–
*ಚಿತ್ರದುರ್ಗ :
ಚುನಾವಣಾ ಆಯೋಗದ ನಿರ್ದೇಶನದಂತೆ ಮೊದಲ ಹಂತದ ವಿದ್ಯುನ್ಮಾನ ಮತ ಯಂತ್ರ, ನಿಯಂತ್ರಣ ಘಟಕ ಹಾಗೂ ಮತ ಖಾತ್ರಿ ಯಂತ್ರಗಳ ತಂತ್ರಾಂಶ ಆಧಾರಿತ ಯಾದೃಚ್ಛಿಕರಣ ಮಾಡಾಗಿದೆ. ವಿಧಾನಸಭಾ ಕ್ಷೇತ್ರವಾರು ಈ ಯಂತ್ರಗಳನ್ನು ಭೌತಿಕವಾಗಿ ಹಂಚಿಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.
ಬುಧವಾರ ಮುಂಜಾನೆ ಬೆಳಿಗ್ಗೆ 7 ಗಂಟೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳ ಸಮಕ್ಷಮದಲ್ಲಿ ತಂತ್ರಾಂಶ ಆಧಾರಿಸಿದ ಯಾದೃಚ್ಛಿಕರಣ(Randomization) ಕಾರ್ಯ ನಡೆಸಿ ಅವರು ಮಾತನಾಡಿದರು.
ಹೆಚ್ಚುವರಿಯಾಗಿ ಶೇ.25 ರಷ್ಟು ವಿದ್ಯುನ್ಮಾನ ಮತಯಂತ್ರ (ಬ್ಯಾಲೆಟ್ ಯನಿಟ್) ಹಾಗೂ ನಿಯಂತ್ರಣ ಘಟಕಗಳು (ಕಂಟ್ರೋಲ್ ಯುನಿಟ್), ಶೇ.30 ರಷ್ಟು ಹೆಚ್ಚುವರಿ ಮತ ಖಾತ್ರಿ ಯಂತ್ರಗಳ(ವಿವಿಪ್ಯಾಟ್) ಒಳಗೊಂಡಂತೆ ತಂತ್ರಾಂಶ ಆಧಾರಿತ ಯಾದೃಚ್ಛಿಕರಣ ನಡೆಸಲಾಗಿದೆ. ಜಿಲ್ಲೆಯ 6 ವಿಧಾನ ಸಭಾ ಕ್ಷೇತ್ರಗಳಲ್ಲಿ 1661 ಮತಗಟ್ಟೆಗಳಿವೆ. ಈ ಸಂಖ್ಯೆಗೆ ಅನುಪಾತವಾಗಿ 2074 ವಿದ್ಯುನ್ಮಾನ ಮತಯಂತ್ರ ಹಾಗೂ ನಿಯಂತ್ರಣ ಘಟಕಗಳು, 2157 ಮತ ಖಾತ್ರಿ ಯಂತ್ರಗಳನ್ನು ಹಂಚಿಕೆ ಮಾಡಲಾಗಿದೆ. 944 ವಿದ್ಯುನ್ಮಾನ ಮತಯಂತ್ರ, 6 ನಿಯಂತ್ರಣ ಘಟಕ ಹಾಗೂ 28 ಮತಖಾತ್ರಿ ಯಂತ್ರಗಳನ್ನು ಹೆಚ್ಚುವರಿಯಾಗಿ ಮೀಸಲು ಇರಿಸಲಾಗಿದೆ. ಸೆಪ್ಟೆಂಬರ್ ಮಾಹೆಯಲ್ಲಿಯೇ ಮತಯಂತ್ರಗಳ ಮೊದಲ ಹಂತದ ಪರಿಶೀಲನೆ ಕಾರ್ಯ ನಡೆಸಲಾಗಿದೆ. ಎಲ್ಲಾ ಯಂತ್ರಗಳು ಸುಸ್ಥಿತಿಯಲ್ಲಿವೆ. ಚುನಾವಣೆ ವೀಕ್ಷಕರ ಸಮ್ಮುಖದಲ್ಲಿ ಎರಡನೇ ಹಂತದ ಯಾದೃಚ್ಛಿಕರಣ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.
ಮೊಳಕಾಲ್ಮೂರು ವಿಧಾನ ಸಭಾಕ್ಷೇತ್ರ ವ್ಯಾಪ್ತಿಯಲ್ಲಿ 285 ಮತಗಟ್ಟೆಗಳಿವೆ. 356 ವಿದ್ಯುನ್ಮಾನ ಮತಯಂತ್ರ ಹಾಗೂ ನಿಯಂತ್ರಣ ಘಟಕ ಹಾಗೂ 370 ಮತ ಖಾತ್ರಿಯಂತ್ರ ಹಂಚಿಕೆ ಮಾಡಲಾಗಿದೆ.
ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 260 ಮತಗಟ್ಟೆಗಳಿವೆ. 325 ವಿದ್ಯುನ್ಮಾನ ಮತಯಂತ್ರ ಹಾಗೂ ನಿಯಂತ್ರಣ ಘಟಕ ಹಾಗೂ 338 ಮತ ಖಾತ್ರಿಯಂತ್ರ ಹಂಚಿಕೆ ಮಾಡಲಾಗಿದೆ.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 288 ಮತಗಟ್ಟೆಗಳಿವೆ. 360 ವಿದ್ಯುನ್ಮಾನ ಮತಯಂತ್ರ ಹಾಗೂ ನಿಯಂತ್ರಣ ಘಟಕ ಹಾಗೂ 374 ಮತ ಖಾತ್ರಿಯಂತ್ರ ಹಂಚಿಕೆ ಮಾಡಲಾಗಿದೆ.
ಹಿರಿಯೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 287 ಮತಗಟ್ಟೆಗಳಿವೆ. 358 ವಿದ್ಯುನ್ಮಾನ ಮತಯಂತ್ರ ಹಾಗೂ ನಿಯಂತ್ರಣ ಘಟಕ ಹಾಗೂ 373 ಮತ ಖಾತ್ರಿಯಂತ್ರ ಹಂಚಿಕೆ ಮಾಡಲಾಗಿದೆ.
ಹೊಸದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 242 ಮತಗಟ್ಟೆಗಳಿವೆ. 302 ವಿದ್ಯುನ್ಮಾನ ಮತಯಂತ್ರ ಹಾಗೂ ನಿಯಂತ್ರಣ ಘಟಕ ಹಾಗೂ 314 ಮತ ಖಾತ್ರಿಯಂತ್ರ ಹಂಚಿಕೆ ಮಾಡಲಾಗಿದೆ.
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 299 ಮತಗಟ್ಟೆಗಳಿವೆ. 373 ವಿದ್ಯುನ್ಮಾನ ಮತಯಂತ್ರ ಹಾಗೂ ನಿಯಂತ್ರಣ ಘಟಕ ಹಾಗೂ 388 ಮತ ಖಾತ್ರಿಯಂತ್ರ ಹಂಚಿಕೆ ಮಾಡಲಾಗಿದೆ.
ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಿರಾ ಹಾಗೂ ಪಾವಗಡ ವಿಧಾನಸಭಾ ಕ್ಷೇತ್ರಗಳ ಯಾದೃಚ್ಛಿಕರಣ ಕಾರ್ಯ ತುಮಕೂರು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜರುಗಲಿದೆ.
ತಂತ್ರಾಶ ಆಧಾರಿತ ಯಾದೃಚ್ಛಿಕರಣ ಕಾರ್ಯದ ಬಳಿಕ, ಕುಂಚಿಗನಾಳ್ ಗ್ರಾಮ ಸಮೀಪದ ವಿದ್ಯುನ್ಮಾನ ಮತಯಂತ್ರಗಳ ಉಗ್ರಾಣದಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳ ಸಮಕ್ಷಮದಲ್ಲಿ ಮತಯಂತ್ರಗಳ ದಾಸ್ತಾನು ಇರಿಸಿದ ಕೊಠಡಿಗಳ ಬೀಗ ತೆರೆಯಲಾಯಿತು. ನಂತರ ಅವುಗಳನ್ನು ಎತ್ತುವಳಿ ಮಾಡಿ ಭೌತಿಕವಾಗಿ ಯಂತ್ರಗಳ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಸಹಾಯಕ ಚುನಾವಣೆ ಅಧಿಕಾರಿಗಳಾಗಿ ವಿವಿಧ ವಿಧಾನ ಸಭಾಕ್ಷೇತ್ರಗಳಿಗೆ ನೇಮಕವಾಗಿರುವ, ಉಪವಿಭಾಗಧಿಕಾರಿ ಎಂ.ಕಾರ್ತಿಕ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಸನಗೌಡ ಕೋಟೂರ, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಬಿ.ಆನಂದ, ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂಸ್ವಾಧೀನಾಧಿಕಾರಿ ಹೆಚ್.ಎನ್.ಶಿವೇಗೌಡ, ಯೋಜನಾ ನಿರ್ದೇಶಕ ಎಂ.ಮಹೇಂದ್ರಕುಮಾರ್, ಭದ್ರಾ ಮೇಲ್ದಂಡೆ ಯೋಜನೆ ವಿಶೇಷ ಭೂ ಸ್ವಾಧೀನಾಧಿಕಾರಿ ವಿವೇಕಾನಂದ, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಡಿ.ಎನ್.ಮೈಲಾರಪ್ಪ, ಯಶವಂತಕುಮಾರ್, ಗೌಸ್‌ಪೀರ್, ಲಕ್ಷ್ಮಮ್ಮ ಉಪಸ್ಥಿತರಿದ್ದರು.