ಚಿತ್ರದುರ್ಗ ಜಿಲ್ಲೆಯಲ್ಲಿ ಇಂದು ಪತ್ರಿಕಾ ಭವನದಲ್ಲಿ ಚಿನ್ಮೂಲಾ ದ್ರಿ ಸಾಹಿತ್ಯ ವೇದಿಕೆ ಹಾಗೂ ಶ್ರೀ ಗಾನಯೋಗಿ ಸಂಗೀತ ಬಳಗ ಚಿತ್ರದುರ್ಗ ಇವರ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಉಪನ್ಯಾಸ,
ತಿಂಗಳ ವಿಶೇಷ ವ್ಯಕ್ತಿ ಪರಿಚಯ ಮತ್ತು ಕವನ ವಾಚನ ಹಾಗೂ ಗೀತಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸವಿತಾ ಸಂಪತ್ ರವರು ಪ್ರಾರ್ಥನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ನಂತರ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಚಿತ್ರದುರ್ಗ ಜಿಲ್ಲೆಯ ಖ್ಯಾತ ವಕೀಲರು ಹಾಗೂ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಗೌರವಾಧ್ಯಕ್ಷ ಬಿ.ಕೆ ರಹಮತ್ ಉಲ್ಲಾ ರವರು ಹಾಗೂ ಇನ್ನಿತರೆ ವೇದಿಕೆ ಮೇಲಿರುವ ಎಲ್ಲ ಗಣ್ಯ ಮಾನ್ಯರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಾಹಿತ್ಯ ವೇದಿಕೆಯ ಅಧ್ಯಕ್ಷ ಡಾ. ಶಫಿಉಲ್ಲಾ ಎಸ್.ಏಚ್ ಇವರು ಪ್ರಾಸ್ತಾವಿಕ ನುಡಿಯಲ್ಲಿ ಸಂಸ್ಥೆಯ ನಡೆದು ಬಂದು ಹಾದಿ ಮತ್ತು ಬೆಳೆವಣಿಗೆ ಸಾಧನೆಯ ಬಗ್ಗೆ ತಿಳಿಸಿದರು ಮತ್ತು ನಮ್ಮ ಸಾಹಿತ್ಯ ವೇದಿಕೆಯು ಅನೇಕ ರೀತಿಯ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಯುವ ಬರಹಗಾರರಿಗೆ ,
ಕವಿಗಳಿಗೆ,ಸಾಹಿತಿಗಳಿಗೆ,ಚಿಂತಕರಿಗೆ, ಸ್ಫೂರ್ತಿಯ ಸೆಲೆಯಾಗಿ ಪ್ರಾಮಾಣಿಕವಾಗಿ ಪ್ರೋತ್ಸಾಹಿಸಿ ಅವರಿಗೆ ಬೆನ್ನೆಲುಬಾಗಿ ನಿಂತು ಅವರನ್ನು ಸಮಾಜದ ಹಾಗೂ ರಾಜ್ಯದ ಜನರಿಗೆ ಪರಿಚಯಿಸಿ ಮುಖ್ಯವಾಹಿನಿಗೆ ತರಲು ನಮ್ಮ ಸಾಹಿತ್ಯ ವೇದಿಕೆಯು ಶ್ರಮಿಸುತ್ತಿದೆ, ಅಲ್ಲದೆ ಈ ಕನ್ನಡ ನಾಡಿನ ಕಲೆ ಮತ್ತು ಸಂಸ್ಕೃತಿ,ಕನ್ನಡ, ನಾಡು ನುಡಿ ನೆಲ,ಜಲ, ಸಂರಕ್ಷಣೆ ಮತ್ತು ಶ್ರೇಯೋಭಿೃದ್ಧಿಗಾಗಿ ನಮ್ಮ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಶಿವಮೂರ್ತಿ.ಟಿ ಕೋಡಿಹಳ್ಳಿ ಸ್ವಾಗತಿಸಿದರು, ಸುಜಾತ ಪ್ರಾಣೇಶ್ ವಂದಿಸಿದರು.

Namma Challakere Local News
error: Content is protected !!