ಚಳ್ಳಕೆರೆ:
ನೀತಿ ಸಂಹಿತೆ ಅನ್ನುವುದು ಚುನಾವಣೆ ಬಂದಾಗ ಎಲ್ಲರೂ ಅನುಸರಿಸಬೇಕಾದ ಕಾನೂನು ಆಗಿದೆ, ಈ ಹಿನ್ನಲೆಯಲ್ಲಿ ಪ್ರತಿಯೊಬ್ಬ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರು ಕಡ್ಡಾಯವಾಗಿ ಬಿಲ್ ಹಾಕಿ ಮಧ್ಯ ಮಾರಾಟ ಮಾಡಬೇಕು ಎಂದು ಅಬಕಾರಿ ಉಪನಿರೀಕ್ಷಕ ನಾಗರಾಜ್ ಎಚ್ಚರಿಕೆ ನೀಡಿದರು,
ಇವರು ನಗರದ ಅಬಕಾರಿ ಕಚೇರಿಯಲ್ಲಿ ಆಯೋಜಿಸಿದ ನೀತಿ ಸಂಹಿತೆ ಕಾನೂನಿನ ನಿಯಮವನ್ನು ಬಾರ್ ಮಾಲೀಕರಿಗೆ ಅರಿವು ಮೂಡಿಸಿ ಮಾತನಾಡಿದ ಇವರು,
ಯಾವುದೇ ಚುನಾವಣೆ ಬರಲಿ ನೀತಿ ಸಮಿತಿ ಆಧಾರದ ಮೇಲೆ ಕಾನೂನು ಉಲ್ಲಂಘನೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದಾಗಿರುತ್ತದೆ,
ಈ ನಿಟ್ಟಿನಲ್ಲಿ ಗಡಿ ಭಾಗದ ಬಾರ್ ಗಳು ಅಕ್ರಮವಾಗಿ ಮಧ್ಯ ಸಾಗಾಟ ಮಾಡುತ್ತಿವೆ ಎಂದು ನಮಗೆ ದೂರು ಬಂದಿದೆ,
ಅಲ್ಲದೆ ಒಬ್ಬ ಮನುಷ್ಯನಿಗೆ ನಿಗದಿಪಡಿಸಿರುವ ಹಾಗೆ ಬಿಲ್ ಹಾಕಿ ಮಧ್ಯ ಕೊಡಬೇಕು ನೀತಿ ಸಂಹಿತೆ ಇರುವಾಗ ಎಲ್ಲೆಂದರಲ್ಲಿ ಮಧ್ಯಗಳನ್ನು ಕುಡಿದು ಬಾಟಲಿಗಳನ್ನು ಎಸೆಯುವುದು ಕಾನೂನು ಬಾಹಿರವಾಗಿರುತ್ತದೆ,
ಹಾಗೂ ನಿಗದಿಪಡಿಸಿರುವ ಸಮಯದ ಮುಂಚೆಯೇ ಅಂಗಡಿ ಬಾಗಿಲನ್ನು ತೆಗೆಯಕೂಡದು ಇದು ಅಲ್ಲದೆ ಬಾರ್ ಮಾಲೀಕರು ತಿಂಗಳ ಲೆಕ್ಕಗಳನ್ನು ನಮ್ಮ ಅಧಿಕಾರಿಗಳಿಗೆ ತೋರಿಸಬೇಕು,
ಹಾಗೂ ಗಡಿ ಭಾಗದ ಅಕ್ರಮ ಮಧ್ಯ ರವಾನಿಗೆ ಅಬಕಾರಿ ಇಲಾಖೆಯಿಂದ ಚೆಕ್ಪೋಸ್ಟ್ ನಿರ್ಮಿಸಲಾಗಿದ್ದು,
ಇದು ಬಿಟ್ಟು ನೀವೇನಾದರೂ ಕಾನೂನು ಉಲ್ಲಂಘಿಸಿದ್ದಲ್ಲಿ ಬಾರ್ ಮಾಲೀಕರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಅಬಕಾರಿ ಉಪನಿರೀಕ್ಷಕರು ನಾಗರಾಜ್ ತಿಪ್ಪೇಸ್ವಾಮಿ ರಂಗಸ್ವಾಮಿ ಸೇರಿದಂತೆ ಬಾರ್ ಮಾಲೀಕರು ಭಾಗಿಯಾಗಿದ್ದರು