ಚಳ್ಳಕೆರೆ ನ್ಯೂಸ್ : ಹೆಚ್ ಪಿಪಿಸಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರ ಹುದ್ದೆ ತೆರವಾದ ಸ್ಥಾನಕ್ಕೆ ಜೇಷ್ಠತಾ ಅಧಾರದ ಮೇಲೆ ಪ್ರಬಾರ ಪ್ರಾಂಶುಪಾಲರಾಗಿ ಬಿಎಸ್ ಮಂಜುನಾಥ್ ಅಧಿಕಾರ ಸ್ವೀಕರಿಸಿದರು.
ಚಳ್ಳಕೆರೆ ನಗರದ ಹೆಚ್ ಪಿಪಿಸಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದ ಹಲವು ದಿನಗಳಿಂದ ಮೌಖಿಕ ಆದೇಶದ ಮೇರೆಗೆ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ ರಂಗಪ್ಲ ಅವರು ಜಗಲೂರು ಕಾಲೇಜ್ ಗೆ ವರ್ಗಾವಣೆ ಆದ ತರುವಾಯ ಖಾಲಿಯಾದ ಹುದ್ದೆಗೆ ಪ್ರಬಾರ ಹಾಗಿ ಬಿ.ಎಸ್.ಮಂಜುನಾಥ್ ಅಧಿಕಾರ ವಹಿಸಿಕೊಂಡಿದ್ದಾರೆ.
ಇನ್ನೂ ಸರಕಾರಿ ನೌಕರರು ಹಾಗು ನಾಯಕ ಸಮುದಾಯದ ಬಂಧುಗಳು ಮಂಜುನಾಥ್ ರವರನ್ನು ಆತ್ಮೀಯವಾಗಿ ಸನ್ಮಾನಿಸಿ ಅಭಿನಂಧಿಸಿದ್ದಾರೆ.
ಇನ್ನೂ ಕಾಲೇಜ್ ಗೆ ಮೂಲ ಭೂತ ಸೌಲಭ್ಯ ಹಾಗೂ ವಿದ್ಯಾರ್ಥಿಗಳು ಪಾಠ ಪ್ರವಚನಗಳ ಬಗ್ಗೆ ಹೆಚ್ಚಿನ ಒತ್ತುನೀಡಿ, ಕಾಲೇಜ್ ನ್ನು ಮಾದರಿ ಕಾಲೇಜ್ ನ್ನಾಗಿ ಮಾಡಲು ಕನಸು ಕಂಡಿರುವೆ, ಎಂದು ನೂತನವಾಗಿ ಅಧಿಕಾರ ಸ್ವೀಕರಿಸಿದ ಮಂಜುನಾಥ್ ಹೇಳಿದರು.
ಇದೇ ಸಂಧರ್ಭದಲ್ಲಿ ಕಸಾಪ ತಾಲೂಕು ಅಧ್ಯಕ್ಷ ವೀರಭದ್ರಸ್ವಾಮಿ, ಕೆಇಬಿ ನಾಗರಾಜ್, ಎಲ್ ಐಸಿ ತಿಪ್ಪೇಸ್ವಾಮಿ, ಸಿಟಿ ವೀರೇಶ್, ಮಹಾಂತೇಶ್, ತಿಪ್ಪೇಸ್ವಾಮಿ, ಸುರೇಶ್, ಉಪನ್ಯಾಸಕ ರಘುನಾಥ್,
ಗ್ರಂಥಲಾಯ ಪಾಪಣ್ಣ, ಇತರರು ಹಾಜರಿದ್ದರು.