವಿನಿಂದ ನಿರ್ಮಿಸಿದ್ದಾರೆ. ದೊಡ್ಡಕೆರೆ, ಚಿಕ್ಕಕೆರೆ, ರಾಮಸಾಗರ ಕೆರೆಗಳು ಸೇರಿದಂತೆ 5 ಕೆರೆಗಳು ಅಂತರ್ಜಲದ ಪ್ರಮುಖ ಮೂಲಗಳಾಗಿವೆ. 17-18ನೇ ಶತಮಾನದಲ್ಲಿ ನಿರ್ಮಿಸಲಾದ ಕೆರೆಗಳು ಇಂದಿಗೂ ಜನರು ಜಲ ಸಂಪನ್ಮೂಲದ ಜೀವನಾಡಿಗಳಾಗಿವೆ. ಗ್ರಾಮದಿಂದ 5 ಕಿ.ಮೀ. ದೂರದಲ್ಲಿರುವ ಹಿರೇ ಕೆರೆ ಜಿಲ್ಲೆಯ ಪ್ರಮುಖ ಕೆರೆಯಾಗಿದೆ. 450 ಎಕರೆ ಪ್ರದೇಶದಲ್ಲಿ ನೀರು ನಿಲ್ಲುವ ಕೆರೆ 2500 ಎಕರೆ ಪ್ರದೇಶಕ್ಕೆ ನೀರುಣಿಸುತ್ತದೆ. 1.2 ಕಿ.ಮೀ. ಉದ್ದ ಹಾಗು 52 ಅಡಿ ಅಗಲದ ಕೆರೆಯ ಏರಿ ಅತ್ಯಂತ ಸುರಕ್ಷಿತ ಹಾಗು ಬಲಿಷ್ಠವಾಗಿ ನಿರ್ಮಿಸಲಾಗಿದೆ.

ಹೊಸ ಗುಡ್ಡ ;
ನಾಯಕನಹಟ್ಟಿ – ಚಿತ್ರದುರ್ಗ ರಸ್ತೆಯಲ್ಲಿ ಬೋಸೇ ದೇವರ ಹಟ್ಟಿ ಗ್ರಾಮದ ಬಳಿಯಿರುವ ಹೊಸಗುಡ್ಡದಲ್ಲಿ ಶಿಲ್ಪ ಕಲಾಕೃತಿಯ ಸೊಬಗನ್ನು ಕಾಣಬಹುದು. ಕರ್ನಾಟಕದಲ್ಲಿ ಗುಹಾಂತರ ದೇವಾಲಯವನ್ನು ಹೊಂದಿರುವ ಏಕೈಕ ಸ್ಥಳ ಇದಾಗಿದೆ. ಮಹಾರಾಷ್ಟçದ ಅಜಂತಾ, ಎಲ್ಲೋರ, ಕರ್ನಾಟಕ ಐಹೊಳೆಗಳು ಉಳಿದಂತೆ ಇಲ್ಲಿ ಮಾತ್ರ ಗುಹಾಂತರ ದೇವಾಲಯವನ್ನು ಕಾಣಬಹುದು. ಐಹೊಳೆಯಲ್ಲಿರುವ ಕಲ್ಲು ಮೃದುವಾದ ಸೋಪ್ ಸ್ಟೋನ್ ಜಾತಿಯದು. ಆದರೆ ಇಲ್ಲಿಯದು ಕಠಿಣವಾದ ಗ್ರಾನೈಟ್ ಬಗೆಯದ್ದಾಗಿದೆ.

ಬಾಕ್ಸ್ ಮಾಡಿ :

ಬಯಲು ಸೀಮೆಯ ನೇತರ ಮಹಾ ಸಾದ್ವಿ ಯುಗ ಪುರುಷ ಶ್ರೀ ಗುರು ತಿಪ್ಪೆರುದ್ರಸ್ವಾಮಿ, ಇಲ್ಲಿ ನೆಲೆಸಿರುವುದು ಈ ಮಧ್ಯ ಕರ್ನಾಟಕ ಭಾಗದ ಭಕ್ತಾಧಿಗಳ ಪುಣ್ಯ, ಕಾಯಕಯೋಗಿ ತನ್ನ ಪವಾಡವನ್ನು ನಾಡಿನ ಉದ್ದಗಲಕ್ಕೂ ಪಸರಿಸುತ್ತಾ ಅಪಾರ ಭಕ್ತರ ಬಳಗವನ್ನು ಹೊಂದಿ ಮಾಡಿದಷ್ಟು ನೀಡು ಬಿಕ್ಷೆ ಎಂಬ ತತ್ವವನ್ನು ಸಾರಿದ ಇವರು ಮಧ್ಯ ಕರ್ನಾಟಕದ ಆರಾಧ್ಯ ದೈವವಾಗಿದ್ದಾರೆ.
—ರೇಹಾನ್ ಪಾಷ ತಹಶೀಲ್ದಾರ್ ಚಳ್ಳಕೆರೆ

ಮಾಡಿದಷ್ಟು ನೀಡು ಬಿಕ್ಷೆ ಎಂಬ ಅಕ್ಷಯ ಪಾತ್ರೆಯನ್ನು ಹೊಂದಿದ ಶ್ರೀ ಕಾಯಕಯೋಗಿ ಗುರುತಿಪ್ಪೆರುದ್ರನ ಬ್ರಹ್ಮರಥೋತ್ಸವ ಇಂದು ಸಂಭ್ರಮ ಸಡಗರದಿಂದ ಜರುಗಲಿದೆ. ಮಧ್ಯ ಕರ್ನಾಟಕದ ಐತಿಹಾಸಿಕ ಜಾತ್ರೆಯೆಂದು ಎಂದೇ ಖ್ಯಾತಿ ಪಡೆದ ಕಾಯಕ ಯೋಗಿ ಶ್ರೀಗುರು ತಿಪ್ಪೆರುದ್ರಸ್ವಾಮಿ ಬ್ರಹ್ಮರಥೋತ್ಸವ ಜರಗಲಿದೆ.
—ಗಂಗಾಧರ್ ಕಾರ್ಯನಿರ್ವಾಹಕ ಅಧಿಕಾರಿ ಮುಜರಾಯಿ

ಮಧ್ಯ ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ಎಲ್ಲಾ ಜನರ ಆರಾಧ್ಯ ದೈವನಾಗಿದ್ದಾನೆ. ಮಾರ್ಚ 26ರಂದು ಇಂದು ನಡೆಯುವ ರಥೋತ್ಸವಕ್ಕೆ ರಾಜ್ಯದ ನಾನಾ ಕಡೆಯಿಂದ ಬರುವ ಭಕ್ತಾಧಿಗಳು ಸಾಕ್ಷಿಯಾಗುತ್ತಾರೆ,— ಬಿ.ಶಕುಂತಲಾ ಉಪತಹಶೀಲ್ದಾರ್ ನಾಯಕನಹಟ್ಟಿ ನಾಡಕಛೇರಿ.

ಪೋಟೋ, ನಾಯಕನಹಟ್ಟಿ ಹೊಳಮಠದ ಗೋಪುರ
ಪೋಟೋ, ನಾಯಕನಹಟ್ಟಿ ಹಟ್ಟಿ ತಿಪ್ಪೆಶನ ಜಾತ್ರೆ
ಪೋಟೊ, ನಾಯಕನಹಟ್ಟಿ ಶ್ರೀ ಗುರುತಿಪ್ಪೆರುದ್ರಸ್ವಾಮಿಯ ಹೊರಮಠ

About The Author

Namma Challakere Local News
error: Content is protected !!