ಚಳ್ಳಕೆರೆ ನ್ಯೂಸ್ :
ಚಳ್ಳಕೆರೆ ನಗರದ ಬನಶ್ರೀ ವೃದ್ಧಾಶ್ರಮದ ವೃದ್ಧರಿಗೆ ಶ್ರೀ “ರಾಮಕೃಷ್ಣರ189ನೇ ಜಯಂತಿ “ಮತ್ತು “ಕರ್ನಾಟಕ ರತ್ನ ಪುನೀತ್ ರಾಜಕುಮಾರ್” ಅವರ ಜನ್ಮದಿನದ ಪ್ರಯುಕ್ತ “ಡಾ.ಭೂಮಿಕ “ಅವರ ನೇತೃತ್ವದಲ್ಲಿ “ಉಚಿತ ವೈದ್ಯಕೀಯ ತಪಾಸಣೆ ಶಿಬಿರ”ವನ್ನು ಹಮ್ಮಿಕೊಳ್ಳಲಾಗಿತ್ತು.

ಈಧೇ ಸಂದರ್ಭದಲ್ಲಿ ನಗರಸಭಾ ಸ್ಥಾಯಿ ಸಮಿತಿ ಸದಸ್ಯರಾದ ನೇತಾಜಿ ಪ್ರಸನ್ನ, ಬನಶ್ರೀ ವೃದ್ಧಾಶ್ರಮದ ಮುಖ್ಯಸ್ಥರಾದ ಮಂಜುಳಮ್ಮ, ಶ್ರೀ ಶಾರದಾಶ್ರಮದ ಭಕ್ತರಾದ ಯತೀಶ್.ಎಂ. ಸಿದ್ದಾಪುರ, ಸಂತೋಷ್, ವಿನೋದ್ ಉಪಸ್ಥಿತರಿದ್ದರು.

ಶ್ರೀ ಶಾರದಾಶ್ರಮದ ಭಕ್ತರಾದ ಶ್ರೀ ವೆಂಕಟೇಶ ಅವರು ಎಲ್ಲರಿಗೂ ಹಣ್ಣನ್ನು ಉಚಿತವಾಗಿ ವಿತರಿಸಿದರು.
[3/18, 4:54 PM] Ramanjaneya Reporter Ramu Reporter: ಚಳ್ಳಕೆರೆ ನ್ಯೂಸ್ :
ಚಳ್ಳಕೆರೆ ನಗರದ ಶ್ರೀ ಎನ್ ಜಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ 2023-2024 ನೇ ಸಾಲಿನ ಪ್ರಥಮ ವರ್ಷದ ಬಿ.ಇಡಿ ಪ್ರಶಿಕ್ಷಣಾರ್ಥಿಗಳ ವಿದ್ಯಾರ್ಥಿ ಸಂಘದ ವಿವಿಧ ಹುದ್ದೆಗಳಿಗೆ ಚುನಾವಣೆ ನಡೆಯಿತು,

ವಿದ್ಯಾರ್ಥಿಗಳಿಂದ ಮತಗಳ ಎಣಿಕೆ ಕಾರ್ಯ ನಡೆಯಿತು. ಫಲಿತಾಂಶದ ನಂತರದ ಸಭಾ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಗಳಾದ ಶ್ರೀ ಮತಿ ಪ್ರಮೀಳ ಮೇಡಮ್ ಮಾತನಾಡಿ-ವಿದ್ಯಾರ್ಥಿ ಸಂಘಕ್ಕೆ ಆಯ್ಕೆಯಾದ ಪ್ರಶಿಕ್ಷಣಾರ್ಥಿಗಳಿಗೆ ತಮ್ಮ ಕರ್ತವ್ಯಗಳ ಬಗ್ಗೆ ಕಿವಿಮಾತು ಹೇಳಿದರು.ಹಿರಿಯ ಉಪನ್ಯಾಸಕರಾದ ಶ್ರೀ ರಾಘವೇಂದ್ರ ನಾಯಕ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಹೇಮಂತರಾಜ ಎಲ್.ಎನ್ ವಹಿಸಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಕೆ.ಬಿ.ರವಿಕುಮಾರ್, ದೊರೆಸ್ವಾಮಿ, ಕಲ್ಲೇಶ,ವಿಶ್ವನಾಥ್, ಶ್ಯಾಮ್ ಸುಂದರ್, ಕಚೇರಿ ಅಧೀಕ್ಷಕರಾದ ವಾಣೆಶ್ರೀ, ಯತೀಶ್.ಎಂ. ಸಿದ್ಧಾಪುರ,ಇತರರು ಹಾಜರಿದ್ದರು.

About The Author

Namma Challakere Local News
error: Content is protected !!