ಚಳ್ಳಕೆರೆ: ಯುವ ಜನತೆ ಮತದಾನ ಸೇರಿದಂತೆ ರಾಜಕೀಯ ವ್ಯವಸ್ಥೆಯಲ್ಲಿ ತಾತ್ಸಾರ ಮನೋಭಾವ ತಾಳುತ್ತಿರುವುದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೊಡಲಿ ಪೆಟ್ಟು ಬಿದ್ದಂತಾಗಿದೆ ಎಂದು ಶ್ರೀ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ ಆಡಳಿತ ಅಧಿಕಾರಿ ಡಿಆರ್ ಪ್ರಮೀಳಾ ಕಳವಳ ವ್ಯಕ್ತಪಡಿಸಿದರು.

ನಗರದ ಶ್ರೀ  ಎನ್ ಜಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ  2023-2024 ನೇ ಸಾಲಿನ ಪ್ರಥಮ ವರ್ಷದ ಬಿ.ಇಡಿ ಪ್ರಶಿಕ್ಷಣಾರ್ಥಿಗಳ ವಿದ್ಯಾರ್ಥಿ ಸಂಘದ ವಿವಿಧ ಹುದ್ದೆಗಳಿಗೆ ಚುನಾವಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಾಲೇಜು ದಿನಗಳಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಚುನಾವಣೆಗಳನ್ನು ಏರ್ಪಡಿಸುವುದರಿಂದ ಚುನಾವಣೆ ಯಾವ ರೀತಿ ನಡೆಯುತ್ತದೆ ಚುನಾವಣಾ ಸಂದರ್ಭದಲ್ಲಿ ಕೈಗೊಳ್ಳುವ ಕ್ರಮಗಳ ಬಗ್ಗೆ ತಿಳುವಳಿಕೆ ಮೂಡತ್ತದೆ ಅಲ್ಲದೆ ನಾಯಕತ್ವದ ಗುಣಗಳನ್ನು ಬಳಸಿಕೊಳ್ಳಲು ಇಂತಹ ಚುನಾವಣೆಗಳು ಸಹಕಾರಿಯಾಗುತ್ತದೆ ಮುಂದಿನ ದಿನಗಳಲ್ಲಿ ಯುವ ಜನತೆ ಯಾವುದೇ ಆಮಿಷಗಳಿಗೆ ಬಲಿಯಾಗದೆ ಮತದಾನ ಮಾಡಿದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳಲು ಸಾಧ್ಯ ಎಂದು ತಿಳಿಸಿದರು.

ಉಪನ್ಯಾಸಕ ರಾಘವೇಂದ್ರ ನಾಯಕ ಮಾತನಾಡಿ ಚುನಾವಣೆಗಳಲ್ಲಿ ರಾಜಕಾರಣಿಗಳು ಆಮಿಷ ಒಡ್ಡುವುದು ಸಹಜ ವಿದ್ಯಾವಂತ ಯುವಕರೇ ಇಂತಹ ಆಮೀಷಗಳಿಗೆ ಬಲಿಯಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಕಾಲೇಜಿನಲ್ಲಿ ಇಂತಹ ವಿದ್ಯಾರ್ಥಿ ಸಂಘಟನೆಗಳು ಚುನಾವಣೆ ಮೂಲಕ ಆಯ್ಕೆಯಾಗಿ ವಿದ್ಯಾರ್ಥಿಗಳ ಹಾಗೂ ಕಾಲೇಜಿನ ಸೇವೆ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಇಲ್ಲಿ ಯಾವುದೇ ವಿದ್ಯಾರ್ಥಿಗಳ ನಡುವೆ ದ್ವೇಷದ ಮನೋಭಾವ ತಾಳದೆ ಇದೊಂದು ಕೇವಲ ಮಾದರಿ ಚುನಾವಣೆ ಯಾಗಿದ್ದು ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಕಾಲೇಜಿನ ವತಿಯಿಂದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಸ್ನೇಹಮಯ ವಾತಾವರಣ ನಿರ್ಮಿಸುವುದು ಎಲ್ಲ ವಿದ್ಯಾರ್ಥಿಗಳ ಕರ್ತವ್ಯವಾಗಿರುತ್ತದೆ ಎಂದು ಕಿವಿಮಾತು ಹೇಳಿದರು.

ನಂತರ ಚುನಾವಣೆ ನಡೆದು ಮತಗಳ ಎಣಿಕೆ ಕಾರ್ಯ ನಡೆಯಿತು.

ಸಂಘದ ಪದಾಧಿಕಾರಿಗಳಾಗಿ ಬಾಲಾಜಿ ,ದಿನೇಶ್ ಕುಮಾರ್, ಶಶಿಕಲಾ, ಶಿವಪ್ಪ ,ತಿಪ್ಪಮ್ಮ,    ರವಿಸ್ವಾಮಿ ,ನಾಗರತ್ನ, ಈಶಪ್ಪ , ಭಾವನಾ ಮೇಘರಾಜ್, ವಿಜಯಶ್ರೀ, ಹೊನ್ನೂರಸ್ವಾಮಿ, ಮುನಿತ, ಅನನ್ಯ, ಮಾರ್ಗರೇಟ್ ,ಪಲ್ಲವಿ, ಆಯ್ಕೆಯಾದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಹೇಮಂತರಾಜ ಎಲ್.ಎನ್ ವಹಿಸಿದ್ದರು.

ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಕೆ.ಬಿ.ರವಿಕುಮಾರ್, ದೊರೆಸ್ವಾಮಿ, ಕಲ್ಲೇಶ,ವಿಶ್ವನಾಥ್, ಶ್ಯಾಮ್ ಸುಂದರ್, ಕಚೇರಿ ಅಧೀಕ್ಷಕರಾದ ವಾಣೆಶ್ರೀ, ಯತೀಶ್.ಎಂ. ಸಿದ್ಧಾಪುರ,ಇತರರು ಹಾಜರಿದ್ದರು.

Namma Challakere Local News
error: Content is protected !!