ಚಳ್ಳಕೆರೆ ನ್ಯೂಸ್ : ಬೆಳೆ ಪರಿಹಾರ ಹಾಗೂ ಬೆಳೆ‌ವಿಮೆ ರೈತರ ಖಾತೆಗೆ ಹಾಕದೆ ಇರುವ ಸರಕಾರದ ವಿರುದ್ಧ
ಮಾ‌.18 ರಂದು ತಾಲೂಕು ಕಛೇರಿಗೆ ಮುತ್ತಿಗೆ ಎಂದು ರೈತ ಸಂಘದ ತಿರ್ಮಾನಕ್ಕೆ ಚಿತ್ರದುರ್ಗ ಜಿಲ್ಲಾಧಿಕಾರಿಗಳ‌ ಆದೇಶದ ಮೇರೆಗೆ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಕೈಬಿಡಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಹೇಳಿದರು.

ಅವರು ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕಿನ‌ ವಿವಿಧ ರೈತ ಸಂಘಟನೆಗಳು ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ರೈತರು ಒಂದು ಅವಕಾಶವನ್ನು ಅಧಿಕಾರಿಗಳಿಗೆ ಕೊಟ್ಟಿದ್ದಾರೆ ಇದೇ
ಮಾರ್ಚ್. 22 ರ ಒಳಗೆ ಬೆಳೆವಿಮೆ
ಹಣವನ್ನು ರೈತರ ಖಾತೆಗೆ ಜಮೆ ಮಾಡದಿದ್ದರೆ ‌ ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೆವೆ ಎಂದಿದ್ದಾರೆ.

ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ,
ಬೆಳೆ ವಿಮೆ
ಕಂಪನಿ ಅಧಿಕಾರಿಗಳು ಭರವಸೆ ನೀಡಿದ್ದರಿಂದ ಪ್ರತಿಭಟನೆಯನ್ನು
ಹಿಂಪಡೆಯಲಾಗಿದೆ,
ಮಾ. I8 ರ ಒಳಗೆ ರೈತರ ಖಾತೆಗೆ ಬೆಳೆ ವಿಮೆ ಹಾಕದಿದ್ದರೆ ಮಾ.18 ರಂದು
ತಾಲೂಕು ಕಚೇರಿಗೆ ಬೀಗ ಜಡಿದು ಪ್ರತಿಭನೆ ಮಾಡುವುದಾಗಿ ಎಚ್ಚರಿಕೆ
ನೀಡಲಾಗಿತ್ತು.

ಜಿಲ್ಲಾಧಿಕಾರಿ ವೆಂಕಟೇಶ್ ಬೆಳೆವಿಮೆ ಅಧಿಕಾರಿ, ಕೃಷಿ, ತೋಟಗಾರಿಕೆ
ಹಾಗೂ ರೈತ ಮುಖಂಡರ ಸಭೆ ಕರೆದು ಸಭೆಯಲ್ಲಿ ರೈತರು ಕಟ್ಟಿದ
ಬೆಳೆವಿಮೆಯು ರೈತರ ಖಾತೆಗೆ ಹಾಕದಿದ್ದರೆ ಪ್ರಕರಣ
ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರಿಂದ ಬೆಳೆ ವಿಮೆ
ಅಧಿಕಾರಿಗಳು ಇನ್ನು ಹತ್ತುದಿನಗೊಳಗೆ ರೈತರ ಖಾತೆಗೆ ಹಾಕಲಾಗುವುದು
ಎಂದು ಭರವಸೆ ನೀಡಿದ್ದಾರೆ ಆದ್ದರಿಂದ ಪ್ರತಿಭಟನೆಯನ್ನು
ಹಿಂಪಡೆದಿದ್ದು, ಒಂದುವೇಳೆ ಬೆಳೆ ವಿಮೆ ರೈತರ ಖಾತೆಗೆ ಜಮೆ
ಮಾಡದಿದ್ದರೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಹ
ಪ್ರತಿಭಟನೆ ಮಾಡಲಾಗುವುದು ಹಾಗೂ ಗ್ರಾಮಗಳಿಗೆ ಚುನಾವಣೆ
ಪ್ರಚಾರಕ್ಕೆ ಯಾವುದೆ ಪಕ್ಷದ ಅಭ್ಯರ್ಥಿಗಳಿಗೆ ಬಿಟ್ಟುಕೊಳ್ಳದೆ ಚುನಾವಣೆ
ಬಹಿಷ್ಕರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಕೆ.ಪಿ.ಭೂತಯ್ಯ ರೆಡ್ಡಿಹಳ್ಳಿ ವೀರಣ್ಣ ಸರಕಾರಕಗಳಿಗೆ
ಎಚ್ಚರಿಕೆ ನೀಡಿದ್ದಾರೆ.

ರೈತ ಮುಂಡರಾದ , ಶ್ರೀಕಂಠಮೂರ್ತಿ, ತಿಪ್ಪೇಸ್ವಾಮಿ, ನೀಲಕಂಠಪ್ಪ,
ಗುರುಮೂರ್ತಿ, ಹನುಮಂತರಾಯ, ಚಂದ್ರಣ್ಣ ಹಂಪಣ್ಣ, ಜೈಯಣ್ಣ
ಇತರರಿದ್ದರು.

Namma Challakere Local News
error: Content is protected !!